ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 37 ರನ್ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಜಸ್ಟೀನ್ ಗ್ರೀವ್ಸ್ ಗಾಯದಿಂದ ಹೊರಬಿದ್ದ ಕಾರಣದಿಂದ ಆರಂಭಿಕನಾಗಿ ಕಣಕ್ಕಿಳಿದಿದ್ದ ಕೇಸಿ ಕಾರ್ಟಿ ಕೇವಲ 10 ರನ್ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಒಂದಾದ ನಾಯಕ ಶಾಯ್ ಹೋಪ್ ಹಾಗೂ ಕ್ಯಾಂಪ್ಬೆಲ್ 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 79 ಎಸೆತಗಳಲ್ಲಿ 110 ರನ್ಗಳ ಶತಕದ ಜೊತೆಯಾಟ ನೀಡಿದರು.
ಆರಂಭದಿಂದಲೂ ಅಬ್ಬರಿಸಿದ ಕ್ಯಾಂಪ್ಬೆಲ್ ಕೇವಲ 65 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಭಾರತದ ವಿರುದ್ಧ ಏಕದಿನ ಮಾದರಿಯಲ್ಲಿ ವೇಗದ ಶತಕ ಸಿಡಿಸಿದ ಕೆರಿಬಿಯನ್ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು. ಕ್ಯಾಂಪ್ಬೆಲ್ಗೂ ಮುನ್ನ ಈ ದಾಖಲೆ ರಿಚರ್ಡ್ ಪೊವೆಲ್ ಹೆಸರಿನಲ್ಲಿತ್ತು. 1999ರಲ್ಲಿ ಸಿಂಗಾಪುರದಲ್ಲಿ ನಡೆದಿದ್ದ ಕೋಕೋ ಕೋಲಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿಚರ್ಡ್ ಕೇವಲ 72 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು. 65 ಎಸೆತಗಳಲ್ಲಿ ಶತಕ ಸಿಡಿಸಿದ ಕ್ಯಾಂಪ್ಬೆಲ್ 68 ಎಸೆತಗಳಲ್ಲಿ 101 ರನ್ಗಳಿಸಿ ಔಟ್ ಆದರು. ಅವರ ಇನ್ನಿಂಗ್ಸ್ನಲ್ಲಿ 9 ಬೌಂಡರಿ, 5 ಸಿಕ್ಸರ್ಗಳಿದ್ದವು.
• ಜಾನ್ ಕ್ಯಾಂಪ್ಬೆಲ್ – 65 ಎಸೆತಗಳು (ಗುವಾಹಟಿ, 2026)
• ರಿಕಾರ್ಡೊ ಪೊವೆಲ್ – 72 ಎಸೆತಗಳು (ಸಿಂಗಾಪುರ, 1999)
• ಮರ್ಲಾನ್ ಸ್ಯಾಮ್ಯುಯೆಲ್ಸ್ – 73 ಎಸೆತಗಳು (ವಿಜಯವಾಡ, 2002)
• ಶಿಮ್ರಾನ್ ಹೆಟ್ಮೆಯರ್ – 74 ಎಸೆತಗಳು (ಗುವಾಹಟಿ, 2018)
• ಶಿಮ್ರಾನ್ ಹೆಟ್ಮೆಯರ್ -85 ಎಸೆತಗಳು (ಚೆನ್ನೈ,2019)
ಇನ್ನು ಏಕದಿನ ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿರುವ ವಿಶ್ವದಾಖಲೆ ಲೆಜೆಂಡರಿ ಬ್ಯಾಟರ್ ಬ್ರಿಯಾನ್ ಲಾರಾ ಹೆಸರಿನಲ್ಲಿದೆ. ಲಾರಾ 1999ರಲ್ಲಿ ಡಾಕಾದಲ್ಲಿ ಬಾಂಗ್ಲಾದೇಶದ ವಿರುದ್ಧ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದರು. ಕ್ಯಾಂಪ್ಬೆಲ್ 65 ಎಸೆತಗಳಲ್ಲಿ ಶತಕ ಸಿಡಿಸಿ ಈ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.
• 45 – ಬ್ರಿಯಾನ್ ಲಾರಾ vs ಬಾಂಗ್ಲಾದೇಶ, ಢಾಕಾ, 1999
• 55 – ಕ್ರಿಸ್ ಗೇಲ್ vs ಇಂಗ್ಲೆಂಡ್, ಸೇಂಟ್ ಜಾರ್ಜ್ಸ್, 2019
• 61 – ಎವಿನ್ ಲೂಯಿಸ್ vs ಶ್ರೀಲಂಕಾ, ಪಲ್ಲೆಕೆಲೆ, 2024
• 63 – ನಿಕೋಲಸ್ ಪೂರನ್ vs ನೆದರ್ಲ್ಯಾಂಡ್ಸ್, ಹರಾರೆ, 2023
• 65 – ಜಾನ್ ಕ್ಯಾಂಪ್ಬೆಲ್ vs ಭಾರತ, ಗುವಾಹಟಿ, 2026
• 66 – ಶಾಯ್ ಹೋಪ್ vs ನ್ಯೂಜಿಲೆಂಡ್, ನೇಪಿಯರ್, 2025













