Last Updated:
11 ದಿನಗಳ ಬಾಕ್ಸ್ ಆಫೀಸ್ ಪಯಣದ ಬಳಿಕ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಭಾರತದಲ್ಲಿ 500 ಕೋಟಿ ರೂಪಾಯಿ ಗಡಿ ದಾಟಿದೆ.
ಹಾಲಿವುಡ್ನ ಜನಪ್ರಿಯ ಸೂಪರ್ ಹೀರೋ ಸ್ಪೈಡರ್ ಮ್ಯಾನ್ಗೆ (Spider-Man) ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಕೇವಲ 11 ದಿನಗಳಲ್ಲೇ 500 ಕೋಟಿ ರೂಪಾಯಿ ಕ್ಲಬ್ಗೆ ಎಂಟ್ರಿ ಕೊಟ್ಟಿದೆ. ಮೊದಲ ವಾರದಲ್ಲೇ ಭರ್ಜರಿ ಗಳಿಕೆ ದಾಖಲಿಸಿದ್ದ ಸಿನಿಮಾ, ಎರಡನೇ ವಾರಾಂತ್ಯದಲ್ಲೂ ತನ್ನ ಬಾಕ್ಸ್ ಆಫೀಸ್ ವೇಗವನ್ನು ಮುಂದುವರಿಸಿದೆ.














