Last Updated:
ಕನ್ನಡದಲ್ಲಿ ಮೂರು ಸಿನಿಮಾ ಸದ್ದು ಮಾಡುತ್ತಿವೆ. ಬೇಲ್, ಪ್ರೇಮದ ಊರಲಿ , ಸಿಟಿ ಲೈಟ್ಸ್ ಜನರ ಪ್ರೀತಿಯನ್ನ ಹೆಚ್ಚು ಹೆಚ್ಚು ಪಡೆದುಕೊಂಡಿವೆ. ಈ ಬಗ್ಗೆ ಶಿವಣ್ಣನ ಮಾತನಾಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಿಲ್ Exclusive ಕಿರು ಸಂದರ್ಶನದಲ್ಲಿ ಇನ್ನು ಕೆಲವು ವಿಷಯ ಹಂಚಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಥಿಯೇಟರ್ ವಿಸಿಟ್ ಮಾಡ್ತಿದ್ದಾರೆ. ಬೇಲ್ ಸಿನಿಮಾ (Bail Movie) ರಿಲೀಸ್ ಆದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಅಪ್ಸರ ಥಿಯೇಟರ್‌ಗೂ (Apsara Theater) ಬಂದಿದ್ದರು. ಜನರು ತೋರಿದ ಪ್ರೀತಿಯನ್ನು ಸ್ವೀಕರಿಸಿದರು. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ವಿಶೇಷವಾಗಿಯೇ ಮಾತನಾಡಿದರು. ಈ ಸಮಯದಲ್ಲಿ ಸದ್ಯದ ಮೂರು ಹಿಟ್ ಚಿತ್ರಗಳ (Three HIt Movies) ಕುರಿತು ಮಾತನಾಡಿದರು. ಏನ್ ಹೇಳಿದರು ಅನ್ನೋದು ಇಲ್ಲಿದೆ ಓದಿ.
ಕನ್ನಡದಲ್ಲಿ ಸಿಟಿ ಲೈಟ್ಸ್, ಪ್ರೇಮದ ಊರಲಿ, ಬೇಲ್ ಚಿತ್ರ ಓಡ್ತಿವೆ. ಈ ಚಿತ್ರಗಳನ್ನ ಜನ ಅಷ್ಟೆ ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದಾರೆ.
ಈ ಸಮಯದಲ್ಲಿಯೇ ಶಿವಣ್ಣ ಥಿಯೇಟರ್ ವಿಸಿಟ್ ಮಾಡ್ತಿದ್ದಾರೆ. ಹಾಗೆ ಈ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡದಲ್ಲಿ ಮೂರು ಸಿನಿಮಾಗಳು ಚೆನ್ನಾಗಿ ಹೋಗ್ತಿವೆ.
ಬೇಲ್ ಚಿತ್ರದಲ್ಲಿ ಸಾಕಷ್ಟು ವಿಷಯ ಇದೆ. ಅದನ್ನ ಪವನ್ ಒಡೆಯರ್ ತುಂಬಾ ಚೆನ್ನಾಗಿ ಹೇಳಿದ್ದಾರೆ. ಪಾತ್ರದ ಏಜ್‌ಗೆ ತಕ್ಕನಾಗಿಯೇ ಹೇಗೆ ಹೇಳ್ಬೇಕೋ ಹಾಗೆ ಹೇಳಿದ್ದಾರೆ.
ಪವನ್ ಒಡೆಯರ್ ಅವರಿಗೆ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ. ಹಾಗೆ ಮೀಸೆ ವಿಚಾರ ಅಂತ ಬಂದ್ರೆ, ನಿವೃತ್ತ ಪೊಲೀಸ್ ಆಫೀಸರ್ ಪಾತ್ರವೇ ಇದಾಗಿದೆ. ಹಾಗಾಗಿಯೇ ಈ ಮೀಸೆ ತುಂಬಾನೆ ಚೆನ್ನಾಗಿ ಕಾಣಿಸುತ್ತಿದೆ. ಬಹುಶಃ ನನ್ನ ಏಜ್ ಕೂಡ ಇರಬಹದು ಅಂತಲೂ ಹೇಳಿದ್ದಾರೆ.
ಅಣ್ಣಾವ್ರ ಮೇಲಿನ ಪ್ರೀತಿಯಿಂದಲೇ ಜನರ ಪ್ರೀತಿ ಇನ್ನು ಹಾಗೆ ಇದಿಯೋ? ಅಥವಾ ಶಿವಣ್ಣನ ಸಿನಿಮಾಗಳಿಂದಲೇ ಆ ಪ್ರೀತಿ ಇದಿಯೋ ಅನ್ನುವ ಪ್ರಶ್ನೆಗೂ ಶಿವಣ್ಣ ಉತ್ತರ ಕೊಟ್ಟಿದ್ದಾರೆ.
ನಮ್ಮ ಮೇಲಿನ ಜನರ ಪ್ರೀತಿ ಕಡಿಮೆ ಆಗದೇ ಇರೋದಕ್ಕೆ ಕಾರಣ ಒಂದೇ ಇದೆ. ಅದು ಬೇರೆ ಯಾರೋ ಅಲ್ಲ. ಅಣ್ಣಾವ್ರ ಮೇಲಿನ ಜನರ ಪ್ರೀತಿನೇ ನಮಗೂ ಸಾಗಿ ಬಂದಿದೆ ಅಂತಲೇ ಹೇಳಿದ್ದಾರೆ.
ಹುಬ್ಬಳ್ಳಿಯ ಅಪ್ಸರ ಥಿಯೇಟರ್ ಅಲ್ಲಿ ಬೇಲ್ ಚಿತ್ರ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಥಿಯೇಟರ್ ವಿಸಿಟ್ ಬಂದಿದ್ದರು. ಡೈರೆಕ್ಟರ್ ಪವನ್ ಒಡೆಯರ್ ಹಾಗೂ ನಟ ದೀಕ್ಷಿತ್ ಶೆಟ್ಟಿ ಆಗಮಿಸಿದ್ದರು.
ಇವರು ಜನರು ತೋರಿದ ಪ್ರೀತಿಯನ್ನ ಸ್ವೀಕರಿಸಿದರು. ಈ ವೇಳೆ ಇವರನ್ನ ಕುದುರೆ ಸಾರೋಟ್ ಅಲ್ಲಿಯೇ ಮೆರವಣಿಗೆ ಕೂಡ ಮಾಡಿದ್ದರು. ಶಿವರಾಜ್ ಕುಮಾರ್ ಅಭಿಮಾನಿಗಳು ಈ ಒಂದು ವ್ಯವಸ್ಥೆ ಮಾಡಿದ್ದರು.
ಶಿವರಾಜ್ ಕುಮಾರ್ ಅವರನ್ನ ನೋಡಲು ಸಾಕಷ್ಟು ಜನ ಆಗಮಿಸಿದ್ದರು. ಶಿವಣ್ಣನನ್ನ ನೋಡಿ ತುಂಬಾನೆ ಖುಷಿಪಟ್ಟರು. ಈ ಸಮಯದಲ್ಲಿ ಶಿವರಾಜ್ ಕುಮಾರ್ ಸಿನಿಮಾಗಳ ಹಾಡನ್ನು ಇಲ್ಲಿ ಪ್ಲೇ ಮಾಡಲಾಗಿತ್ತು ಅಂತಲೂ ಹೇಳಬಹುದು.














