Last Updated:
ಟಾಕ್ಸಿಕ್ ಚಿತ್ರದ ಹೊಸ ಪೋಸ್ಟರ್ ಹೊರ ಬಂದಿದೆ. ಕಿಯಾರಾ ಅಡ್ವಾಣಿ ಇದರಲ್ಲಿ ಹೊಳೆಯುತ್ತಿದ್ದಾರೆ. ಸ್ಟನಿಂಗ್ ಅನಿಸುತ್ತಿದ್ದಾರೆ. ಇದನ್ನ ರಿಲೀಸ್ ಮಾಡೋಕು ಒಂದು ಕಾರಣ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಮತ್ತೊಂದು ಪೋಸ್ಟರ್ ಹೊರ ಬಂದಿದೆ. ಈ ಪೋಸ್ಟರ್ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರದ್ದೇ ಆಗಿದೆ. ಈ ಒಂದು ಪೋಸ್ಟರ್ (Poster) ಅನ್ನ ಜುಲೈ-31 ರಂದೇ ಬಿಡಲು ಕಾರಣವೂ ಇದೆ. ಅದನ್ನ ಹೇಳ್ತಾನೇ ಸಿನಿಮಾ ತಂಡ (Movie Team) ಸ್ಟನಿಂಗ್ ಫೋಟೋ ಒಂದನ್ನ ಇದೀಗ ಹಂಚಿಕೊಂಡಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
35ಕ್ಕೆ ಕಾಲಿಟ್ಟ ಕಿಯಾರಾ
ಚಿತ್ರದಲ್ಲಿ ಹಲವು ಕಲಾವಿದೆಯರೂ ಇದ್ದಾರೆ. ಆದರೆ, ಇವರ ನಡುವೆ ನಾಡಿಯಾ ಪಾತ್ರ ವಿಶೇಷ ಅನಿಸುತ್ತದೆ. ನಾಯಕ ನಟ ಯಶ್ ಅವರ ನಾಯಕಿ ಆಗಿಯೇ ಈ ಪಾತ್ರ ಇದೆ ಅನ್ನೋದು ಗೊತ್ತಾಗಿದೆ. ಈ ಒಂದು ಪಾತ್ರದ ಹೊಸ ಪೋಸ್ಟರ್ ಈಗ ರಿಲೀಸ್ ಆಗಿದೆ. ಇದು ಎಲ್ಲರ ಗಮನ ಸೆಳೆಯುವಂತೇನೆ ಇದೆ.
ಚಿತ್ರದ ಪ್ರಚಾರವೇನೋ ಶುರು ಆಗಿದೆ. ಈ ಮೊದಲೇ ಚಿತ್ರದ ನಟಿಮಣಿಯರ ಪಾತ್ರಗಳ ಪೋಸ್ಟರ್ ಬಂದಿವೆ. ಆದರೆ, ಇದು ಯಾಕೆ ಅನ್ನುವ ಕುತೂಹಲ ಜಾಸ್ತಿನೇ ಇದೆ.
ಕಿಯಾರಾ ಅಡ್ವಾಣಿ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ವರ್ಷ ಜುಲೈ-31 ರಂದು 35 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಟಾಕ್ಸಿಕ್ ಚಿತ್ರ ತಂಡ ನಾಯಕಿ ಕಿಯಾರಾ ಅಡ್ವಾಣಿ ಅವರ ಪೋಸ್ಟರ್ ಬಿಟ್ಟಿದೆ. ಈ ಪೋಸ್ಟರ್ ಅಲ್ಲಿ ಕಿಯಾರಾ ಅಡ್ವಾಣಿ ಅವರ ಕ್ಲೋಸ್‌ಅಪ್ ಫೋಟೋ ಇದೆ.
ಆಗಸ್ಟ್-26 ರಂದು ಚಿತ್ರ ರಿಲೀಸ್
ಇದು ಅಷ್ಟೆ ಕಲರ್ ಫುಲ್ ಆಗಿಯೇ ಇದೆ. ಈ ಒಂದು ಫೋಟೋ ಮೂಲಕವೇ ಟಾಕ್ಸಿಕ್ ಚಿತ್ರ ತಂಡ ಕಿಯಾರಾ ಅಡ್ವಾಣಿ ಅವರಿಗೆ ಹುಟ್ಟುಹ್ಬದ ಶುಭಾಶಯ ತಿಳಿಸಿದೆ.
ಆಗಸ್ಟ್-26 ರಂದು ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ವಿಶ್ವಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ.
ಗೀತುಮೋಹನ್ ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಮಾಡಿದ್ದಾರೆ. ವಿಶಾಲ್ ಮಿಶ್ರಾ ಸೇರಿದಂತೆ ನವ ಸಂಗೀತ ನಿರ್ದೇಶಕರು ಈ ಚಿತ್ರಕ್ಕೆ ಒಂದೊಂದು ಹಾಡು ಕೂಡ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 31, 2026 12:07 PM IST














