Yash: ರಾಯನ ಹೊಸ ಲುಕ್‌ ರಿವೀಲ್‌! ಟಾಕ್ಸಿಕ್‌ ಸಿನಿಮಾ ರಿಲೀಸ್‌ ಆಗೋದು ಆ ತಿಂಗಳಲ್ಲೇನಾ? | | ACTPnews

ಟಾಕ್ಸಿಕ್ ಸಿನಿಮಾ


Last Updated:

Yash: ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಟಾಕ್ಸಿಕ್ ಸಿನಿಮಾ ಈಗ ರೀ-ಶೂಟ್ ಹಂತಕ್ಕೆ ಕಾಲಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟಿಸಿರುವ ಈ ಸಿನಿಮಾದ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದ್ದು,ಮುಂಬೈನಲ್ಲಿ ತಂಡ ರೀ ಶೂಟಿಂಗ್ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

 ಟಾಕ್ಸಿಕ್ ಸಿನಿಮಾ
ಟಾಕ್ಸಿಕ್ ಸಿನಿಮಾ

ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಟಾಕ್ಸಿಕ್ ಸಿನಿಮಾ ಈಗ ರೀ-ಶೂಟ್ ಹಂತಕ್ಕೆ ಕಾಲಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟಿಸಿರುವ ಈ ಸಿನಿಮಾದ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದ್ದು,ಮುಂಬೈನಲ್ಲಿ ತಂಡ ರೀ ಶೂಟಿಂಗ್ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರದ ತೀವ್ರತೆಯನ್ನು ಹೆಚ್ಚಿಸಲು ಹಾಗೂ ಕೆಲವು ವಿಜುವಲ್ ಸೀಕ್ವೆನ್ಸ್‌ಗಳನ್ನು ಇನ್ನಷ್ಟು ಭರ್ಜರಿಯಾಗಿ ತೋರಿಸಲು ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಟಾಕ್ಸಿಕ್ ಸಿನಿಮಾ ತಂಡ ಇದೀಗ ಮುಂಬೈನಲ್ಲಿ ಪ್ರಮುಖ ದೃಶ್ಯಗಳನ್ನು ಮರು ಚಿತ್ರೀಕರಿಸುತ್ತಿದೆ. ರೀ ಶೂಟ್ ಸೆಟ್‌ನಿಂದ ಹಲವು ಮೇಕಿಂಗ್ ಫೋಟೋಗಳು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ವಿಶೇಷವಾಗಿ ಯಶ್ ಅವರ ಪಾತ್ರ ‘ರಾಯ’ನ ಹೊಸ ಗೇಟ್‌ಅಪ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ತಂಡ ರೀ ಶೂಟ್ ಮಾಡುವುದಕ್ಕೆ ಕಾರಣವನ್ನು ಅಧಿಕೃತವಾಗಿ ತಿಳಿಸದಿದ್ದರೂ, ಚಿತ್ರದ ಗುಣಮಟ್ಟವನ್ನು ಹೆಚ್ಚಿಸಲು ಈ ಪ್ರಕ್ರಿಯೆ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಟಾಕ್ಸಿಕ್ ಚಿತ್ರದ ಅತೀ ದೊಡ್ಡ ಆಕರ್ಷಣೆ ಎಂದರೆ ಯಶ್ ಅವರ ಡಬಲ್ ಆಕ್ಟಿಂಗ್. ಎರಡು ವಿಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದು, ಈ ಬಾರಿ ಅವರ ಅಭಿಮಾನಿಗಳು ಹಿಂದೆಂದೂ ನೋಡದ ರೀತಿಯ ಹೊಸ ಅವತಾರಗಳನ್ನು ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ರಾಯ ಎಂಬ ಮುಖ್ಯ ಪಾತ್ರದ ಹೊಸ ಫೋಟೋಗಳನ್ನು ಚಿತ್ರತಂಡ ರಿವೀಲ್ ಮಾಡಿದೆ.

ಟಾಕ್ಸಿಕ್ ಚಿತ್ರವನ್ನು 2026ರ ಮಾರ್ಚ್ 19 ರಂದು ಬಿಡುಗಡೆ ಮಾಡಲು ಟೀಂ ನಿರ್ಧರಿಸಿತ್ತು. ನಂತರ ಜೂನ್ 4ಕ್ಕೆ ಮುಂದೂಡಲಾಯಿತು. ಆದರೆ ಜಾಗತಿಕ ಮಟ್ಟದ ವಿತರಣೆಯ ಕಾರಣದಿಂದ ಬಿಡುಗಡೆ ಮತ್ತೆ ಮುಂದೂಡಲಾಗಿದೆ ಎಂದು ಚಿತ್ರತಂಡ ಅಧಿಕೃತ ಪ್ರಕಟಣೆ ನೀಡಿತ್ತು. ಪ್ರಸ್ತುತ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಚಿತ್ರತಂಡ ಈ ವರ್ಷದ ಅಂತ್ಯದಲ್ಲಿ, ಅಂದರೆ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವತ್ತ ಗಮನ ಹರಿಸುತ್ತಿದೆ ಎಂದು ಹೇಳಲಾಗುತ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed