Last Updated:
Yamuna Srinidhi : ನಟಿ ಯಮುನಾ ಶ್ರೀನಿಧಿ ಅವರು ಬೆಂಗಳೂರು ಬಿಟ್ಟರಾ? ಮತ್ತೆ ಬೆಂಗಳೂರಿಗೆ ಬರಲ್ವಾ?
ಮಾಜಿ ಬಿಗ್‌ಬಾಸ್ (Bigg Boss) ಸ್ಪರ್ಧಿ ಹಾಗೂ ಖ್ಯಾತ ನಟಿ ಯಮುನಾ ಶ್ರೀನಿಧೀ (Yamuna Srinidhi) ಅವರು ಬೆಂಗಳೂರು (Bengaluru) ಬಿಟ್ಟರಾ? ಕಿರುತೆರೆಯಲ್ಲಿ ಸಖತ್ ಸದ್ದು ಮಾಡುತ್ತಿರುವ, ನೃತ್ಯಗಾರ್ತಿಯಾಗಿರುವ, ಅಭಿನಯದ ಮೂಲಕ ವ್ಯಾಪಕ ಮೆಚ್ಚುಗೆ ಗಳಿಸಿರುವ ನಟಿ ಹೈದರಾಬಾದ್ಗೆ ಶಿಫ್ಟ್ ಆದ್ರಾ? ಇಲ್ಲಿದೆ ವರದಿ.
ಹೈದರಾಬಾದ್! ಕೆಲವೊಮ್ಮೆ ಮನೆ ಎಂದರೆ ನಾವು ಆಯ್ಕೆ ಮಾಡಿಕೊಳ್ಳುವ ಸ್ಥಳವಲ್ಲ; ನಾವು ಪ್ರೀತಿಸುವವರಿಗೆ ನಮ್ಮ ಅಗತ್ಯವಿರುವ ಜಾಗವೇ ನಮ್ಮ ಮನೆಯಾಗಿ ಬಿಡುತ್ತದೆ ಎಂದು ಯಮುನಾ ಶ್ರೀನಿಧಿ ಅವರು ಹೈದರಾಬಾದ್ನಿಂದ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.
ಹೌದು, ಈ ಮೂಲಕ ತಾವು ಹೈದಾರಾಬಾದ್ಗೆ ಶಿಫ್ಟ್ ಆಗಿರುವುದಾಗಿ ಹೇಳಿದ್ದಾರೆ. ವಯಸ್ಸಾದ ಅತ್ತೆ-ಮಾವನ ಆರೈಕೆಗಾಗಿ ಅವರು ಮುತ್ತಿನ ನಗರಿಗೆ ತೆರಳುತ್ತಿದ್ದು, ವೃತ್ತಿಗಿಂತ ಕುಟುಂಬಕ್ಕೆ ಆದ್ಯತೆ ನೀಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್ ಹಾಗೂ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡು ಅವರು ಭಾರೀ ಸುದ್ದಿಯಾಗಿದ್ದರು.
ಬಿಗ್ ಬಾಸ್ ಸೀಸನ್ 11ರಲ್ಲಿ ಯಮುನಾ ಶ್ರೀನಿಧಿ ಅವರು ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಲ್ಲದೇ ಮೊದಲ ಸ್ಪರ್ಧಿಯಾಗಿ ಮನೆಯಿಂದ ಔಟ್ ಆಗಿದ್ದರು. ಇದ್ದ ಕೆಲವೇ ಕೆಲವು ದಿನಗಳಾಗಿದ್ದರೂ ಯಮುನಾ ಅವರು ಸಖತ್ ರಗಡ್ ಆಗಿ ಆಟ ಆಡಿ ಫ್ಯಾನ್ಸ್ ಮನ ಗೆದ್ದಿದ್ದರು. ದೊಡ್ಮನೆಗೆ ಸೇರಿದ ಒಂದೇ ವಾರದಲ್ಲಿ ಮನೆಯಿಂದ ಹೊರಬಂದ ಯಮುನಾ ಶ್ರೀನಿಧಿ ಇದೀಗ ಮತ್ತೆ ಕಿರುತೆರೆಯಲ್ಲಿ ಆ್ಯಕ್ಟಿವ್ ಆದರು.
ಒಂದೇ ವಾರಕ್ಕೆ ನಟಿ ಯಮುನಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಹೆಚ್ಚು ಆ್ಯಕ್ಟಿವ್ ಆಗಿರದ ಕಾರಣ, ವೋಟಿಂಗ್ ಕಡಿಮೆ ಬಂದಿರಬಹುದು ಎನ್ನಲಾಗಿತ್ತು. ಬಿಗ್ ಬಾಸ್ ಬರುವ ಮುಂಚೆ ಯಮುನಾ ಅವರು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಟೀಚರ್ ಪಾತ್ರವನ್ನು ನಿಭಾಯಿಸಿದ್ದರು. ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿಯಲ್ಲಿ ಸೌಪರ್ಣಿಕಾ ಆಗಿ ಕಾಣಿಸಿಕೊಂಡಿದ್ದರು.














