ಮಲೆಯಾಳಂ ಆಶಾ ಚಿತ್ರ ಜನರಿಗೆ ಇಷ್ಟ ಆಗಿದೆ. ಇದೀಗ ಈ ಚಿತ್ರ ಒಟಿಟಿಗೆ ಬರ್ತಿದೆ. ಜೀ-5 ಅಲ್ಲಿ ಇದು ಸ್ಟ್ರೀಮಿಂಗ್ ಆಗುತ್ತಿದೆ. ಕೇವಲ ಮಲೆಯಾಳಂ ಭಾಷೆಯಲ್ಲಿ ಇದು ಸ್ಟ್ರೀಮಿಂಗ್ ಆಗುತ್ತಿಲ್ಲ.
ನಟಿ ಊರ್ವಶಿ “ಆಶಾ” ಒಟಿಟಿಗೆ; ಯಾವಾಗ ? ಎಲ್ಲಿ?
(ಚಿತ್ರ ಕೃಪೆ: ಪಿ.ಆರ್.ಓ)
ಇದು ಬಹು ಭಾಷೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗೂ ಈ ಚಿತ್ರ ಡಬ್ ಆಗಿದೆ. ಹಾಗೆ ಇದು ಅಕ್ಟೋಬರ್ ತಿಂಗಳಲ್ಲಿಯೇ ಸ್ಟ್ರೀಮಿಂಗ್ ಆಗುತ್ತಿದೆ.
ಆಶಾ ಚಿತ್ರ ಈ ತಿಂಗಳು ಸ್ಟ್ರೀಮಿಂಗ್ ಆಗುತ್ತಿದೆ. ಅಕ್ಟೋಬರ್-16 ರಂದು ಈ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಮಾಹಿತಿ ಅಧಿಕೃತವಾಗಿಯೇ ಹೊರ ಬಿದ್ದಿದೆ.
ಆದರೆ, ಇದರಿಂದ ಆಶಾಳ ಲೈಫ್ ಅಲ್ಲಿ ಏನೇನೋ ಆಗಿ ಹೋಗುತ್ತದೆ. ಇಡೀ ಕುಟುಂಬವೇ ಬುಡಮೇಲಾಗುತ್ತದೆ ನೋಡಿ.
ಈ ತಿಂಗಳು 16ಕ್ಕೆ ಸ್ಟ್ರೀಮಿಂಗ್
(ಚಿತ್ರ ಕೃಪೆ: ಆಶಾ ದಿ ಮೂವಿ ಇನ್ಸ್ಟಾಗ್ರಾಮ್)
ಈ ಚಿತ್ರ ಎಲ್ಲ ಸಿನಿಮಾದ ರೀತಿ ಇಲ್ವೇ ಇಲ್ಲ. ಇಲ್ಲಿ ನಾಯಕ ಮತ್ತು ಖಳನಾಯಕನ ಕಾನ್ಸೆಪ್ಟ್ ಇಲ್ವೇ ಇಲ್ಲ. ಆ ರೀತಿಯ ಈ ಚಿತ್ರ ಕಳೆದ ತಿಂಗಳು ಸೆಪ್ಟೆಂಬರ್-11 ರಂದು ರಿಲೀಸ್ ಆಗಿತ್ತು. ಭಾರೀ ಸದ್ದು ಕೂಡ ಮಾಡಿತ್ತು
ಥಿಯೇಟರ್ಗೆ ಬಂದ ಈ ಚಿತ್ರವನ್ನ ಜನ ಒಪ್ಪಿಕೊಂಡರು. ಆದರೆ, ಈ ಚಿತ್ರ ತೆರೆಗೆ ಬಂದು ಒಂದೇ ತಿಂಗಳಲ್ಲಿಯೇ ಒಟಿಟಿಗೆ ಬರ್ತಿದೆ. ಅಕ್ಟೊಬರ್-16 ರಿಂದಲೇ ಇದು ಸ್ಟ್ರೀಮಿಂಗ್ ಆಗುತ್ತಿದೆ.
ಈ ಚಿತ್ರವನ್ನ ನಿರ್ದೇಶಕ ಸಫರ್ ಸನಲ್ ಡೈರೆಕ್ಷನ್ ಮಾಡಿದ್ದಾರೆ. ಇವರು ಇಲ್ಲಿ ನಾಯಕ ಮತ್ತು ಖಳನಾಯಕ ಅನ್ನುವ ಪರಿಕಲ್ಪನೆ ಬಿಟ್ಟು ಚಿತ್ರ ಮಾಡಿದ್ದಾರೆ.
ಅಸಹಾಯಕತೆ ಮತ್ತು ಆಂತರಿಕ ಶಕ್ತಿಯನ್ನ ಅಷ್ಟೆ ಆಳವಾಗಿಯೇ ಅರ್ಥ ಮಾಡಿಕೊಂಡು ಅಭಿನಯಿಸಿದ್ದಾರೆ. ಈ ಮೂಲಕ ಸಿನಿಮಾ ಪ್ರೇಮಿಗಳ ಹೃದಯವನ್ನು ಗೆದ್ದಿದ್ದಾರೆ ಅಂತಲೂ ಹೇಳಬಹುದು.













