Last Updated:
41 ಜನರೊಂದಿಗೆ ಬಿಲಾಸ್ಪುರಕ್ಕೆ ತಲುಪಿದ ಅಲೈಯನ್ಸ್ ಏರ್ 9I613 ವಿಮಾನದ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ನಂತರ ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ನಂತರ ಟರ್ಮಿನಲ್ಗೆ ಸ್ಥಳಾಂತರಿಸಲಾಗಿದೆ.
ಛತ್ತೀಸ್ಗಢ: ರಾಷ್ಟ್ರ ರಾಜಧಾನಿ ದೆಹಲಿಯಿಂದ (Delhi) ಛತ್ತೀಸ್ಗಢದ ಬಿಲಾಸ್ಪುರಕ್ಕೆ ತೆರಳುತ್ತಿದ್ದ ಅಲೈಯನ್ಸ್ ಏರ್ (Alliance Air) ವಿಮಾನವೊಂದು ಬಿಲಾಸ್ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ (Landing) ಮಾಡುವಾಗ ಟೈರ್ ಸ್ಫೋಟಗೊಂಡಿದೆ. ವಿಮಾನದಲ್ಲಿ 37 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಸೇರಿದಂತೆ ಒಟ್ಟು 41 ಜನ ಇದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ವಿಮಾನ ಲ್ಯಾಂಡ್ ಆದ ನಂತರ ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ನಂತರ ಟರ್ಮಿನಲ್ಗೆ ಸ್ಥಳಾಂತರಿಸಲಾಗಿದೆ.














