ನಮ್ಮ ಸೈನಿಕರೇ ಚೀನಾ ಮೇಲೆ ದಾಳಿ ನಡೆಸಿದರೇ?; ಮೋದಿಗೆ ಕಾಂಗ್ರೆಸ್ ಖಡಕ್ ಪ್ರಶ್ನೆ | | ACTPnews

ನಮ್ಮ ಸೈನಿಕರೇ ಚೀನಾ ಮೇಲೆ ದಾಳಿ ನಡೆಸಿದರೇ?; ಮೋದಿಗೆ ಕಾಂಗ್ರೆಸ್ ಖಡಕ್ ಪ್ರಶ್ನೆ |


Last Updated:

Indo China Conflict: ಭಾರತದ ಗಡಿಯನ್ನು ಯಾರೂ ಅತಿಕ್ರಮಣ ಮಾಡಿಲ್ಲ ಎಂದಮೇಲೆ ನಮ್ಮ ಸೈನಿಕರು ಹುತಾತ್ಮರಾಗಿದ್ದೇಕೆ? ನಮ್ಮ ಸೈನಿಕರೇ ಚೀನಾದ ಪ್ರದೇಶ ಅತಿಕ್ರಮಣ ಮಾಡಿದರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಬೆಂಗಳೂರು (ಜೂ. 20): ಚೀನಾ ಗಡಿಯ ವಾಸ್ತವತೆ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹೇಳಿಕೆಗಳು ಗೊಂದಲ ಮೂಡಿಸುವಂತಿವೆ. ನಮ್ಮ ದೇಶದ ಯಾವ ಭಾಗವನ್ನೂ ಚೀನಾ ಅತಿಕ್ರಮಣ ಮಾಡಿಲ್ಲ, ಅದಕ್ಕೆ ಭಾರತೀಯ ಸೇನೆ ಅವಕಾಶವನ್ನೂ ನೀಡುವುದಿಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ಮೋದಿ ಹೇಳಿದ್ದಾರೆ. ಹಾಗಾದರೆ, ನಮ್ಮ ದೇಶದ ಸೈನಿಕರೇ ಚೀನಾ ಮೇಲೆ ದಾಳಿ ನಡೆಸಿದರೇ? ಎಂದು ಪ್ರಧಾನಿ ಮೋದಿಗೆ ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಹಾಕಿದೆ.

ಲಡಾಖ್​ ಗಡಿಯಲ್ಲಿರುವ ಗಾಲ್ವಾನ್​ ಕಣಿವೆಯಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆದ ಸಂಘರ್ಷದ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಇನ್ನೂ ಆತಂಕದ ವಾತಾವರಣ ತಿಳಿಯಾಗಿಲ್ಲ. ಇದರ ನಡುವೆ ನಿನ್ನೆ ಸರ್ವ ಪಕ್ಷಗಳ ನಾಯಕರ ಜೊತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಈ ವೇಳೆ, ಭಾರತದ ಯಾವುದೇ ಜಾಗವನ್ನೂ ಚೀನಾ ಅತಿಕ್ರಮಣ ಮಾಡಿಕೊಂಡಿಲ್ಲ, ಇದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಚೀನಾದವರು ನಮ್ಮ ದೇಶದೊಳಗೆ ಬಂದು ಕೂತಿಲ್ಲ ಅಥವಾ ನಮ್ಮ ಯಾವುದೇ ಜಾಗ ಅತಿಕ್ರಮಣಗೊಂಡಿಲ್ಲ. ನಮ್ಮ ಜಾಗವವನ್ನು ಯಾರೂ ಕಸಿಯಲು ಸಾಧ್ಯವಿಲ್ಲ ಎಂದು ಮೋದಿ ವಿಪಕ್ಷಗಳಿಗೆ ಮಾಹಿತಿ ನೀಡಿದ್ದರು.

ಭಾರತದ ಗಡಿಯನ್ನು ಯಾರೂ ಅತಿಕ್ರಮಣ ಮಾಡಿಲ್ಲ ಎಂದಮೇಲೆ ನಮ್ಮ ಸೈನಿಕರು ಹುತಾತ್ಮರಾಗಿದ್ದೇಕೆ? ನಮ್ಮ ಸೈನಿಕರೇ ಚೀನಾದ ಪ್ರದೇಶ ಅತಿಕ್ರಮಣ ಮಾಡಿದರೇ? ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯ ಮೂಲಕ ಪ್ರಶ್ನೆ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed