Darshan-Pradosh: ಜೈಲಲ್ಲಿ ಫುಲ್ ಟೈಟ್​, ನನಗೆ ಮಾತ್ರ ಈ ಶಿಕ್ಷೆ ಯಾಕೆ? ಜಡ್ಜ್​ ಮುಂದೆ ಪ್ರದೋಷ್​ ಸ್ಪೋಟಕ ಹೇಳಿಕೆ | | ACTPnews

News18


Last Updated:

ಎರಡು-ಮೂರು ದಿನಗಳಿಂದ ಸಡನ್ ಆಗಿ ಈ ರೀತಿ ಪ್ರಾರಂಭಿಸಿದ್ದಾರೆ. ನನಗೆ ಮಾತ್ರ ಈ ಶಿಕ್ಷೆ ಯಾಕೆ? ಎಂದು ಜಡ್ಜ್​ ಮುಂದೆ ಆರೋಪಿ ಪ್ರದೋಷ್ ಹೊಸ ಮನವಿ ಮಾಡಿದ್ದಾರೆ.

News18
News18

ಬೆಂಗಳೂರು (ಸೆ.16): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಆಗಿರೋ ಪ್ರದೋಷ್‌ ಜೈಲಿನಲ್ಲಿ ಕಳ್ಳಾಟವಾಡಿರುವುದು ಬೆಳಕಿಗೆ ಬಂದಿದೆ. ನಿಯಮಗಳನ್ನು ಮೀರಿ ಜೈಲಿನಿಂದ 4ನೇ ವ್ಯಕ್ತಿಗೆ ಕರೆ ಮಾಡಿ ಪ್ರದೋಷ್‌ (Pradosh) ಸಿಕ್ಕಿಬಿದ್ದು ಕೇಸ್​ ಕೂಡ ದಾಖಲಾಗಿದೆ. ಈ ಕೇಸ್​​ ಇದೀಗ ಪ್ರದೋಷ್​​ಗೆ ಸಂಕಷ್ಟ ತಂದೊಡ್ಡಿದ್ದು, ಮಾಫಿ ಸಾಕ್ಷಿ ಆದೇಶ ಮುಂದೂಡುವಂತೆ ದರ್ಶನ್ (Darshan) ಪರ ವಕೀಲರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ವೇಳೆ ಪ್ರದೋಷ್​ ಜಡ್ಜ್​ ಮುಂದೆ ಕೆಲ ವಿಚಾರಗಳನ್ನ ಬಾಯ್ಬಿಟ್ಟಿದ್ದು, ನನಗೆ ಯಾಕೆ ಹಿಂಗೆ ಅಂತ ಅಳಲು ತೋಡಿಕೊಂಡಿದ್ದಾರೆ.

‘2-3 ದಿನಗಳಿಂದ ಹೊಸ ಬೆಳವಣಿಗೆ ಆಗ್ತಿದೆ’

ತನ್ನ ಮೇಲೆ ದಾಖಲಾಗಿರೋ ಕೇಸ್ ಬಗ್ಗೆ ಮಾತಾಡಿದ ಆರೋಪಿ ಪ್ರದೂಷ್, ನನಗೆ ಐಡಿ ಕೊಟ್ಟಿರೋದೆ ಜೈಲಿನ ಅಥಾರಿಟಿ. ಈಗ ಅವರು ಕ್ರಿಯೇಟ್ ಮಾಡಿರೋ ಐಡಿ ಸಮಸ್ಯೆ ಇದೆ ಅಂತಿದ್ದಾರೆ.  ಎರಡು ತಿಂಗಳಿಂದ ಯಾವುದೇ ಸಮಸ್ಯೆ ಇಲ್ಲ. ಈಗ ಸಡನ್ ಆಗಿ ಐಡಿ ಸಮಸ್ಯೆ ಅಂತಾರೆ. ಫ್ಯಾಮಿಲಿ ಜೊತೆ ಮಾತಾಡುವಂತಿಲ್ಲ ಅಂತಿದ್ದಾರೆ. ಜೈಲಿನಲ್ಲಿ ಕಳೆದು ಎರಡು ಮೂರು ದಿನಗಳಿಂದ ಕೆಲವು ಬೆಳವಣಿಗೆ ನಡೀದೆ ಎಂದು ಪ್ರದೋಷ್​ ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಆಗ ಲೀಗಲ್​ ಈಗ ಅಕ್ರಮ ಹೇಗಾಯ್ತು?

ಇದರ ಬಗ್ಗೆ ಪ್ರತ್ಯೇಕ ತನಿಖೆ ಆಗುತ್ತೆ ಎಂದು ಜಡ್ಜ್ ಸುಜಾತ ಎಂ ಸಾಂಬ್ರಾಣಿ ತಿಳಿಸಿದ್ದಾರೆ. ಕೋರ್ಟ್ ಮುಂದೆ ಕೆಲ ಪ್ರಮುಖ ಹೇಳಿಕೆ ನೀಡ್ತಿರೋ ಪ್ರದೋಷ್,  ನನಗೆ ಸಿಸ್ಟಂ ಆ್ಯಕ್ಸಸ್ ಇಲ್ಲ ಅವರೇ ಐಡಿ ಮಾಡಿಕೊಟ್ಟಿದ್ದು,  ಬೇರೆಯವರು ಮಾಡ್ತಾ ಇದ್ದಾರೆ, ನನಗೆ ಮಾತ್ರ ಹೀಗೆ ಮಾಡ್ತಾ ಇದ್ದಾರೆ. ಜೈಲು ಅಧಿಕಾರಿಗಳೇ ನನಗೆ ಐಡಿ ಮಾಡಿಕೊಟ್ಟಿರುವುದು , ನಾನು ಲೀಗಲ್ ಆಗಿಯೇ ಬಳಸುತ್ತಿದ್ದೇನೆ. ಈಗ ಸಡನ್ ಆಗಿ ಬಂದು ಇದು ಅಕ್ರಮ ಅಂತ ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ.

ನನಗೆ ಮಾತ್ರ ಈ ಶಿಕ್ಷೆ ಯಾಕೆ?

ಅವರೇ ಲೀಗಲ್ ಅಂತ ಕೊಟ್ಟಿದ್ದು, ನಾನು ಲೀಗಲ್ ಆಗಿಯೇ ಬಳಸುತ್ತಿದ್ದೇನೆ. ಈಗ ಅವರೇ ಬಂದು ಅಕ್ರಮ ಅಂತ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ನನ್ನನ್ನು ಒಂದು ತಿಂಗಳು ಲಾಕ್‌ಅಪ್‌ನಲ್ಲಿ ಇಟ್ಟಿದ್ದಾರೆ. ನನ್ನನ್ನ ಹೊರಗೆ ಬರಲು ಬಿಡುತ್ತಿಲ್ಲ. ಯಾವುದೇ ಟಾಕಿಂಗ್ ಫೆಸಿಲಿಟಿ ಇಲ್ಲ. ಬೇರೆ ಯಾವುದೇ ಸೌಲಭ್ಯವೂ ಇಲ್ಲ. ಎರಡು-ಮೂರು ದಿನಗಳಿಂದ ಸಡನ್ ಆಗಿ ಈ ರೀತಿ ಪ್ರಾರಂಭಿಸಿದ್ದಾರೆ. ನನಗೆ ಮಾತ್ರ ಈ ಶಿಕ್ಷೆ ಯಾಕೆ? ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಜಡ್ಜ್​ ಮುಂದೆ ಪ್ರದೋಷ್ ಅಳಲು ತೋಡಿಕೊಂಡಿದ್ದಾರೆ.

ಐಡಿಯನ್ನು ಜೈಲಾಧಿಕಾರಿಗಳೇ ಕೊಡ್ತಾರೆ

ಅದನ್ನೇ ನಾನು ಪ್ರಶ್ನಿಸುತ್ತಿದ್ದೇನೆ ಎಲ್ಲರೂ ಇದನ್ನು ಬಳಸುತ್ತಿದ್ದಾರೆ. ಜೈಲಿನಲ್ಲಿ ಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ( ಕೇಸ್ ಯಾವಾಗ, ನೆಕ್ಸ್ಟ್ ಹಿಯರಿಂಗ್ ಡೇಟ್ ತಿಳಿಯಲು) ಒಂದು ಐಡಿ ಕ್ರಿಯೇಟ್ ಮಾಡಿ ಕೊಡ್ತಾರೆ. ಜೊತೆಗೆ ಅದರಲ್ಲಿ ಯಾರು ಕರೆ ಮಾಡಿದ್ರು, ಆರೋಪಿ ಯಾರಿಗೆ ಕರೆ ಮಾಡಿದ್ದ ಅಂತ ಎಲ್ಲವೂ ರೆಕಾರ್ಡ್ ಆಗುತ್ತೆ. ಈ ಐಡಿಯನ್ನು ಜೈಲಾಧಿಕಾರಿಗಳೇ ಕೊಡ್ತಾರೆ ಎಂದು ಪ್ರದೋಷ್ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports