Last Updated:
ಟಾಕ್ಸಿಕ್ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಇಡೀ ದೇಶದ ಹೃದಯ ಗೆಲ್ಲುತ್ತಾರೆ. ಆಗಸ್ಟ್-26 ರಂದು ನೀವೆಲ್ಲ ಇದಕ್ಕೆ ಸಾಕ್ಷಿ ಆಗುತೀರಾ, ಇದು ಪಕ್ಕಾನೆ ನೋಡಿ. ಹೀಗೆ ಯಶ್ ಹೇಳಿದಾಗ ಕಿಯಾರಾ ಅಡ್ವಾಣಿ ಎಮೋಷನಲ್ ಆದರು. ಕುಳಿತ ಜಾಗದಿಂದಲೆ ಕೈ ಮುಗಿದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಕಿಯಾರಾ ಅಡ್ವಾಣಿ (Kiara Advani) ಬಗ್ಗೆ ಪಾಸಿಟಿವ್ ಮಾತುಗಳೇ ಕೇಳಿ ಬರ್ತಿವೆ. ಹೈದ್ರಾಬಾದ್ ಪ್ರೀ-ರಿಲೀಸ್ ಇವೆಂಟ್ ಅಲ್ಲಿ ಯಶ್ ಕೂಡ ಇದನ್ನೆ ಹೇಳಿದ್ದಾರೆ. ಇಲ್ಲಿವರೆಗೂ ನೀವು ನೋಡಿದ ಕಿಯಾರಾ ಅಡ್ವಾಣಿ ಬೇರೆ ಬಿಡಿ. ಆದರೆ, ಟಾಕ್ಸಿಕ್ ಸಿನಿಮಾ ಬಂದ್ಮೇಲೆ ಕಿಯಾರಾ ಅಡ್ವಾಣಿ (Kiara Advani) ಇಡೀ ದೇಶದ ಹೃದಯ ಗೆಲ್ಲತ್ತಾರೆ. ಇದು ಪಕ್ಕಾನೆ ನೋಡಿ ಅಂತಲೇ ಯಶ್ (Yash) ಹೇಳಿದ್ದಾರೆ. ಈ ರೀತಿಯ ಮಾತುಗಳನ್ನ ಕೇಳಿದ್ಮೇಲೆ ಕಿಯಾರಾ ಎಮೋಷನಲ್ ಆಗಿರೋದು ಇದೆ. ಅಷ್ಟೆ ಗೌರವದಿಂದಲೇ ಯಶ್ಗೆ ಕುಳಿತದಲ್ಲಿಂದಲೇ ಕೈಮುಗಿದು ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಮುಂದೆ ಇದೆ ಓದಿ.














