Last Updated:
ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (CAB) ಅವರ ನಿಜವಾದ ವಯಸ್ಸು ಮತ್ತು ಸಲ್ಲಿಸಿದ ಪ್ರಮಾಣಪತ್ರಗಳ ನಡುವೆ 27 ತಿಂಗಳ ವ್ಯತ್ಯಾಸವಿದೆ ಎಂದು ಕಂಡುಹಿಡಿದಿದೆ. ಜನನ ಪ್ರಮಾಣಪತ್ರದಲ್ಲಿ ಹುಟ್ಟಿದ ವರ್ಷವನ್ನು ಮೂರು ಬಾರಿ ಬದಲಾಯಿಸಲಾಗಿದೆ ಎಂಬುದಕ್ಕೆ ತನಿಖಾಧಿಕಾರಿಗಳು ಪುರಾವೆಗಳನ್ನು ಸಂಗ್ರಹಿಸಿದ್ದಾರೆ.
ಆಸ್ಟ್ರೇಲಿಯಾದ ಅಂಡರ್ -19 (IND U19 vs AUS U19() ತಂಡದ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿರುವ ಭಾರತ ಅಂಡರ್ 19 ತಂಡದಲ್ಲಿ ಭಾರಿ ಕೋಲಾಹಲ ಉಂಟಾಗಿದೆ. ಯುವ ಕ್ರಿಕೆಟಿಗ ರೋಹಿತ್ ಯಾದವ್ (Rohit Yadav) ಅವರ ವಯಸ್ಸಿನ ಘೋಷಣೆಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದ ನಂತರ ಬಿಸಿಸಿಐ ಅವರನ್ನು ತಕ್ಷಣ ತಂಡದಿಂದ ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿದೆ. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ವಯೋಮಿತಿ ಕ್ರಿಕೆಟ್ ಆಡುವ ರೋಹಿತ್ ಯಾದವ್ ಅವರ ವಯಸ್ಸಿನ ಮಾಹಿತಿಯಲ್ಲಿ ಗಂಭೀರ ವ್ಯತ್ಯಾಸಗಳಿವೆ ಎಂದು ಆಂತರಿಕ ತನಿಖೆಯಿಂದ ತಿಳಿದುಬಂದಿದೆ.














