Krishi Thapanda: ಕಾರು ಹತ್ತಿ ತಲೆ ಚಚ್ಚಿಕೊಂಡ ಕೃಷಿ ತಾಪಂಡ! ಇಂದೇ ನಟಿಯ ವಿಚಾರಣೆ? ’ Vaishakh case police to send notice to krishi thapanda | | ACTPnews

ಕೃಷಿ ತಾಪಂಡ


Last Updated:

Krishi Thapanda: ನಟಿ ಕೃಷಿ ತಾಪಂಡ ಅವರಿಗೆ ನೋಟಿಸ್ ಕಳಿಸ್ತಾರಾ ಪೊಲೀಸ್? ಇಂದೇ ನಡೆಯಲಿದೆಯಾ ನಟಿಯ ವಿಚಾರಣೆ?

ಕೃಷಿ ತಾಪಂಡ
ಕೃಷಿ ತಾಪಂಡ

ಸ್ಯಾಂಡಲ್​ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ (Businessman) ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಬಂಧವಾಗಿ ನಟಿಯನ್ನು ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಟಿ ಕೃಷಿ ತಾಪಂಡ ಸ್ನೇಹಿತ ಆತ್ಮಹತ್ಯೆ ಕೇಸ್ ಹಿನ್ನೆಲೆಯಲ್ಲಿ ನಟಿಗೆ ಇಂದು ನೋಟಿಸ್ (Notice) ನೀಡಲಾಗುವುದು ಅಥವಾ ನಾಳೆ ವಿಚಾರಣೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ವೈಶಾಖ್ ಪತ್ನಿ ನೀಡಿದ ದೂರಿನ ಮೇಲೆ‌ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮೊದಲು ನಟಿ ಕೃಷಿ ತಾಪಂಡಾಗೆ ನೊಟೀಸ್ ಕೊಡಲು ಸಿದ್ಧತೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದ‌ ಕೃಷಿ ತಾಪಂಡ ಜೊತೆ ಸತತ ಸಂಪರ್ಕದಲ್ಲಿದ್ದ ವೈಶಾಕ್ ಮನೆಯೊಂದಿಗೆ ಸಂಪರ್ಕ ಬಿಟ್ಟಿದ್ದರು ಎನ್ನಲಾಗಿದೆ.

ಅಲ್ಲದೇ ಒಂದು ವಾರದಿಂದ ವೈಶಾಖ್ ಕೃಷಿ ತಾಪಂಡ ಫ್ಲಾಟ್ ನಲ್ಲೇ ವಾಸಿಸುತ್ತಿದ್ದರು ಎನ್ನಲಾಗಿದ್ದು ಪ್ರತೀ ದಿನ ಕೃಷಿ ತಾಪಂಡ ಜೊತೆ ಮಾತುಕತೆ ಹಿನ್ನೆಲೆಯಲ್ಲಿ ಕೊನೆ ಕಾಲ್, ಮೆಸೇಜ್ ಕೂಡ ಕೃಷಿ ತಾಪಂಡಾಗೆ ಕಳಿಸಿರುವ ಹಿನ್ನೆಲೆಯಲ್ಲಿ ಕೃಷಿ ತಾಪಂಡಾಗೆ ನೊಟೀಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.

ಈಗಾಗಲೇ ವೈಶಾಕ್ ಮೊಬೈಲ್ ವಶಪಡೆದಿರುವ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳೋ ಬಗ್ಗೆ ನಟಿಗೆ ಮೆಸೇಜ್ ಮಾಡಿದ ಹಿನ್ನೆಲೆ ನಟಿಗೆ ನೊಟೀಸ್ ನೀಡಿ‌ ವಿಚಾರಣೆ ನಡೆಸಲು ತೀರ್ಮಾನ ಮಾಡಿದ್ದಾರೆ.

ನಾಳೆ ಅಥವಾ ನಾಡಿದ್ದು ವಿಚಾರಣೆಗೆ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆ ವೇಳೆ ವೈಶಾಕ್ ಫ್ಯಾಮಿಲಿ ಜೊತೆ ಕಾಂಟ್ಯಾಕ್ಟ್ ಇರಲಿಲ್ಲ‌ ಅನ್ನೋದು ಪತ್ತೆಯಾಗಿದ್ದು ಹೀಗಾಗಿ ಕೃಷಿ ತಾಪಂಡಗೆ ಸಾವಿನ ಸೀಕ್ರೆಟ್ ಗೊತ್ತಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮೊಬೈಲ್ ನಲ್ಲಿ ಅಡಗಿದ್ಯಾ ಸ್ಫೋಟಕ‌ ವಿಚಾರಗಳು..?

ವೈಶಾಖ್ ಹೆಚ್ಚಾಗಿ ಕೃಷಿ ತಾಪಂಡ ಜೊತೆ ಕಾಂಟ್ಯಾಕ್ಟ್​ನಲ್ಲಿದ್ದ ಕಾರಣ ವೈಶಾಕ್ ಮೊಬೈಲ್ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಕೃಷಿ ತಾಪಂಡ ಬಿಟ್ಟು ಯಾರ್ಯಾರಿಗೆ ಕಾಲ್, ಮೆಸೇಜ್ ಮಾಡಿದ್ದಾರೆ ಅನ್ನೋದನ್ನು ಪರಿಶೀಲನೆ ನಡೆಸಲಿದ್ದಾರೆ.

ವೈಶಾಖ್ ಅಂತ್ಯಸಂಸ್ಕಾರ ವೇಳೆ ಕೃಷಿ ತಾಪಂಡ ಅಲ್ಲಿಗೆ ಬಂದಿದ್ದು ವೈಶಾಖ್ ಕುಟುಂಬಸ್ಥರು ನಟಿಯನ್ನು ಅಲ್ಲಿಂದ ಹೋಗುವಂತೆ ಹೇಳಿದ್ದಾರೆ. ಹೋಗಿ ಕ್ಷಣಕಾಲ ನಿಂತು ತಕ್ಷಣ ಕೃಷಿ ತಾಪಂಡ ವಾಪಸ್ ಬಂದಿದ್ದು ಕಾರು ಹತ್ತಿದ ನಂತರ ತಲೆ ಚಚ್ಚಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ.

ವರದಿ: ಮಾದೇಶ ಸಿಎನ್. ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports