Last Updated:
Modi-Ruchika Singh: ರುಚಿಕಾ ಸಿಂಗ್ ಎಂಬ ಯುವತಿಯೊಬ್ಬಳು ಪ್ರಧಾನಿ ಮೋದಿ ಹಾಗೂ ಅವರ ದಿವಂಗತ ತಾಯಿಯ ವಿರುದ್ಧ ಅಶ್ಲೀಲ ಪದ ಬಳಸಿ ಟೀಕೆ ಮಾಡಿದ್ದಳು. ಈ ಬಗ್ಗೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದಾದ ಬಳಿಕ ಖುದ್ದು ಮೋದಿಯವರೇ ಆಕೆಯನ್ನು ಕ್ಷಮಿಸಿದ್ದಾಗಿ ಹೇಳಿದ್ದರು. ಇದೀಗ ರುಚಿಕಾ ಸಿಂಗ್ ಕೂಡ ಸಾರ್ವಜನಿಕವಾಗಿ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಿದ್ದಾಳೆ.
ದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET question paper leak) ವಿರುದ್ಧ ಜಂತರ್ ಮಂತರ್ (Jantar Mantar) ಸೇರಿದಂತೆ ದೆಹಲಿಯ (Delhi) ವಿವಿಧೆಡೆ ನಡೆದ ಪ್ರತಿಭಟನೆ ಬಗ್ಗೆ ಈಗಲೂ ಚರ್ಚೆ ಮುಂದುವರೆದಿದೆ. ಪ್ರಧಾನಿ ಮೋದಿ (PM Narendra Modi) ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಕೆಲವರು ಪ್ರತಿಭಟನೆ ನಡೆಸಿದ್ದರು ಎಂಬ ಆರೋಪವೂ ಇದೆ. ಈ ನಡುವೆ ರುಚಿಕಾ ಸಿಂಗ್ (Ruchika Singh) ಎಂಬ ಯುವತಿಯೊಬ್ಬಳು ಪ್ರಧಾನಿ ಮೋದಿ ಹಾಗೂ ಅವರ ದಿವಂಗತ ತಾಯಿಯ ವಿರುದ್ಧ ಅಶ್ಲೀಲ ಪದ ಬಳಸಿ ಟೀಕೆ ಮಾಡಿದ್ದಳು. ಈ ಬಗ್ಗೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದಾದ ಬಳಿಕ ಖುದ್ದು ಮೋದಿಯವರೇ ಆಕೆಯನ್ನು ಕ್ಷಮಿಸಿದ್ದಾಗಿ ಹೇಳಿದ್ದರು. ಇದೀಗ ರುಚಿಕಾ ಸಿಂಗ್ ಕೂಡ ಸಾರ್ವಜನಿಕವಾಗಿ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಿದ್ದಾಳೆ.
ರುಚಿಕಾ ಸಿಂಗ್ ಫರೀದಾಬಾದ್‌ನ ನಿವಾಸಿ, ಸುಮಾರು 25 ವರ್ಷದ ಯುವತಿ. ಅವಳು ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ನೇಲ್ ಆರ್ಟ್ ಕಲಿಯುತ್ತಿದ್ದು, ಕೆಲವು ಸಮಯದ ನಂತರ ಕೆಲಸ ಬಿಟ್ಟಿದ್ದಳು ಎನ್ನಲಾಗಿದೆ. ಬಳಿಕ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್, ಇನ್‌ಫ್ಲುಯೆನ್ಸರ್ ಆಗಿದ್ದಳು ಎನ್ನಲಾಗಿದೆ.
ಜುಲೈ 23, 2026ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ NEET ಪೇಪರ್ ಲೀಕ್ ಸಂಬಂಧಿತ ಸಿಜೆಪಿ ನೇತೃತ್ವದ ನಡೆದ ಪ್ರತಿಭಟನೆಯಲ್ಲಿ ರುಚಿಕಾ ಸಿಂಗ್ ಭಾಗವಹಿಸಿದ್ದಳು. ಈ ವೇಳೆ ಅವಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ, ಅಶ್ಲೀಲ ಮತ್ತು ನಿಂದನೀಯ ಭಾಷೆಯನ್ನು ಬಳಸಿದ್ದಳು ಎನ್ನಲಾಗಿದೆ. ಮೋದಿಯವರ ದಿವಂಗತ ತಾಯಿ ಬಗ್ಗೆಯೂ ಅಶ್ಲೀಲವಾಗಿ ಟೀಕಿಸಿದ್ದಳು ಎನ್ನಲಾಗಿದೆ. ಈಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು.
ಸಾರ್ವಜನಿಕರ ಆಕ್ರೋಶ ಭುಗಿಲೇಳುತ್ತಿದ್ದಂತೆ ಆಕೆ ವಿರುದ್ಧ ಕೇಸ್ ದಾಖಲಾಗಿತ್ತು. ಸಾರ್ವಜನಿಕ ಶಾಂತಿಗೆ ಭಂಗ, ಸಾಂವಿಧಾನಿಕ ಪದವಿಯ ಗೌರವಕ್ಕೆ ಹಾನಿ ಮತ್ತು ದೂಷಣೆ ಆರೋಪಗಳಡಿ ನೊಯ್ಡಾದಲ್ಲಿ Zero FIR ದಾಖಲಾಗಿ, ನಂತರ ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಅಲ್ಲಿ ಆಕೆ ವಿರುದ್ಧ BNS ಸೆಕ್ಷನ್‌ಗಳು 352, 353(1), 356(1) ಅಡಿ) ತನಿಖೆ ಆರಂಭವಾಗಿತ್ತು.
ಇನ್ನು ಪ್ರಧಾನಿ ಮೋದಿ ವೀಡಿಯೊ ಸಂದೇಶದಲ್ಲಿ ಆಕೆ ಬಗ್ಗೆ ಪ್ರಸ್ತಾಪಿಸಿದ್ದರು. ಇದನ್ನು “ಸಾಂಸ್ಕೃತಿಕ ಆಘಾತ” ಎಂದು ವಿವರಿಸಿ, “ನನ್ನನ್ನು ಮಾತ್ರವಲ್ಲ, ನನ್ನ ತಾಯಿಯನ್ನೂ ನಿಂದಿಸಿದ್ದಾರೆ. ಇದು ಅತ್ಯಂತ ಕೆಟ್ಟ ವಿಷಯ. ಆದರೆ ಯುವ ವಯಸ್ಸಿನಲ್ಲಿ ತಪ್ಪುಗಳಾಗುತ್ತವೆ, ಇದು ಅವುಗಳನ್ನು ಸರಿಪಡಿಸುವ ಅವಕಾಶವೂ ಹೌದು. ಹೀಗಾಗಿ ನಾನು ಅವರನ್ನು ಕ್ಷಮಿಸುತ್ತೇನೆ. ಸಮಾಜವೂ ನನ್ನ ನಿರ್ಧಾರವನ್ನು ಸ್ವೀಕರಿಸಬೇಕು. ಅವರನ್ನು ಶಿಕ್ಷಿಸುವ ಬದಲು ಮಾರ್ಗದರ್ಶನ ನೀಡಬೇಕು” ಎಂದು ಹೇಳಿದ್ದರು. ಅಲ್ಲದೇ ಯುವ ಪ್ರತಿಭಟನಾಕಾರರನ್ನು ದಂಡನೆಗೆ ಒಳಪಡಿಸದಂತೆ ಮನವಿ ಮಾಡಿದ್ದರು.
ಇಷ್ಟಾಗುತ್ತಿದ್ದಂತೆ ರುಚಿಕಾ ಸಿಂಗ್ ಇದೀಗ ಸಾರ್ವಜನಿಕವಾಗಿ ಪ್ರಧಾನಿ ನರೇಂದ್ರ ಮೋದಿ ಬಳಿ ಕ್ಷಮೆ ಕೇಳಿದ್ದಾಳೆ. ನಾನು ನನ್ನ ಸ್ನೇಹಿತರೊಂದಿಗೆ ಪ್ರತಿಭಟನೆಗೆ ಹೋಗಿದ್ದೆ. ಪ್ರತಿಭಟನೆ ನಡೆಯುತ್ತಿತ್ತು, ಜನರು ಪ್ರಧಾನಿ ವಿರುದ್ಧ ಕೊಳಕು ಮಾತುಗಳನ್ನು ಹೇಳುತ್ತಿದ್ದರು. ಅವರ ಪ್ರಭಾವಕ್ಕೆ ಒಳಗಾಗಿ ನಾನೂ ಅದೇ ರೀತಿ ಹೇಳಿದ್ದೆ. ನಾನು ಕೇವಲ 15 ವರ್ಷದವಳು ಎಂದಿದ್ದಾಳೆ.
ಇನ್ನು ಇದು ಕ್ಷಮಿಸಲಾಗದ ತಪ್ಪು. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ನಾನು ಆ ವೀಡಿಯೊ ಅಪ್‌ಲೋಡ್ ಮಾಡಿಲ್ಲ. ಇಡೀ ದೇಶಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾಳೆ. ಇನ್ನು ಆಕೆಯ ತಾಯಿಯೂ ಕ್ಷಮೆ ಕೇಳಿದ್ದಾರೆ. ಅಂದಹಾಗೆ ಆಕೆಯ ವಯಸ್ಸು 15 ಅಲ್ಲ, 25 ಎನ್ನಲಾಗುತ್ತಿದೆ.
Delhi,Delhi,Delhi














