Last Updated:
ರೈಲಿನಲ್ಲಿ ಛಿದ್ರಗೊಂಡ ಮೃತದೇಹದ ಹಿಂದಿನ ಭಯಾನಕ ಸತ್ಯ ಹೊರಬಿದ್ದಿದೆ. ಸೂಟ್ಕೇಸ್ನಲ್ಲಿ ಪತ್ತೆಯಾದ ದೇಹ ಹಯಾತುನ್ ನಿಶಾ ಎಂದು ತಿಳಿದುಬಂದಿದೆ. ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.
ಚೆನ್ನೈ ಸಮೀಪದ ಗುಡುವಂಚೇರಿಯಲ್ಲಿ ನಡೆದ ಬೆಚ್ಚಿಬೀಳಿಸಿದ ಕೊಲೆ ಪ್ರಕರಣ (Murder Case) ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಆತನ ಪತ್ನಿಯನ್ನು ಮಣಿಪುರದಲ್ಲಿ ಬಂಧಿಸಲಾಗಿದ್ದು, ಬಳಿಕ ಅವರನ್ನು ಚೆನ್ನೈಗೆ (Chennai) ಕರೆತರಲಾಗಿದೆ. ಆಗ್ರಾದ ರೈಲಿನಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್ಕೇಸ್ನಿಂದ ಆರಂಭವಾದ ಈ ಪ್ರಕರಣ, ಕೊನೆಗೆ ಗುಡುವಂಚೇರಿಯ ಲಾಕ್ ಮಾಡಲಾಗಿದ್ದ ಮನೆಯೊಂದರತ್ತ ಪೊಲೀಸರನ್ನು ಕರೆದೊಯ್ದಿದ್ದು, ಭಯಾನಕ ಕೊಲೆ ರಹಸ್ಯವನ್ನು ಬಯಲಿಗೆಳೆದಿದೆ.














