Last Updated:
ಹಳ್ಳಿ ಪವರ್ ರೀಲೋಡೆಡ್ ಶೋ ಪ್ರಸಾರದ ಡೇಟ್ ಅನೌನ್ಸ್ ಆಗಿದೆ. ಆದರೆ, ಈ ಸಲ ಇದು ಎಲ್ಲಿ ಅನ್ನುವ ಕುತೂಹಲವು ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹಳ್ಳಿ ಪವರ್ (Halli Power) ಮತ್ತೆ ಶುರು ಆಗುತ್ತಿದೆ. ಮೊದಲ ಹಳ್ಳಿ ಪವರ್ ರಾಯಣ್ಣನ ಊರು ಸಂಗೊಳ್ಳಿಯಲ್ಲಿ ಆಗಿತ್ತು. ಈ ಸಲದ ಹಳ್ಳಿ ಪವರ್ ರೀಲೋಡೆಡ್ (Halli Power Reloaded) ಎಲ್ಲಿ ಅನ್ನುವ ಪ್ರಶ್ನೆನೂ ಇದೆ. ಇದರೊಟ್ಟಿಗೆ ಸ್ವತಃ ಜೀ ಕನ್ನಡ ಪ್ರೋಮೋ (Zee Kannad Promo) ಕೂಡ ರಿಲೀಸ್ ಮಾಡಿದೆ. ಈ ಮೂಲಕ ಹಳ್ಳಿಪವರ್ ರೀಲೋಡೆಡ್ ಆಗಸ್ಟ್-8 ರಿಂದಲೇ ಶುರು ಆಗುತ್ತಿದೆ ಅನ್ನೋದು ಗೊತ್ತಾಗಿದೆ. ಹಾಗೆ ಅಕುಲ್ ಬಾಲಾಜಿ (Akul Balaji) ಅವರ ಮಾತುಗಳನ್ನ ಗಮನಿಸಿದರೆ, ಈ ಸಲವು ಈ ಶೋ ಉತ್ತರ ಕರ್ನಾಟಕದಲ್ಲಿಯೇ ಶುರು ಆಗುತ್ತಿದೆ. ಇದರ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹಳ್ಳಿ ಪವರ್ ಮತ್ತೆ ಶುರು ಆಗುತ್ತಿದೆ. ಈ ವಿಚಾರ ಗೊತ್ತೇ ಇದೆ. ಆಗಸ್ಟ್-8 ರಿಂದ ಅನ್ನುವುದು ರಿವೀಲ್ ಆಗಿದೆ. ಜೀ ಟಿವಿಯ ಅಧಿಕೃತ ಪ್ರೋಮೋದಲ್ಲಿಯೇ ಇದು ಬಹಿರಂಗೊಂಡಿದೆ.
ಅಕುಲ್ ಬಾಲಾಜಿ ಹಳ್ಳಿ ಪವರ್
(ಚಿತ್ರ ಕೃಪೆ: ಅಕುಲ್ ಬಾಲಾಜಿ ಇನ್ಸ್ಟಾಗ್ರಾಮ್)
ಹಳ್ಳಿ ಪವರ್ ಈ ಸಲ ಯಾವ ಊರಲ್ಲಿ ನಡೀತಿದೆ. ಈ ಒಂದು ಪ್ರಶ್ನೆಗೆ ಒಂದಷ್ಟು ಮಾಹಿತಿ ಸಿಗುತ್ತದೆ. ಉತ್ತರ ಕರ್ನಾಟಕದಲ್ಲಿಯೇ ಈ ಶೋ ನಡೆಯುತ್ತಿದೆ.
ಹಳ್ಳಿ ಪವರ್ ಕಳೆದ ಸಲ ರಾಯಣ್ಣನ ಸಂಗೊಳ್ಳಿಯಲ್ಲಿಯೇ ನಡೆದಿತ್ತು. ಅಕುಲ್ ಬಾಲಾಜಿ ಈ ಶೋ ನಡೆಸಿಕೊಟ್ಟಿದ್ದರು. ಈ ಸಲವು ಹಳ್ಳಿ ಪವರ್ ಶೋವನ್ನ ಅಕುಲ್ ಬಾಲಾಜಿ ನಡೆಸಿಕೊಡುತ್ತಿದ್ದಾರೆ.
ಹಳ್ಳಿ ಪವರ್ ರೀಲೋಡೆಡ್ ಅನ್ನುವ ಈ ಹೆಸರಿಗೆ ತಕ್ಕನಾಗಿಯೇ ಈ ಸಲದ ಶೋ ಭರ್ಜರಿ ಆಗಿಯೇ ಪ್ಲಾನ್ ಆದಂತೆ ಇದೆ. ಹೊಸ ರೀತಿಯ ಟಾಸ್ಕ್ಗಳನ್ನ ಕೊಡ್ತಾರೆ ಅನಿಸುತ್ತದೆ. ಆ ರೀತಿನೇ ಪ್ರೋಮೋದಲ್ಲಿ ವಿಷಯ ರಿವೀಲ್ ಆಗಿದೆ ನೋಡಿ.
ಜೀ ಕನ್ನಡದಲ್ಲಿ ಹಳ್ಳಿ ಪವರ್
(ಚಿತ್ರ ಕೃಪೆ: ಜೀ ಕನ್ನಡ ಇನ್ಸ್ಟಾಗ್ರಾಮ್)
ಕಳೆದ ಸಲದ ಹಳ್ಳಿ ಪವರ್ ಶೋ ಜೀ ಪವರ್ ಚಾನೆಲ್ ಅಲ್ಲಿಯೇ ಬಂದಿತ್ತು. ಈ ಬಾರಿ ಜೀ ಕನ್ನಡದಲ್ಲಿಯೇ ಬರ್ತಿದೆ. ಈ ವಿಚಾರವನ್ನ ಪ್ರೋಮೋದಿಂದಲೇ ತಿಳಿದುಕೊಳ್ಳಬಹುದು.
ಇನ್ನುಳಿದಂತೆ ಹಳ್ಳಿ ಪವರ್ ರೀಲೋಡೆಡ್ ಕುತೂಹಲ ಮೂಡಿಸಿದೆ. ಈ ಸಲ ಯಾರೆಲ್ಲ ಬರ್ತಾರೆ. ಏನೆಲ್ಲ ಟಾಸ್ಕ್ಗಳು ಇರುತ್ತವೆ ಅನ್ನುವ ಕ್ಯೂರಿಯೋಸಿಟಿ ಹೆಚ್ಚಾಗುತ್ತಿದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka














