Kangana Ranaut: ಹೃತಿಕ್ ರೋಷನ್‌ಗೆ ಕಂಗನಾ ತಿರುಗೇಟು! ‘ಬೆಂಕಿಗೆ ತುಪ್ಪ ಸುರಿಯೋದು ನಿಲ್ಲಿಸಿ’ ಎಂದಿದ್ದೇಕೆ ಬಾಲಿವುಡ್ ಕ್ವೀನ್? | | ACTPnews

ಕಂಗನಾ ರಣಾವತ್


Last Updated:

ಹೃತಿಕ್ ರೋಷನ್ ಮಾಡಿದ ಕಾಮೆಂಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ ರಣಾವತ್, ನೇರವಾಗಿ ನಟನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಂಗನಾ ರಣಾವತ್
ಕಂಗನಾ ರಣಾವತ್

ಬಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಿರುವ ಕಂಗನಾ ರಣಾವತ್ (Kangana Ranaut) ಮತ್ತು ಹೃತಿಕ್ ರೋಷನ್ (Hrithik Roshan) ನಡುವಿನ ವಿವಾದ ಮತ್ತೊಮ್ಮೆ ಸುದ್ದಿಯಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್‌ಗೆ ಹೃತಿಕ್ ರೋಷನ್ ನೀಡಿದ ಪ್ರತಿಕ್ರಿಯೆ ಹೊಸ ಚರ್ಚೆಗೆ ಕಾರಣವಾಗಿದ್ದು, ಅದಕ್ಕೆ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ಅನಗತ್ಯವಾಗಿ ತಮ್ಮ ಬಗ್ಗೆ ಕಾಮೆಂಟ್ ಮಾಡುವ ಬದಲು, ತಮ್ಮ ಹೆಸರನ್ನು ಬಳಸಿಕೊಂಡು ಕಿರುಕುಳ ನೀಡುವವರನ್ನು ಮೊದಲು ಖಂಡಿಸಿ ಎಂದು ಕಂಗನಾ ಹೇಳಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಕಂಗನಾ ರಣಾವತ್ ನೀಡಿದ್ದ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನಾವು ಹೃತಿಕ್ ರೋಷನ್ ಬಳಿ ಕ್ಷಮೆ ಕೇಳಬೇಕು ಎಂಬ ಪೋಸ್ಟ್ ವೈರಲ್ ಆಗಿತ್ತು. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹೃತಿಕ್ ರೋಷನ್, ಒಬ್ಬ ವ್ಯಕ್ತಿಯನ್ನು ದ್ವೇಷಿಸುವ ಕಾರಣಕ್ಕೆ ಇನ್ನೊಬ್ಬರ ಪರ ನಿಲ್ಲುವುದು ಸರಿಯಲ್ಲ. ಯಾವುದೇ ವಿಷಯದ ಸತ್ಯಾಸತ್ಯತೆ ತಿಳಿಯುವವರೆಗೆ ಕಾಯಲು ಇಷ್ಟಪಡುತ್ತೇನೆ ಎಂದು ಕಾಮೆಂಟ್ ಮಾಡಿದ್ದರು. ಹೃತಿಕ್ ಅವರ ಈ ಪ್ರತಿಕ್ರಿಯೆ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಹೃತಿಕ್‌ಗೆ ಕಂಗನಾ ಖಡಕ್ ಉತ್ತರ

ಹೃತಿಕ್ ರೋಷನ್ ಮಾಡಿದ ಕಾಮೆಂಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ ರಣಾವತ್, ನೇರವಾಗಿ ನಟನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆನ್‌ಲೈನ್ ಟ್ರೋಲಿಂಗ್ ಬಗ್ಗೆ ಅಸಮಾಧಾನ

ತಮ್ಮ ಹೆಸರನ್ನು ಬಳಸಿಕೊಂಡು ಹಲವು ವರ್ಷಗಳಿಂದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

ಅಂತಹ ಟ್ರೋಲರ್‌ಗಳನ್ನು ಖಂಡಿಸುವ ಬದಲು ಅವರ ವರ್ತನೆಗೆ ಪರೋಕ್ಷ ಬೆಂಬಲ ಸಿಗುವಂತೆ ಮಾತನಾಡಬೇಡಿ. ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ. ನಿಮ್ಮ ಸಂಗಾತಿಗೂ ಮುಜುಗರ ಉಂಟುಮಾಡಬೇಡಿ. ಅನಗತ್ಯ ಕಾಮೆಂಟ್ ಮಾಡುವುದನ್ನು ಬಿಡಿ ಎಂದು ಕಂಗನಾ ತೀವ್ರವಾಗಿ ಟೀಕಿಸಿದ್ದಾರೆ.

ಹಳೆಯ ವಿವಾದ ಮತ್ತೆ ಮುನ್ನೆಲೆಗೆ

ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ವಿವಾದ 2016ರಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡಿದ್ದು, ವಿಷಯ ಕಾನೂನು ಹೋರಾಟದವರೆಗೂ ತಲುಪಿತ್ತು.

ಕಂಗನಾ, ತಾವು ಮತ್ತು ಹೃತಿಕ್ ನಡುವೆ ಪ್ರೇಮ ಸಂಬಂಧ ಇತ್ತು ಎಂದು ಹೇಳಿಕೊಂಡಿದ್ದರು. ಆದರೆ ಹೃತಿಕ್ ರೋಷನ್ ಈ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಬಳಿಕ ಇಬ್ಬರ ನಡುವಿನ ಇಮೇಲ್‌ಗಳು, ಕಾನೂನು ನೋಟಿಸ್‌ಗಳು ಹಾಗೂ ಮಾಧ್ಯಮಗಳಲ್ಲಿನ ಆರೋಪ-ಪ್ರತ್ಯಾರೋಪಗಳು ಹಲವು ವರ್ಷಗಳ ಕಾಲ ಚರ್ಚೆಯ ವಿಷಯವಾಗಿದ್ದವು.

ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳೊಂದಿಗೆ ಹಲವು ವರ್ಷಗಳ ಹಿಂದಿನ ಈ ವಿವಾದ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಕಂಗನಾ ಅವರ ತೀಕ್ಷ್ಣ ಪ್ರತಿಕ್ರಿಯೆ ಮತ್ತು ಹೃತಿಕ್ ಅವರ ಕಾಮೆಂಟ್ ಕುರಿತು ಅಭಿಮಾನಿಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports