Yash Movie: ರಾಕಿ ಭಾಯ್​​ ಅಭಿನಯದ ಈ ಸಿನಿಮಾ ಬಂದು 15 ವರ್ಷ! ಇಂದಿಗೂ ಇದೆ ಹವಾ | | ACTPnews

ರಾಕಿ ಭಾಯ್ ಈ ಸಿನಿಮಾ ಬಂದು 15 ವರ್ಷ; ಇಂದಿಗೂ ಇದೆ ಈ ಚಿತ್ರದ ಭಾರೀ ಹವಾ!


Last Updated:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರ ಬಂದು 15 ವರ್ಷ ಆಗಿದೆ. ಈ ಚಿತ್ರ ರೀಮೇಕ್ ಆಗಿದ್ದರೂ ಬಾಕ್ಸ್ ಆಫೀಸ್ ಅಲ್ಲಿ ಹಂಗಾಮಾ ಮಾಡಿದೆ. ಈ ಚಿತ್ರದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.

ರಾಕಿ ಭಾಯ್ ಈ ಸಿನಿಮಾ ಬಂದು 15 ವರ್ಷ; ಇಂದಿಗೂ ಇದೆ ಈ ಚಿತ್ರದ ಭಾರೀ ಹವಾ!
ರಾಕಿ ಭಾಯ್ ಈ ಸಿನಿಮಾ ಬಂದು 15 ವರ್ಷ; ಇಂದಿಗೂ ಇದೆ ಈ ಚಿತ್ರದ ಭಾರೀ ಹವಾ!

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕಿರಾತಕ ಚಿತ್ರ (Kirataka Movie) ವಿಶೇಷವಾಗಿದೆ. ರೀಮೇಕ್ ಚಿತ್ರ ಓಡದೇ ಇರೋ ದಿನಗಳಲ್ಲಿ ಇದು ಬಾಕ್ಸ್ ಆಫೀಸ್ ಅಲ್ಲಿ ಸದ್ದು ಮಾಡಿದೆ. 100 ಯಶಸ್ವಿ ಪ್ರದರ್ಶನ ಕೂಡ ಕಂಡಿತ್ತು. ಈ ಚಿತ್ರದಲ್ಲಿ ಯಶ್ ಪಾತ್ರದ ಖದರ್ ಜೋರಾಗಿಯೇ ಇತ್ತು. ಓವಿಯಾ (Oviya) ಈ ಸಿನಿಮಾದ ನಾಯಕಿ ಆಗಿದ್ದಾರೆ. ಡೈರೆಕ್ಟರ್ ಪ್ರದೀಪ್ ಕುಮಾರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದರು. ಯಶ್ (Yash) ಸೇರಿದಂತೆ ಡೈರೆಕ್ಟರ್‌ಗೂ ಈ ಸಿನಿಮಾ ಹೆಸರು ತಂದು ಕೊಟ್ಟಿದೆ. 15 ವರ್ಷದ ಹಿಂದೆ ಬಂದ ಈ ಚಿತ್ರಕ್ಕೆ ಜೂನ್-24 ತುಂಬಾನೆ ವಿಶೇಷ ದಿನವೇ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

15 ವರ್ಷದ ಹಿಂದೆ ಬಂದಿತ್ತು ಕಿರಾತಕ

ಯಶ್ ನಟನೆಯ ಚಿತ್ರಗಳಲ್ಲಿ ಕಿರಾತಕ ವಿಶೇಷವಾಗಿದೆ. ಮಂಡ್ಯ ಭಾಷೆಯ ಈ ಚಿತ್ರ ಯಶ್‌ ಅವರಿಗೆ ವಿಶೇಷ ಹೆಸರು ತಂದು ಕೊಟ್ಟಿದೆ. ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಇವರ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿತ್ತು.
Rocking Star Yash Oviya Kirataka Movie Complete 15 years

ಕಿರಾತಕ ಚಿತ್ರದ ಇತರ ವಿಚಾರ

ಕನ್ನಡದ ಈ ಕಿರಾತಕ ಚಿತ್ರಕ್ಕೆ ತಮಿಳಿನ ಚಿತ್ರದ ಆಧಾರವಿದೆ. 2010 ರಲ್ಲಿ ಕಲಾವಾಣಿ ಅನ್ನುವ ಸಿನಿಮಾ ಬಂದಿತ್ತು. ಈ ಸಿನಿಮಾದ ಕತೆಯನ್ನೆ ಡೈರೆಕ್ಟರ್ ಪ್ರದೀಪ್ ಕುಮಾರ್ ಅವರು ಕನ್ನಡದಲ್ಲಿ ರೀಮೇಕ್ ಮಾಡಿದರು. ಇದಕ್ಕೆ ಕಿರಾತಕ ಅಂತ ಹೆಸರಿಟ್ಟಿರು.

ರಾಕಿ ಭಾಯ್‌ಗೆ ಯಶಸ್ಸು ಶುರು

ಯಶ್ ಅವರ ಅಭಿನಯದ ಈ ಚಿತ್ರದಲ್ಲಿ ಅದ್ಭುತವಾಗಿಯೇ ಇದೆ. ಗೂಳಿ ಅನ್ನುವ ಪಾತ್ರಕ್ಕೆ ಜೀವ ತುಂಬಿದ್ದರು. ಈ ಸಿನಿಮಾದಲ್ಲಿ ಯಶ್ ಅವರಿಗೆ ಓವಿಯಾ ಜೋಡಿ ಆಗಿದ್ದರು.

ಕಿರಾತಕನಿಗೆ ಕಿರಾತಕಿ ಅನ್ನುವ ಹಾಗೆ ಇವರ ಜೋಡಿ ಇಲ್ಲಿ ಮಸ್ತ್ ಆಗಿಯೇ ಇತ್ತು. ಈ ಚಿತ್ರದಲ್ಲಿ ಇನ್ನೂ ಒಂದು ಪಾತ್ರ ಇದೆ. ಇದನ್ನ ತಾರಾ ಅನುರಾಧಾ ಅವರು ನಿರ್ವಹಿಸಿದ್ದರು.

ಯಶ್ ಅವರ ಅಮ್ಮನ ಪಾತ್ರವನ್ನೆ ತಾರಾ ಅವರು ಮಾಡಿದ್ದರು. ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ತಂದೆ ರೋಲ್ ಮಾಡಿದ್ದರು. ಇವರೆಡೂ ಪಾತ್ರಗಳು ಜನರನ್ನ ರಂಜಿಸುವ ಕೆಲಸವನ್ನು ಮಾಡಿದ್ದವು.

ಇದು ಮೂರು ಸಾವಿರನೇ ಸಿನಿಮಾ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ಚಿತ್ರಕ್ಕೆ ವಿಶೇಷ ಸ್ಥಾನವ ಇದೆ. ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಆದ ಕನ್ನಡದ 3000 ನೇ ಚಿತ್ರ ಇದಾಗಿದೆ ಅಂತಲೂ ಮಾಹಿತಿ ಸಿಗುತ್ತದೆ.

Rocking Star Yash Oviya Kirataka Movie Complete 15 years

ರಾಕಿಂಗ್ ಸ್ಟಾರ್ ಯಶ್

ಈ ಚಿತ್ರ ಥಿಯೇಟರ್ ಅಲ್ಲಿ ಯಶಸ್ವಿಯಾಗಿಯೇ ರನ್ ಆಗಿದೆ. ಬಾಕ್ಸ್ ಆಫೀಸ್ ಅಲ್ಲೂ ಕಮಾಲ್ ಮಾಡಿದೆ. 100 ದಿನ ಯಶಸ್ವಿಯಾಗಿಯೇ ಇದು ಓಡಿದೆ.

ರೀಮೇಕ್ ಹಿಟ್ ಆಗದ ಸಮಯ

ಕನ್ನಡದಲ್ಲಿ ಮೊದಲೆಲ್ಲ ಬೇರೆ ಭಾಷೆಯ ಚಿತ್ರಗಳು ರೀಮೇಕ್ ಆಗಿವೆ. ಕಿರಾತಕ ಬರುವ ಮುಂಚೆ ಹಾಗೆ ಬಂದ ಚಿತ್ರಗಳು ಸೋತಿರೋದು ಇದೆ.

ಕಿರಾತಕ ಚಿತ್ರದ ಇತರ ವಿಚಾರ

ಈ ಚಿತ್ರ 2011, ಜೂನ್-24 ರಂದು ರಿಲೀಸ್ ಆಗಿದೆ. ಈ ಒಂದು ಲೆಕ್ಕದಂತೆ 2026 ಜೂನ್-24 ಕ್ಕೆ ಈ ಚಿತ್ರ ಬಂದು 15 ವರ್ಷ ಆಗುತ್ತದೆ.

ಈ ಚಿತ್ರಕ್ಕೆ ಆರ್.ಸೆಲ್ವಾ ಕ್ಯಾಮರಾವರ್ಕ್ ಮಾಡಿದ್ದಾರೆ. ವಿ.ಮನೋಹರ್ ಮ್ಯೂಸಿಕ್ ಮಾಡಿದ್ದಾರೆ. ಈಗಾಗಲೇ ಹೇಳಿದಂತೆ ಪ್ರದೀಪ್ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports