Last Updated:
ರಾಕಿಂಗ್ ಸ್ಟಾರ್ ಯಶ್ ಯಾರಿಗೆ “Grateful” ಆಗಿ ಇರ್ತಾರೆ? ಆ ಇಬ್ಬರು ವಿಶೇಷ ವ್ಯಕ್ತಿಗಳು ಯಾರು? ಲಕ್ಕಿ ಚಿತ್ರದ ಸಮಯ ಯಶ್ ಹೇಳಿದ್ದೇನು? ಅದರ ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಕನಸುಗಳು ದೊಡ್ಡವೇ ಇದ್ದವು. ಸಿನಿಮಾಗೋಸ್ಕರ ಸಾಕಷ್ಟು ಶ್ರಮ ಪಟ್ಟಿರೋದು ಇದೆ. ಆದರೆ, “Grateful” ಆಗಿರೋದು ಇಬ್ಬರಿಗೇನೆ ನೋಡಿ. ಆ ಇಬ್ಬರು ಇವರ ಜೀವನದಲ್ಲಿ ತುಂಬಾನೆ ವಿಶೇಷ ವ್ಯಕ್ತಿಗಳೇ ಆಗಿದ್ದಾರೆ. ಈ ಒಂದು ವಿಷಯವನ್ನ ಲಕ್ಕಿ ಚಿತ್ರದ (Lucky Movie) ಟೈಮ್ ಅಲ್ಲಿಯೇ ಯಶ್ ಹೇಳಿಕೊಂಡಿದ್ದಾರೆ. ಈ ಚಿತ್ರದ ವಿಚಾರವಾಗಿ ನಟಿ ರಮ್ಯಾ ಮತ್ತು ಯಶ್ (Yash) ನಡುವೆ ಏನೋ ಮುನಿಸು ಅನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಯಶ್ ಅದಕ್ಕೆಲ್ಲ ಆಗಲೇ ಕ್ಲಾರಿಟಿ ಕೊಟ್ಟಿದ್ದರು. ರಮ್ಯ ಮತ್ತು ನನ್ನ ನಡುವೆ ಯಾವುದೆ ಜಗಳವೂ ಇಲ್ಲ. ಏನೂ ಇಲ್ಲ. ನಾನು ಹಠವಾದಿ, ರಮ್ಯಾ ಕೂಡ ಹಠವಾದಿ ಅಂತಲೇ ಯಶ್ ಹೇಳಿಕೊಂಡಿದ್ದರು. ಇವರ ಹಳೆ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.














