CBSEಯಲ್ಲಿ ಘೋರ ಲೋಪ? ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ ಶಾಕ್! ಅದಲು-ಬದಲಾಯ್ತಾ ಉತ್ತರ ಪ್ರತಿಗಳು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅದಲು-ಬದಲಾಯ್ತಾ ಉತ್ತರ ಪ್ರತಿಗಳು?


Last Updated:

ಪರೀಕ್ಷೆಯಲ್ಲಿ ಬಂದ ಅಂಕಗಳಿಂದ ತೃಪ್ತರಾಗದ ಲಕ್ಷಾಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ನಕಲು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗೆ ಉತ್ತರ ಪತ್ರಿಕೆಯ ಫೋಟೋಕಾಪಿ ಸಿಕ್ಕಿದೆ. ಆದ್ರೆ, ಪೇಪರ್ ನೋಡಿದ ವಿದ್ಯಾರ್ಥಿ ಶಾಕ್ ಆಗಿದ್ದಾನೆ.

ಅದಲು-ಬದಲಾಯ್ತಾ ಉತ್ತರ ಪ್ರತಿಗಳು?
ಅದಲು-ಬದಲಾಯ್ತಾ ಉತ್ತರ ಪ್ರತಿಗಳು?

ನೀಟ್ ಪರೀಕ್ಷೆ ಪ್ರಶ್ನೆ (NEET Question Paper Leak) ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸರ್ವರ್​ ಸಮಸ್ಯೆ ಎದುರಾಗಿದೆ. ಪರೀಕ್ಷೆಯಲ್ಲಿ ಬಂದ ಅಂಕಗಳಿಂದ ತೃಪ್ತರಾಗದ ಲಕ್ಷಾಂತರ ವಿದ್ಯಾರ್ಥಿಗಳು (Students) ಮರುಮೌಲ್ಯಮಾಪನ (Revaluation) ಮತ್ತು ಉತ್ತರ ಪತ್ರಿಕೆಯ ನಕಲು (Photocopy) ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗೆ ಉತ್ತರ ಪತ್ರಿಕೆಯ ಫೋಟೋಕಾಪಿ ಸಿಕ್ಕಿದೆ. ಆದ್ರೆ, ಪೇಪರ್​ ನೋಡಿದ ವಿದ್ಯಾರ್ಥಿ ಶಾಕ್​ ಆಗಿದ್ದಾನೆ.

‘ಈ ಪೇಪರ್​ ನನ್ನದಲ್ಲ’

ಸಿಬಿಎಸ್​ಇ ಪರೀಕ್ಷೆ ಬರೆದಿದ್ದ ವೇದಾಂತ್ ಎಂಬ ವಿದ್ಯಾರ್ಥಿ ಮರುಮೌಲ್ಯಮಾಪನಕ್ಕಾಗಿ ತನ್ನ ಭೌತಶಾಸ್ತ್ರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಗೆ ಅರ್ಜಿ ಸಲ್ಲಿಸಿದ್ದನು. ಆದರೆ, ವೇದಾಂತ್ ಸ್ಕ್ಯಾನ್ ಮಾಡಿದ ಪ್ರತಿ ಮತ್ತು ತನ್ನ ಕೈಬರಹಕ್ಕೆ ಮ್ಯಾಚ್​ ಆಗುತ್ತಿಲ್ಲ, ಇದು ನಾನು ಬರೆದ ಪೇಪರ್​ ಅಲ್ಲ ಎಂದು ಎಕ್ಸ್​ನಲ್ಲಿ ಉತ್ತರ ಪತ್ರಿಕೆಯ ಸಮೇತ ಪೋಸ್ಟ್​​ ಮಾಡಿದ್ದಾರೆ.

“ನಾನು ಸಿಬಿಎಸ್‌ಇ 12ನೇ ತರಗತಿಯ ವಿದ್ಯಾರ್ಥಿ. ಭೌತಶಾಸ್ತ್ರದಲ್ಲಿ ಕಡಿಮೆ ಅಂಕಗಳನ್ನು ಪಡೆದ ನಂತರ, ಸಿಬಿಎಸ್‌ಇ ಮರುಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ನನ್ನ ಉತ್ತರ ಪತ್ರಿಕೆಗಳ ನಕಲು ಪ್ರತಿಗಳಿಗೆ ಅರ್ಜಿ ಸಲ್ಲಿಸಿದ್ದೆ. ಇಂದು ನನಗೆ ಪ್ರತಿಗಳು ಬಂದಿವೆ. ಮತ್ತು ಸಿಬಿಎಸ್‌ಇ ಅಪ್‌ಲೋಡ್ ಮಾಡಿದ ಭೌತಶಾಸ್ತ್ರದ ಉತ್ತರ ಪತ್ರಿಕೆ ನನ್ನದಲ್ಲದ ಕಾರಣ ನಾನು ಶಾಕ್​ ಆಗಿದ್ದೇನೆ’ ಎಂದು ವಿದ್ಯಾರ್ಥಿ  ವೇದಾಂತ್​ ತನ್ನ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾನೆ.

ಕೇವಲ ವೇದಾಂತ್​ ಮಾತ್ರವಲ್ಲದೇ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾದ ಉತ್ತರ ಪತ್ರಿಕೆಗಳು ತಮ್ಮ ಪರೀಕ್ಷೆಯಲ್ಲಿ ಬರೆದದ್ದಕ್ಕೆ ಹೊಂದಾಣಿಕೆ ಆಗುತ್ತಿಲ್ಲ ಎಂದು ಪರೀಕ್ಷೆ ಬರೆದಿದ್ದ ಹಲವು ವಿದ್ಯಾರ್ಥಿಗಳು ಆರೋಪಿಸಿದ್ದು, ಇದು ಮೌಲ್ಯಮಾಪನ ಪ್ರಕ್ರಿಯೆಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಅಧಿಕಾರಿಗಳಿಂದ ಸಂಪೂರ್ಣ ತನಿಖೆ ಮತ್ತು ಹೆಚ್ಚಿನ ಪಾರದರ್ಶಕತೆಯನ್ನು ಒತ್ತಾಯಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸಿಬಿಎಸ್‌ಇ ಹನ್ನೆರಡನೇ ತರಗತಿಯ ಫಲಿತಾಂಶ ಘೋಷಣೆಯಾದ ನಂತರ ಪೋರ್ಟಲ್ ಕ್ರ್ಯಾಶ್​ ಸಮಸ್ಯೆ, ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆಯಲು ವಿಳಂಬ, ಪಾವತಿ ಕಡಿತಗಳು ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದ ವ್ಯತ್ಯಾಸಗಳ ಕುರಿತು ದೇಶಾದ್ಯಂತ ದೂರುಗಳು ಕೇಳಿಬಂದ ಬೆನ್ನಲ್ಲೇ  ಈ ಆರೋಪ ಕೇಳಿಬಂದಿದ್ದು. ಈ ಆರೋಪವು ಮಂಡಳಿಯ OSM ವ್ಯವಸ್ಥೆಯ ಸುತ್ತಲಿನ ಕಳವಳಗಳನ್ನು ತೀವ್ರಗೊಳಿಸಿದ್ದು, ಶನಿವಾರ ಸಿಬಿಎಸ್​ಇ ಪರೀಕ್ಷಾ ಮಂಡಳಿಯು ನ್ಯಾಯಯುತ ಮತ್ತು ಪಾರದರ್ಶಕ ಮೌಲ್ಯಮಾಪನ ಪ್ರಕ್ರಿಯೆಗೆ ಬದ್ಧವಾಗಿದೆ ಎಂದು ಹೇಳಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports