ಗೆಳೆಯನ ಅಂತ್ಯಕ್ರಿಯೆಗೆ ಕಣ್ಣೀರಿಡುತ್ತ ಬಂದ ಕೃಷಿ ತಾಪಂಡ; ನಟಿಗೆ ವೈಶಾಖ್ ಕುಟುಂಬಸ್ಥರಿಂದ ಕ್ಲಾಸ್! ಮುಂದಾಗಿದ್ದೇನು? | | ACTPnews

ನಟಿ ಕೃಷಿ ತಾಪಂಡ


Last Updated:

ನಟಿ ಕೃಷಿ ತಾಪಂಡ (Krishi Tapanda) ಅವರ ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ನಿಧನ ಹೊಂದಿದ್ದಾರೆ. ಈ ಎಲ್ಲಾ ಘಟನೆ ನಡೆಯುವ ಸಮಯದಲ್ಲಿ ಮನೆಯಲ್ಲಿ ಇರದ ನಟಿ ಕೃಷಿ , ಇದೀಗ ವೈಶಾಖ್ ಅಂತ್ಯಕ್ರಿಯೆಗೆ ಬಂದಿದ್ದಾರೆ.

ನಟಿ ಕೃಷಿ ತಾಪಂಡ
ನಟಿ ಕೃಷಿ ತಾಪಂಡ

ನಟಿ ಕೃಷಿ ತಾಪಂಡ (Krishi Tapanda) ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ನಟಿಗೆ ಕೊನೆಯದಾಗಿ ಸಂದೇಶವೊಂದನ್ನು ಕಳುಹಿಸಿ ಕೃಷಿ ತಾಪಂಡ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ . ಈ ಎಲ್ಲಾ ಘಟನೆ ನಡೆಯುವ ಸಮಯದಲ್ಲಿ ಮನೆಯಲ್ಲಿ ಇರದ ನಟಿ ಕೃಷಿ , ಇದೀಗ ವೈಶಾಖ್ ಅಂತ್ಯಕ್ರಿಯೆಗೆ ಬಂದಿದ್ದಾರೆ.

ವೈಶಾಖ್ ಅವರ ನಿಧನದ ಸುದ್ದಿ ತಿಳಿದ ಬಳಿಕ ನಟಿ ಕೃಷಿ ತಾಪಂಡ ಅವರು ಚಾಮರಾಜಪೇಟೆಯ ಅಂತ್ಯಕ್ರಿಯೆ ಸ್ಥಳಕ್ಕೆ ಆಗಮಿಸಿದ್ದಾರೆ . ಇನ್ನು ಸ್ಥಳಕ್ಕೆ ನಟಿ ಕೃಷಿ ತಪಾಂಡ ಬಂದಿರುದನ್ನ ಗಮನಿಸಿದ ವೈಶಾಕ್ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಬಂಧಿಕರ ವಿರೋಧ ಹಿನ್ನೆಲೆ ಕೃಷಿ ತಾಪಂಡ ಅಲ್ಲಿಂದ ವಾಪಸ್ಸಾಗಿದ್ದಾರೆ.

ಮಾಹಿತಿಯ ಪ್ರಕಾರ, ವೈಶಾಖ್ ಅವರು ಘಟನೆಯ ಮುನ್ನ ನಟಿ ಕೃಷಿ ತಾಪಂಡ ಅವರಿಗೆ ವಾಟ್ಸಾಪ್ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದರು. ನನಗೆ ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ ಎಂದು ನಿನ್ನೆ ಸಂಜೆ ನಟಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ನಟಿ ಜೊತೆ ಉದ್ಯಮಿ ವೈಶಾಕ್ ಸ್ನೇಹ?

ನಟಿ ಕೃಷಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಉದ್ಯಮಿ ವೈಶಾಕ್​​,  ಕಾರು ಆಟೋ ಮೊಬೈಲ್ ಹಾಗೂ ಗ್ಯಾರೇಜ್ ಇಟ್ಟುಕೊಂಡಿದ್ದರು. ಈತನಿಗೆ 15 ವರ್ಷಗಳ ಹಿಂದೆಯೇ ಮದುವೆ ಕೂಡ ಆಗಿತಂತ್ತೆ. ಈ ದಂಪತಿಗೆ 14 ವರ್ಷದ ಮಗ ಕೂಡ ಇದ್ದಾನೆ.

ಇನ್ನು ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದು, ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೆಂಡ್ತಿ-ಮಕ್ಕಳಿದ್ರೂ ಉದ್ಯಮಿ ನಟಿ ಮನೆಯಲ್ಲೇ ಯಾಕಿದ್ದರು ಎನ್ನುವ ಪ್ರಶ್ನೆ ಮೂಡಿದೆ.

(ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports