Last Updated:
ಲಂಡನ್‌ನಲ್ಲಿ ಆರ್ಯನ್ ಖಾನ್, ಡ್ಯಾನಿಶ್ ಗಾಯಕಿ ವಿನ್ನಿ ಟಕೈರ್ (Singer Winnie Takair) ಜೊತೆ ಕಾಣಿಸಿಕೊಂಡಿರುವ ಕೆಲವು ಫೋಟೋಗಳು ಮತ್ತು ವಿಡಿಯೊಗಳು ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ವೃತ್ತಿಜೀವನಕ್ಕಿಂತ ವೈಯಕ್ತಿಕ ಜೀವನದ ಕುರಿತ ಚರ್ಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಲಂಡನ್‌ನಲ್ಲಿ ಆರ್ಯನ್ ಖಾನ್, ಡ್ಯಾನಿಶ್ ಗಾಯಕಿ ವಿನ್ನಿ ಟಕೈರ್ (Singer Winnie Takair) ಜೊತೆ ಕಾಣಿಸಿಕೊಂಡಿರುವ ಕೆಲವು ಫೋಟೋಗಳು ಮತ್ತು ವಿಡಿಯೊಗಳು ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಆರ್ಯನ್ ಖಾನ್ ಮತ್ತು ವಿನ್ನಿ ಟಕೈರ್ ಲಂಡನ್‌ನ ಕ್ಯಾಸಿನೊವೊಂದರ ಹೊರಗೆ ಕಾಣಿಸಿಕೊಂಡಿದ್ದಾರೆ. ಆರ್ಯನ್ ಖಾನ್ ಕ್ಯಾಶುವಲ್ ಉಡುಗೆಯಲ್ಲಿ ಕಾಣಿಸಿಕೊಂಡರೆ, ವಿನ್ನಿ ಟಕೈರ್ ಕಪ್ಪು ಬಣ್ಣದ ಉಡುಪಿನಲ್ಲಿ ಗಮನ ಸೆಳೆದಿದ್ದಾರೆ.
ವಿನ್ನಿ ಟಕೈರ್ ಡೆನ್ಮಾರ್ಕ್ ಮೂಲದ ಸ್ವತಂತ್ರ ಗಾಯಕಿ ಹಾಗೂ ಗೀತರಚನೆಕಾರರಾಗಿದ್ದಾರೆ. ತಮ್ಮ ಮೂಲ ಸಂಗೀತದ ಮೂಲಕ ಅವರು ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಗುರುತನ್ನು ಗಳಿಸಿದ್ದಾರೆ.ಇವರ ಹಲವು ಹಾಡುಗಳು ವಿವಿಧ ಸಂಗೀತ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿದ್ದು, ಸಂಗೀತ ಪ್ರಿಯರ ಮೆಚ್ಚುಗೆ ಪಡೆದಿವೆ.
ಸಂಗೀತದ ಜೊತೆಗೆ ವಿನ್ನಿ ಟಕೈರ್ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ತಮ್ಮ ಸಂಗೀತ ಯೋಜನೆಗಳು, ಪ್ರವಾಸ, ಫ್ಯಾಷನ್ ಹಾಗೂ ವೈಯಕ್ತಿಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದರಿಂದ ಅವರಿಗೆ ಗಮನಾರ್ಹ ಅನುಯಾಯಿಗಳ ಬಳಗವೂ ಇದೆ.
ಲಂಡನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಆರ್ಯನ್ ಖಾನ್ ಅಥವಾ ವಿನ್ನಿ ಟಕೈರ್ ಯಾರೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಆರ್ಯನ್ ಖಾನ್ ಅವರ ಹೆಸರು ಈ ಹಿಂದೆಯೂ ಮಾಡೆಲ್ ಮತ್ತು ನಟಿ ಲಾರಿಸ್ಸಾ ಬೊನೆಸಿ ಅವರೊಂದಿಗೆ ಜೋಡಿಸಿಕೊಂಡು ಸುದ್ದಿಯಾಗಿತ್ತು. ಲಾರಿಸ್ಸಾ, ಆರ್ಯನ್ ಅವರ ಸ್ಟ್ರೀಟ್‌ವೇರ್ ಬ್ರ್ಯಾಂಡ್ ಡಿ’ಯಾವೋಲ್ ಎಕ್ಸ್‌ನ ಪ್ರಚಾರ ಅಭಿಯಾನದಲ್ಲೂ ಕಾಣಿಸಿಕೊಂಡಿದ್ದರು.
ಆದರೆ, ಆ ಸಂದರ್ಭದಲ್ಲಿಯೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.
ವೈಯಕ್ತಿಕ ಜೀವನದ ಕುರಿತ ಚರ್ಚೆಗಳ ನಡುವೆಯೂ ಆರ್ಯನ್ ಖಾನ್ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ. ಅವರು ನಿರ್ದೇಶಕರಾಗಿ ತಮ್ಮ ಮೊದಲ ಸರಣಿ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಈ ಸರಣಿಯನ್ನು ಗೌರಿ ಖಾನ್ ಮತ್ತು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.
ಇತ್ತ ವಿನ್ನಿ ಟಕೈರ್ ಕೂಡ ತಮ್ಮ ಸಂಗೀತ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದು, ಹೊಸ ಸಂಗೀತ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಲಂಡನ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದರೂ, ಅವರ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
Bangalore [Bangalore],Bangalore,Karnataka














