Last Updated:
ಇ-ಕಾಮರ್ಸ್ ಕಂಪನಿ ಅಮೆಜಾನ್ಗೆ ಸೇರಿದ ಸರಕು ವಿಮಾನ ಅಪಘಾತಕ್ಕೀಡಾಗಿದೆ. ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಇದರಿಂದ ಐದು ಜನರು ದುರಂತವಾಗಿ ಸಾವನ್ನಪ್ಪಿದರೆ, ಇತರ ಮೂವರು ಗಾಯಗೊಂಡಿದ್ದಾರೆ.
ಇ-ಕಾಮರ್ಸ್ ಕಂಪನಿ (E-Commerce) ಅಮೆಜಾನ್ಗೆ ಸೇರಿದ ಸರಕು ವಿಮಾನ (Cargo Plane) ಅಪಘಾತಕ್ಕೀಡಾಗಿದೆ. ಅಮೆರಿಕದ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅಪಘಾತ ಸಂಭವಿಸಿದೆ. ಅಮೆಜಾನ್ ಸರಕು ವಿಮಾನ (ಬೋಯಿಂಗ್ 767-300) ರನ್ವೇಯಿಂದ ಜಾರಿ ರಸ್ತೆಗೆ ಇಳಿದಿದೆ. ಪೋರ್ಟೊ ರಿಕೊದ ಸ್ಯಾನ್ ಜುವಾನ್ನಿಂದ ಹಾರಿ ಬಂದ ಈ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ವಾಹನಗಳಿಗೆ ಡಿಕ್ಕಿ ಹೊಡೆದು ಭಾರಿ ಬೆಂಕಿ ಕಾಣಿಸಿಕೊಂಡಿದೆ.














