Actress: ಪತಿ, ಅತ್ತೆ, ನಾದಿನಿಯಿಂದ ಕೌಟುಂಬಿಕ ದೌರ್ಜನ್ಯ ಆರೋಪ! ಠಾಣೆ ಮೆಟ್ಟಿಲೇರಿದ ಖ್ಯಾತ ನಟಿ | | ACTPnews

ಕಿರುತೆರೆ ನಟಿ ಅದಿತಿ ಶರ್ಮಾ


Last Updated:

ಜನಪ್ರಿಯ ಕಿರುತೆರೆ ನಟಿ ಅದಿತಿ ಶರ್ಮಾ (Actress Aditi Sharma) ತಮ್ಮ ಪತಿ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಮುಂಬೈನ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

ಕಿರುತೆರೆ ನಟಿ ಅದಿತಿ ಶರ್ಮಾ
ಕಿರುತೆರೆ ನಟಿ ಅದಿತಿ ಶರ್ಮಾ

ಜನಪ್ರಿಯ ಕಿರುತೆರೆ ನಟಿ ಅದಿತಿ ಶರ್ಮಾ (Actress Aditi Sharma) ತಮ್ಮ ಪತಿ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಮುಂಬೈನ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಅಪೊಲೆನಾ ಸಪ್ನೋ ಕಿ ಉಂಚಿ ಉಡಾನ್, ರಬ್ ಸೆ ಹೈ ದುವಾ ಮತ್ತು ಕಲೀರೇನ್ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟಿ, ದೈಹಿಕ ಹಾಗೂ ಮಾನಸಿಕ ಕಿರುಕುಳ, ಹಲ್ಲೆ ಮತ್ತು ನಿಂದನೆ ಎದುರಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣ ಇದೀಗ ಕಿರುತೆರೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ಎಫ್‌ಐಆರ್

ಜುಲೈ 31ರಂದು ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಅದಿತಿ ಶರ್ಮಾ ತಮ್ಮ ಪತಿ ಅಭಿನೀತ್ ವಿದ್ಯಾನಂದ್ ಕೌಶಿಕ್, ಅತ್ತೆ ಊರ್ಮಿಳಾ ಕೌಶಿಕ್ ಮತ್ತು ನಾದಿನಿ ಕೀರ್ತಿ ಕೌಶಿಕ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ.

ದೈಹಿಕ ಹಾಗೂ ಮಾನಸಿಕ ಕಿರುಕುಳದ ಆರೋಪ

ಎನ್ ಡಿಟಿವಿ ವರದಿ ಪ್ರಕಾರ ಪೊಲೀಸರಿಗೆ ನೀಡಿದ ದೂರಿನಲ್ಲಿ, ವಿವಾಹದ ಬಳಿಕ ಪತಿ ಹಾಗೂ ಅವರ ಕುಟುಂಬದ ಸದಸ್ಯರಿಂದ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ಎದುರಾಗಿದೆ ಎಂದು ಅದಿತಿ ಆರೋಪಿಸಿದ್ದಾರೆ.

ಅದಿತಿ ಶರ್ಮಾ ದೂರಿನ ಪ್ರಕಾರ, 2025ರ ಜನವರಿ 1ರಂದು ಕಾಫಿ ವಿಚಾರವಾಗಿ ಆರಂಭವಾದ ಸಣ್ಣ ಜಗಳ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.

ಆ ಬಳಿಕ ಪತಿ ತಮ್ಮ ಮೇಲೆ ಅನುಮಾನ ಪಡಲು ಆರಂಭಿಸಿದರು. ಬೇರೆಯವರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಪದೇಪದೇ ಮೊಬೈಲ್ ಫೋನ್ ಪರಿಶೀಲಿಸುತ್ತಿದ್ದರು. ಜೊತೆಗೆ ಪ್ರತ್ಯೇಕ ಕೋಣೆಯಲ್ಲಿ ಮಲಗಲು ಆರಂಭಿಸಿದ್ದು, ತಮ್ಮ ಪೋಷಕರೊಂದಿಗೆ ಮಾತನಾಡದಂತೆ ನಿರ್ಬಂಧ ವಿಧಿಸಿದ್ದರು ಎಂದು ನಟಿ ಆರೋಪಿಸಿದ್ದಾರೆ.

ಆಭರಣ ಕಸಿದುಕೊಂಡ ಆರೋಪ

ದೂರಿನಲ್ಲಿ ಮತ್ತೊಂದು ಗಂಭೀರ ಆರೋಪವನ್ನೂ ಅದಿತಿ ಮಾಡಿದ್ದಾರೆ. ತಮ್ಮ ಆಭರಣಗಳನ್ನು ಕಸಿದುಕೊಂಡಿರುವುದಾಗಿ ನಟಿ ತಿಳಿಸಿದ್ದಾರೆ. ಈ ಎಲ್ಲ ಘಟನೆಗಳಿಂದ ತಾವು ಮಾನಸಿಕವಾಗಿ ತೀವ್ರ ಸಂಕಷ್ಟ ಅನುಭವಿಸಿದ್ದಾಗಿ ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರ ತನಿಖೆ ಮುಂದುವರಿಕೆ

ಅದಿತಿ ಶರ್ಮಾ ನೀಡಿರುವ ದೂರಿನ ಆಧಾರದ ಮೇಲೆ ಗೋರೆಗಾಂವ್ ಪೊಲೀಸರು ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, 2021ರ ಜೂನ್‌ನಲ್ಲಿ ಅದಿತಿ ಶರ್ಮಾ ಮತ್ತು ಅಭಿನೀತ್ ವಿದ್ಯಾನಂದ್ ಕೌಶಿಕ್ ಮೊದಲ ಬಾರಿ ಪರಿಚಯವಾಗಿದ್ದರು.ಆ ಪರಿಚಯ ಬಳಿಕ ಪ್ರೇಮವಾಗಿ ಬೆಳೆಯಿತು. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ 2024ರ ನವೆಂಬರ್ 12ರಂದು ವಿವಾಹವಾಗಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports