Last Updated:
ಟಾಕ್ಸಿಕ್ ಚಿತ್ರದ ಯಶ್ ಪಾತ್ರದ ಒಂದು ಪೋಸ್ಟರ್ ಹೊರ ಬಂದಿದೆ. ಇದರಲ್ಲಿ ಯಶ್ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಆದರೆ, ಇದು ವಯಸ್ಸಾದ ರಾಯನ ರೋಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದಲ್ಲಿ (Toxic Movie) ಯಶ್ ಮೂರು ಮೂರು ಲುಕ್ ಅಲ್ಲಿದ್ದಾರೆ. ಹಾಗಂತ ಈ ಚಿತ್ರದಲ್ಲಿ ಟ್ರಿಪಲ್ ರೋಲ್ ಅನ್ಕೋಬೇಡಿ. ಇದು ಎರಡು ಪಾತ್ರದ ಚಿತ್ರವೇ ಆಗಿದೆ. ಆದರೆ, ರಾಯ ಪಾತ್ರಕ್ಕೆ (Raya Look) ಎರಡು ಶೇಡ್ ಇವೆ. ಒಂದು ಯಂಗ್ ಲುಕ್ ಇದೆ. ಈ ಯವ್ವನದಲ್ಲಿ ರಾಯ (Raya) ಹೇಗೆ ಇರ್ತಾನೆ ಅನ್ನೋದು ಬಹುತೇಕರಿಗೆ ಗೊತ್ತಾಗಿದೆ. ವಯಸ್ಸಾದ್ಮೇಲೆ ಲಾಂಗ್ ಹೇರ್, ಲಾಂಗ್ ಬಿಯರ್ಡ್ ಬಿಟ್ಟಿರೋದು ತಿಳಿಯುತ್ತದೆ. ಮಗನ ಪಾತ್ರಕ್ಕೆ ಯಶ್ (Yash) ತುಂಬಾನೆ ಸಣ್ಣ ಆಗಿದ್ದಾರೆ. ಅಷ್ಟೆ ಸೂಪರ್ ಆಗಿಯೇ ಕಾಣಿಸುತ್ತಾರೆ. ಇದರ ನಡುವೆ ಈ ಚಿತ್ರದ ರಾಯನ ಪಾತ್ರದ ಒಂದು ಲುಕ್ ಅದ್ಭುತ ಇದೆ. ಅದರ ಪೋಸ್ಟರ್ ಹೆಚ್ಚು ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ.














