Last Updated:
ಪಾಕಿಸ್ತಾನದ ವೇಗಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್ ಎಸೆದ ದಾಖಲೆಯನ್ನು ಹೊಂದಿದ್ದಾರೆ. ಅವರು ಈಗಾಗಲೇ ನೋ-ಬಾಲ್‌ಗಳಲ್ಲೇ ಶತಕ ಪೂರೈಸಿ ಬೇಡದ ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಕ್ಯಾಚ್ ಬಿಟ್ಟರೆ ಪಂದ್ಯ ಸೋಲು ಕಟ್ಟಿಟ್ಟಬುತ್ತಿ ಎಂದು ಕ್ರಿಕೆಟ್ ಲೋಕದಲ್ಲಿ ಚಿರಪರಿಚಿತವಾಗಿರುವ ಮಾತು. ಇಲ್ಲಿ ಫೀಲ್ಡರ್ ವಿಲನ್ ಆಗುತ್ತಾರೆ. ಅದೇ ರೀತಿ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ (T20 Cricket) ನೋ-ಬಾಲ್ (No Ball) ಎಸೆಯುವ ಬೌಲರ್ ಕೂಡ ಆ ತಂಡಕ್ಕೆ ದೊಡ್ಡ ವಿಲನ್ ಎಂದರೆ ತಪ್ಪಾಗಲಾರದು. ಟಿ20 ಕ್ರಿಕೆಟ್‌ನಲ್ಲಿ ಅಂತಹ ಕೆಟ್ಟ ದಾಖಲೆ ಪಾಕಿಸ್ತಾನದ ವೇಗದ ಬೌಲರ್ ಹೆಸರಿನಲ್ಲಿದೆ. ಈ ಸುದ್ದಿಯಲ್ಲಿ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ನೋಬಾಲ್ ಎಸೆದ ಬೌಲರ್ ಬಗ್ಗೆ ತಿಳಿಯೋಣ.
ಪಾಕಿಸ್ತಾನದ ವಹಾಬ್ ರಿಯಾಜ್, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್ ಎಸೆದ ದಾಖಲೆಯನ್ನು ಹೊಂದಿದ್ದಾರೆ. ಅವರು ಈಗಾಗಲೇ ನೋ-ಬಾಲ್‌ಗಳಲ್ಲೇ ಶತಕ ಪೂರೈಸಿ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವಹಾಬ್ ರಿಯಾಜ್ ಪಾಕಿಸ್ತಾನದ ಪರ ಅದ್ಭುತ ವೇಗದ ಬೌಲರ್ ಆಗಿದ್ದಾರೆ. ಅವರು ತಮ್ಮ ತಂಡಕ್ಕಾಗಿ ಇಂದಿಗೂ ನೆನಪಿಸಿಕೊಳ್ಳುವ ಅನೇಕ ಮಾಂತ್ರಿಕ ಎಸೆತಗಳನ್ನ ಮಾಡಿದ್ದಾರೆ. ಆದರೆ ಅವರು ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ನೋ-ಬಾಲ್‌ಗಳನ್ನು ಎಸೆದ ನಾಚಿಕೆಗೇಡಿನ ದಾಖಲೆಯನ್ನು ಹೊಂದಿದ್ದಾರೆ. ವಹಾಬ್ ರಿಯಾಜ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 348 ಟಿ20 ಪಂದ್ಯಗಳನ್ನು ಆಡಿದ್ದಾರೆ, 413 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ಪ್ರದರ್ಶನವೆಂದರೆ 8 ರನ್‌ಗಳಿಗೆ 5 ವಿಕೆಟ್‌ಗಳು.
ಈ ಅದ್ಭುತ ದಾಖಲೆಯ ಹೊರತಾಗಿಯೂ, ಅವರು ಇನ್ನೂ ಹೆಚ್ಚಿನ ನೋ-ಬಾಲ್‌ಗಳನ್ನು ಬೌಲಿಂಗ್ ಮಾಡಿದ ಕಳಂಕವನ್ನು ಹೊಂದಿದ್ದಾರೆ. ವಹಾಬ್ ರಿಯಾಜ್ ತಮ್ಮ ಟಿ20 ವೃತ್ತಿಜೀವನದಲ್ಲಿ ಒಟ್ಟು 108 ನೋ-ಬಾಲ್‌ಗಳನ್ನು ಬೌಲ್ ಮಾಡಿದ್ದಾರೆ. ಈ ವಿಷಯದಲ್ಲಿ ವಹಾಬ್ ನಂತರ ಪಾಕಿಸ್ತಾನದ ಮತ್ತೊಬ್ಬ ವೇಗಿ ಸೊಹೈಲ್ ತನ್ವೀರ್ ಇದ್ದಾರೆ. ತನ್ವೀರ್ ಅವರು 388 ಪಂದ್ಯಗಳಲ್ಲಿ 96 ಬಾರಿ ಗೆರೆ ದಾಟಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ದಂತಕಥೆ ಲಸಿತ್ ಮಾಲಿಂಗ ಇದ್ದಾರೆ, ಅವರು 295 ಟಿ 20 ಪಂದ್ಯಗಳಲ್ಲಿ 49 ನೋ-ಬಾಲ್‌ಗಳನ್ನು ಬೌಲ್ ಮಾಡಿದ್ದಾರೆ.
ವಹಾಬ್ ರಿಯಾಜ್ -ಪಾಕಿಸ್ತಾನ -108
ಸೊಹೇಲ್ ತನ್ವೀರ್ -ಪಾಕಿಸ್ತಾನ- 96
ಲಸಿತ್ ಮಾಲಿಂಗ- ಶ್ರೀಲಂಕಾ -49
ಆಂಡ್ರೆ ರಸೆಲ್- ವೆಸ್ಟ್ ಇಂಡೀಸ್ – 46
ಶಾನ್ ಟೇಟ್- ಆಸ್ಟ್ರೇಲಿಯಾ- 46
ಜೇಸನ್ ಹೋಲ್ಡರ್ – ವೆಸ್ಟ್ ಇಂಡೀಸ್- 45
ಜಸ್‌ಪ್ರೀತ್ ಬುಮ್ರಾ- ಭಾರತ -42
ಟಿಮ್ ಸೌಥಿ -ನ್ಯೂಜಿಲೆಂಡ್ -41
ಕ್ರಿಸ್ ಜೋರ್ಡಾನ್- ಇಂಗ್ಲೆಂಡ್- 40
ಡೇವಿಡ್ ವಿಲ್ಲೆ- ಇಂಗ್ಲೆಂಡ್- 39
Aug 01, 2026 11:27 PM IST














