666 Operation Dream Theatre Movie: ಶಿವಣ್ಣನ ಬಾಂಡ್ ಸಿನಿಮಾ ಫಸ್ಟ್ ಟೀಸರ್ ಯಾವಾಗ ಬರುತ್ತೆ? ರಿಲೀಸ್ ಯಾವಾಗ? | | ACTPnews

Daali Dhananjaya Shiva rajkumar 666 Operation Dream Theatre Movie Teaser Release Updates


ಜುಲೈ-3 ರಂದು ಟೀಸರ್ ರಿಲೀಸ್
ಜುಲೈ-3 ರಂದು ಟೀಸರ್ ರಿಲೀಸ್

ಆದರೆ, ಟೀಸರ್ ರಿಲೀಸ್ ಟೈಮ್ ಇನ್ನು ಹೇಳಿಕೊಂಡಿಲ್ಲ. ಜುಲೈ-3 ಅಲ್ವೇ? ಹಾಗಾಗಿಯೇ ಬಹುಶಃ ಇನ್ನು ಕೆಲವು ದಿನಗಳಲ್ಲಿಯೇ ಹೇಳ್ತಾರೆ ಅನಿಸುತ್ತದೆ. ಆದರೆ, ಈಗ ಬಿಟ್ಟಿರೋ ಚಿತ್ರದ ಟೀಸರ್ ರಿಲೀಸ್ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ.

ಟೈಮ್ ನೋಡ್ತಿರೋ ಶಿವಣ್ಣ ಪೋಸ್

ಈ ಒಂದು ಪೋಸ್ಟರ್ ಅಲ್ಲಿ ಶಿವಣ್ಣ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಕೈಯಲ್ಲಿ ಕಟ್ಟಿಕೊಂಡ ವಾಚ್ ಅನ್ನ ನೋಡುತ್ತಿದ್ದಾರೆ.

ಹೇಮಂತ್ ರಾವ್ ಸಿನಿಮಾ

ಡೈರೆಕ್ಟರ್ ಹೇಮಂತ್ ರಾವ್ ಚಿತ್ರಗಳು ಅಂದ್ರೆ ಏನೋ ವಿಷಯ ಇರ್ತದೆ ಅಂತ ಗೊತ್ತೇ ಇದೆ. ತಾಜಾ ಉದಾಹರಣೆ ಅಂದ್ರೆ ಅದು ಸಪ್ತಸಾಗರದಾಚೆ ಎಲ್ಲೋ ಸೈಡ್‌-ಎ ಮತ್ತು ಸೈಡ್‌-ಬಿ ಚಿತ್ರಗಳೇ ಸಾಕ್ಷಿ ಆಗುತ್ತವೆ.

ಅದಕ್ಕೂ ಮೊದಲು ಬಂದ ಕವಲುದಾರಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಗೂ ವಿಶೇಷವಾಗಿಯೇ ಇವೆ. ಈ ಎಲ್ಲ ಚಿತ್ರಗಳ ಹೊರತಾಗಿ ಬಾಂಡ್ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಚಿತ್ರದ ಬಹುತೇಕ ಕೆಲಸ ಕೂಡ ಮುಗಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಸೆಟ್

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರಕ್ಕಾಗಿಯೇ ಸೆಟ್ ಹಾಕಿದ್ದರು.100 ದಿನಗಳ ಕಾಲ ಇಲ್ಲಿ ವಿವಿಧ ಬ್ಲಾಕ್ ಅಲ್ಲಿ ಶೂಟಿಂಗ್ ಆಗಿದೆ.

Daali Dhananjaya Shiva rajkumar 666 Operation Dream Theatre Movie Teaser Release Updates

ಡಿಸ್ಕೋ ಕ್ವೀನ್ ಯಾರು

(ಚಿತ್ರ ಕೃಪೆ: ಹೇಮಂತ್ ರಾವ್ ಇನ್‌ಸ್ಟಾಗ್ರಾಮ್)

ಇತ್ತೀಚಿಗೆ ಈ ಚಿತ್ರ ಕ್ಲಬ್ ಸಾಂಗ್ ಕೂಡ ಶೂಟ್ ಆಗಿದೆ. ಇದೇ ಕಂಠೀರವ ಸ್ಟುಡಿಯೋದಲ್ಲಿ ಈ ಹಾಡಿಗಾಗಿಯೇ ಸೆಟ್ ಹಾಕಲಾಗಿತ್ತು. ಆದರೆ, ಈ ಹಾಡಿನಲ್ಲಿ ಡ್ಯಾನ್ಸ್ ಮಾಡ್ತಿರೋ ಆ ಜೂಲಿ ಯಾರು ಅನ್ನೋದು ಮಾತ್ರ ರಿವೀಲ್ ಆಗಿಲ್ಲ ನೋಡಿ.

ಈ ಚಿತ್ರದ ಇನ್ನು ಯಾರೆಲ್ಲ ಇದ್ದಾರೆ

666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಪ್ರಕಾಶ್ ಅನ್ನುವ ರೋಲ್ ಮಾಡಿದ್ದಾರೆ. ಶಂಕರ್ ಅನ್ನುವ ಪಾತ್ರದಲ್ಲಿ ಡಾಲಿ ಧನಂಜಯ್ ಇದ್ದಾರೆ.

ಬಹು ಕೋಟಿ ವೆಚ್ಚದ ಸಿನಿಮಾ

666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರವನ್ನ ಡಾಕ್ಟರ್ ವೈಶಾಕ್ ಜೆ.ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕೋಟಿ ಕೋಟಿ ದುಡ್ಡು ಹಾಕುತ್ತಿದ್ದಾರೆ.

ಈ ಚಿತ್ರದ ಟೀಸರ್ ಮಾತ್ರ ರಿಲೀಸ್ ಆಗುತ್ತಿದೆ. ಜುಲೈ-3 ಇದಕ್ಕಾಗಿಯೇ ಫಿಕ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ರಾಜಕುಮಾರ್ ಅವರ ಬಾಂಡ್ ಸಿನಿಮಾಗಳ ಸ್ಪೂರ್ತಿ ಇದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed