INDW vs BANW: ರಾಧಾ, ಶ್ರೀಚರಣಿ ಮಾರಕ ದಾಳಿಗೆ ಬಾಂಗ್ಲಾ ತತ್ತರ! ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಭಾರತಕ್ಕೆ ಬೇಕು 137 ರನ್ | ಕ್ರೀಡಾ ಸುದ್ದಿ | ACTPnews

ಭಾರತ ಮಹಿಳಾ ತಂಡ


Last Updated:

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್​ಗಳಲ್ಲಿ 8 ವಿಕೆಟ್ ಕಳೆದಿಕೊಂಡು 136 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಭಾರತ ಮಹಿಳಾ ತಂಡ
ಭಾರತ ಮಹಿಳಾ ತಂಡ

ಮಹಿಳಾ ಟಿ20 ವಿಶ್ವಕಪ್​​ನ 23ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನ ಎದುರಿಸುತ್ತಿದೆ.​​ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಈ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್​ಗಳಲ್ಲಿ 8 ವಿಕೆಟ್ ಕಳೆದಿಕೊಂಡು 136 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ಈ ಗೆಲುವು ಅನಿವಾರ್ಯವಾಗಿದೆ. ಗೆದ್ದರೆ ಮಾತ್ರ ರೇಸ್​​ನಲ್ಲಿ ಉಳಿಯಲಿದೆ. ಅಲ್ಲದೆ ಉತ್ತಮ ರನ್​ ರೇಟ್​​​ನಲ್ಲಿ ಗೆದ್ದರೆ ಇನ್ನೂ ಅನುಕೂಲವಾಗುವುದರಿಂದ ಕಡಿಮೆ ಓವರ್​ಗಳಲ್ಲೇ ಚೇಸಿಂಗ್ ಮುಗಿಸಲಿ ಎದುರು ನೋಡುತ್ತಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡ ಎರಡನೇ ಓವರ್ ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ದಿಲಾರಾ ಅಖ್ತರ್ 8 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟ್ ಆದರು. ರೇಣುಕಾ ಠಾಕೂರ್ ಅವನನ್ನು ಪೆವಿಲಿಯನ್​​ಗೆ ಕಳುಹಿಸಿದರು. ನಂತರ ಒಂದಾದಜುವೇರಿಯಾ ಫಿರ್ದೌಸ್ ಹಾಗೂ ಶೋಬನಾ ಮೋಸ್ಟರಿ 2ನೇ ವಿಕೆಟ್ ಜೊತೆಯಾಟದಲ್ಲಿ 51 ರನ್​ಗಳ ಜೊತೆಯಾಟ ನೀಡಿದರು. ಈ ಜೋಡಿಯನ್ನ ನಂದನಿ ಶರ್ಮಾ ಬ್ರೇಕ್ ಮಾಡಿದರು. 31 ಎಸೆತಗಳಲ್ಲಿ 33 ರನ್ ಗಳಿಸಿದ್ದ ಫಿರ್ದೌಸ್ ನಂದನಿ ಬೌಲಿಂಗ್​​ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಿಗರ್ ಸುಲ್ತಾನ 27 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 32 ರನ್​ಗಳಿಸಿ ರಾಧಾ ಯಾದವ್​ ಬೌಲಿಂಗ್​​ನಲ್ಲಿ ಸ್ಟಂಪ್ ಆದರು.

ಈ ವಿಕೆಟ್ ಬಳಿಕ ಬಾಂಗ್ಲಾದೇಶ ತಂಡದ ಯಾವೊಬ್ಬ ಬ್ಯಾಟರ್ ಕ್ರೀಸ್​​​ನಲ್ಲಿ ನಿಲ್ಲಲಿಲ್ಲ. ಶೋರ್ನಾ ಅಖ್ತರ್ 13,ಶರ್ಮಿನ್ ಅಖ್ತರ್ 10, ರೀತು ಮೋನಿ 8 ರನ್​ಗಳಿಸಿ ಔಟ್ ಆದರು.

ಭಾರತದ ಪರ ಮಿಂಚಿದ ರಾಧಾ ಯಾದವ್ 28ಕ್ಕೆ3, ಶ್ರೀಚರಣಿ 21ಕ್ಕೆ2, ರೇಣುಕಾ ಠಾಕೂರ್ 21ಕ್ಕೆ1, ನಂದನಿ ಶರ್ಮಾ 32ಕ್ಕೆ1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed