IND U19 vs AUS U19: ಕ್ಯಾಪ್ಟನ್ ರೈಚಂದಾನಿ ಭರ್ಜರಿ ಶತಕ! ಆಸ್ಟ್ರೇಲಿಯಾ U19 ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ | ಕ್ರೀಡಾ ಸುದ್ದಿ | ACTPnews

ಭಾರತ  U19 vs ಆಸ್ಟ್ರೇಲಿಯಾ U19


Last Updated:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು 254 ರನ್​ಗಳಿಗೆ ಕಟ್ಟಿಹಾಕಿದ ಭಾರತ ತಂಡ, 254 ರನ್​ಗಳ ಗುರಿಯನ್ನ 41.2 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಸರಣಿಯನ್ನ 3-0ಯನ್ನ ಕ್ಲೀನ್ ಸ್ವೀಪ್ ಸಾಧಿಸಿತು.

ಭಾರತ  U19 vs ಆಸ್ಟ್ರೇಲಿಯಾ U19
ಭಾರತ U19 vs ಆಸ್ಟ್ರೇಲಿಯಾ U19

ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ಅಂಡರ್-19 ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಯೂತ್ ಏಕದಿನ (Youth ODI) ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು 254 ರನ್​ಗಳಿಗೆ ಕಟ್ಟಿಹಾಕಿದ ಭಾರತ ತಂಡ, 254 ರನ್​ಗಳ ಗುರಿಯನ್ನ 41.2 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಸರಣಿಯನ್ನ 3-0ಯನ್ನ ಕ್ಲೀನ್ ಸ್ವೀಪ್ ಸಾಧಿಸಿತು.

ಭಾರತೀಯರ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ

ಟಾಸ್ ಗೆದ್ದ ಆಸೀಸ್ ನಾಯಕ ಜ್ಯಾಕ್ ಜೋಸ್ನೆಕ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ಕಟ್ಟುನಿಟ್ಟಾದ ಬೌಲಿಂಗ್ ಪ್ರದರ್ಶಿಸಿದ ಭಾರತೀಯ ಬೌಲರ್‌ಗಳು ಪ್ರವಾಸಿ ಪಡೆಗೆ ದೊಡ್ಡ ಮೊತ್ತ ಗಳಿಸಲು ಅವಕಾಶ ನೀಡಲಿಲ್ಲ. ಆಸ್ಟ್ರೇಲಿಯಾ ತಂಡವು 49.3 ಓವರ್‌ಗಳಲ್ಲಿ 254 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮನಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ತಲಾ 3 ವಿಕೆಟ್ ಪಡೆದು ಆಸೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕಾವ್ಯ ಪಟೇಲ್ ಮತ್ತು ಆರ್ಯನ್ ಸಲವ್ಸಾನಿ ತಲಾ 1 ವಿಕೆಟ್ ಪಡೆದರು.

ಶತಕ ಸಿಡಿಸಿ ಅಬ್ಬರಿಸಿದ ನಾಯಕ ರೈಚಂದಾನಿ

255 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಕೇವಲ 41.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿ ವಿಜಯದ ನಗೆ ಬೀರಿದೆ. ಆರಂಭಿಕ ಆಟಗಾರ ಲಕ್ಷ್ಯ ರಾಯ್​ಚಂದಾನಿ ಬಾರಿಸಿದ ಆಕರ್ಷಕ ಶತಕ (106 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 110) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜವಾಬ್ದಾರಿಯುತ ಆಟದಿಂದಾಗಿ ಭಾರತ ಸುಲಭವಾಗಿ ಗುರಿ ತಲುಪಿತು. ಆರ್ಯವೀರ್ ಸೆಹ್ವಾಗ್ 34, ಕುಶಾಗ್ರ ಓಜಾ 53 ಎಸೆತಗಳಲ್ಲಿ 45, ರಜತ್ ಭಘೇಲ್ 34 ಎಸೆತಗಳಲ್ಲಿ ಅಜೇಯ 44 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿದಾಟಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed