ಯಶ್ ಕವಿ ಮನಸ್ಸಿನ ನಾಯಕ
(ಚಿತ್ರ ಕೃಪೆ: ಯಶ್ ಇನ್ಸ್ಟಾಗ್ರಾಮ್)
ಅಂತಹ ಯಶ್ ಚಿತ್ರಕ್ಕೆ ಏನೋ ಬರೆದುಕೊಡ್ತೀನಿ ಅಂತ ಹೋದರೆ ನಡೆಯೋದೇ ಇಲ್ಲ. ಇದರಲ್ಲಿ ಏನಿದೆ ಅಂತಲೇ ಕೇಳುವುದು ಇದೆ. ಆ ರೀತಿಯ ಯಶ್ ಚಿತ್ರಗಳಲ್ಲಿ ಡ್ರಾಮಾ ಕೂಡ ಒಂದಾಗಿದೆ. “ಹೇಳಿ ಬಿಡು ಗೆಳತಿ ನೀ ಕೊಟ್ಟದ್ದು ತಿಳಿ ನೀಲಿ ಕನಸಾ ಬರೀ ಪೊಲೀ ಕನಸಾ” ಅಂತ ಹೇಳಿರೋದು ಬೇರೆ ಯಾರೋ ಅಲ್ಲ. ಅದು ಯಶ್ ಹೇಳಿದ ಸಾಲೇ ಆಗಿದೆ.
ಈ ಸಾಲುಗಳನ್ನ ನಾನು ಮೊದಲೇ ಹೇಳಿ ಬಿಟ್ಟಿದ್ದೆ. ಆಗಲೇ ಯಶ್ಗೆ ಈ ಸಾಲುಗಳನ್ನ ನಾನು ಹೇಳುವ ಬದಲು, ನೀನು ಹೇಳು ಅಂತಲೂ ನಾನು ಹೇಳಿದೆ.
ಆಗ ಯಶ್ ಒಂದು ಮಾತು ಹೇಳಿದರು. ನಾನು ಹೇಳಿದರೆ ಕಟ್ಟು ಹೋಗುತ್ತದೆ. ಬೇಡ ಇದನ್ನ ನಾನು ಹೇಳುವುದಿಲ್ಲ. ನೀವು ಚೆನ್ನಾಗಿಯೇ ಹೇಳಿದಿರಿ ಅಂತಲೇ ಯಶ್ ಆಗ ಈ ಕವಿತೆಯನ್ನ ಹೇಳೋಕೆ ಮುಂದಾಗಲೇ ಇಲ್ಲ ಅಂತಲೂ ಯೋಗರಾಜ್ ಭಟ್ ಆ ಡ್ರಾಮಾ ಚಿತ್ರದ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ.
ತಬಾಹಿ ಹಾಡಿನ ವಿಚಾರದಲ್ಲಿ ಭಟ್ರು ಟ್ಯೂನ್ ಕೇಳಿಯೇ ಮನದಲ್ಲಿ ಒಂದು ಸ್ಟ್ರಕ್ಚರ್ ರೆಡಿ ಮಾಡಿಕೊಂಡಿದ್ದರು. ಆದರೆ, ಯಶ್ ಮತ್ತು ಕಿಯಾರ ಅಡ್ವಾಣಿ ಅವರ ವಿಡಿಯೋ ನೋಡಿದಾಗ ಮತ್ತಷ್ಟು ಖುಷಿ ಆಗಿದೆ. ಆಗಲೇ ಈ ಕೆಳಗಿನ ಸಾಲುಗಳನ್ನ ಬರೆದಿದ್ದಾರೆ.
ಎಲ್ಲಾ, ಮಿತಿಮೀರಿ ಹೋಗೋಣ ಬಾ..
ಎಲ್ಲಾ, ಗಡಿದಾಟಿ ನೋಡೋಣ ಬಾ…
ಶೃಂಗಾರದಂಗಾರ ಸಿಡಿದೇಳಲು
ಯಶ್ ವಿಷ್ಯೂಲ್ ನೋಡಿಯೇ…
(ಚಿತ್ರ ಕೃಪೆ: ಕನ್ನಡ ಪಿಚ್ಚರ್ ಇನ್ಸ್ಟಾಗ್ರಾಮ್)
ಸಾಗರಾ, ಸರಸರಾ, ದಡವನೂ ದಾಟಲು,
ಭಾವದಾ, ರಭಸವೂ, ಎದೆಯನು ಮೀಟಲು,
ವೈಯಾರ ಮೈಮೋಹ ಜೊತೆಸೇರಲು
ತಬಾಹಿ ..! ತಬಾಹಿ
ಸರಸ, ಸದರ, ಬೆರೆತು, ಸಮರ,
ಪ್ರಣಯಭಾರದಲ್ಲಿ ಪ್ರಾಯವು ಹಗುರ..
ಕೊರೆದಾ ಉಗರಾ ಕವಿತೇ ಮಧುರಾ
ಆದರೆ, ಈ ಒಂದು ಹಾಡು ಬರೆಯೋವಾಗಲೇ ತಬಾಹಿ ಅನ್ನುವ ಪದದ ಜಾಗದಲ್ಲಿ “ನಗಾರಿ” ಅಂತಲೇ ಬರೆದಿದ್ದರು. ಈ ಒಂದು ನಗಾರಿ ಅನ್ನುವ ಪದವನನ್ನು ಇಟ್ಟುಕೊಂಡು ಭಟ್ರು ಒಂದು ವರ್ಶನ್ ಕೂಡ ಬರೆದಿದ್ದರು.
ಹಾಗಾಗಿಯೇ ಅದೇ ಪದವನ್ನ ಬಳಕೆ ಮಾಡಿದೆ ಅಂತ ಟಿವಿ-9 ಸಂದರ್ಶನದಲ್ಲೂ ಭಟ್ರು ಹೇಳಿಕೊಂಡಿದ್ದಾರೆ. ಹಾಗೆ ಕನ್ನಡ ಪಿಚ್ಚರ್ ಯುಟ್ಯೂಬ್ ಸಂದರ್ಶನದಲ್ಲೂ ಯಶ್ ಬಗೆಗಿನ ವಿಶೇಷ ವಿಚಾರವನ್ನ ಹೇಳಿದ್ದಾರೆ ಅಂತಲೂ ಹೇಳಬಹುದು.













