Last Updated:
Rahul Gandhi: I.N.D.I.A. ಮೈತ್ರಿಕೂಟದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಕುರಿತು ಇನ್ನೂ ಯಾವುದೇ ಚರ್ಚೆಯೇ ನಡೆದಿಲ್ಲ. ಆದ್ದರಿಂದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿರುವುದು ಸರಿಯಲ್ಲ ಅಂತ ಎಂಎ ಬೇಬಿ ಹೇಳಿದ್ದಾರೆ.
ದೆಹಲಿ: 2029ರ ಪ್ರಧಾನಿ ಅಭ್ಯರ್ಥಿ (Prime Ministerial candidate) ಘೋಷಣೆ ಬಗ್ಗೆ I.N.D.I.A. ಒಕ್ಕೂಟದಲ್ಲೇ ಭಿನ್ನಮತ ಕೇಳಿ ಬಂದಿದೆ. ಸಿಪಿಐ(ಎಂ)ನ ಸಾಮಾನ್ಯ ಕಾರ್ಯದರ್ಶಿ ಎಂಎ ಬೇಬಿ (MA Baby) ಅವರು ಕಾಂಗ್ರೆಸ್ (Congress) ಪಕ್ಷವು 2029ರ ಲೋಕಸಭಾ ಚುನಾವಣೆಗೆ (Lok Sabha Election) ರಾಹುಲ್ ಗಾಂಧಿಯನ್ನು (Rahul Gandhi) I.N.D.I.A. ಮೈತ್ರಿಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮುಂದಿಡುತ್ತಿರುವುದನ್ನು “ಅಕಾಲಿಕ ಮತ್ತು ಅನಗತ್ಯ” ಎಂದು ಟೀಕಿಸಿದ್ದಾರೆ. ಮೈತ್ರಿಕೂಟದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಕುರಿತು ಇನ್ನೂ ಯಾವುದೇ ಚರ್ಚೆಯೇ ನಡೆದಿಲ್ಲ. ಆದ್ದರಿಂದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.














