Last Updated:
ಅಧಿಕಾರಿಗಳ ಪ್ರಕಾರ, ಟಿಬೆಟ್ ಕಡೆಯಿಂದ ಇದ್ದಕ್ಕಿದ್ದಂತೆ ಉಕ್ಕಿ ಹರಿದ ನೀರಿನ ಭಾರಿ ಪ್ರವಾಹವು ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ನೇಪಾಳದ ರಸುವಾ (Rasuwa) ಜಿಲ್ಲೆಯ ಭೋಟೆ ಕೋಶಿ (Bhote Koshi) ನದಿಯನ್ನು ಪ್ರವೇಶಿಸಿತು. ಇದು ತಿಮುರೆ ಮತ್ತು ಸ್ಯಾಪ್ರು ಬೇಸಿ ಪ್ರದೇಶಗಳಲ್ಲಿ ಭಾರಿ ನಾಶವನ್ನು ಸೃಷ್ಟಿಸಿದೆ ಎಂದು ತಿಳಿದುಬಂದಿದೆ
ನೇಪಾಳದ ಫ್ಲ್ಯಾಶ್ ಫ್ಲಡ್ಸ್ (ಆಕಸ್ಮಿಕ ಪ್ರವಾಹ) ಇಂದಿನ ಮುಖ್ಯಾಂಶಗಳು: ನೇಪಾಳದ ಟಿಬೆಟ್ ಗಡಿ ಭಾಗದ ಬಳಿ ಬುಧವಾರ ಸಂಭವಿಸಿದ ಭೀಕರ ಆಕಸ್ಮಿಕ ಪ್ರವಾಹವು ಹತ್ತಾರು ಹಳ್ಳಿ, ನೂರಾರು ಮನೆಗಳು, ವಾಹನಗಳು ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಪ್ರವಾಹದ ಹಾನಿಯ ತೀವ್ರತೆಯನ್ನು ಅಳೆಯಲು ಮತ್ತು ವಿಶೇಷವಾಗಿ ನದಿ ತೀರದಲ್ಲಿ ವಾಸಿಸುವ ಜನರಿಗೆ ತಕ್ಷಣದ ಪರಿಹಾರ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಅಧಿಕಾರಿಗಳು ತೀವ್ರ ಶ್ರಮಿಸುತ್ತಿದ್ದಾರೆ.














