Last Updated:
Darshan Case: ರೇಣುಕಾಸ್ವಾಮಿ ಮೃ*ತದೇಹ ಎಸೆಯೋ ಮಾಸ್ಟರ್ ಪ್ಲಾನ್? ತನಿಖೆಯಲ್ಲಿ ಲೋಕ? ಸಾಕ್ಷಿ ಸೃಷ್ಟಿಸಿದ್ರಾ? ತನಿಖಾ ತಂಡದ ವಿರುದ್ಧವೇ ಇಲಾಖಾ ತನಿಖೆಯ ಶಾಕ್!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy case) ದರ್ಶನ್ (Darshan) ಅಂಡ್ ಗ್ಯಾಂಗ್ ಸಂಕಷ್ಟದಲ್ಲಿದೆ. ಆದರೆ ಈಗ ಪ್ರಕರಣದ ತನಿಖಾ ತಂಡಕ್ಕೆ ಕೂಡಾ ಸಂಕಷ್ಟ ಎದುರಾಗುವ ಸಾಧ್ಯತೆ ಕಂಡು ಬಂದಿದೆ. ಪ್ರದೂಷ್ (Pradosh) ಮಾಫಿ ಸಾಕ್ಷಿ ಹೇಳಿಕೆ ಬೆನ್ನಲ್ಲೆ ಪಿಎಸ್ಐ ವಿನಯ್ಗೆ ಸಂಕಷ್ಟ ಎದುರಾಗಲಿದೆಯಾ?
ಮಾಫಿ ಸಾಕ್ಷಿ ಪ್ರಕ್ರಿಯೆ ನಡೆದು ಇನ್ನು ಕ್ರಾಸ್ ಎಕ್ಸಾಮಿನೇಷನ್ ನಡೆಯಬೇಕಿರುವ ಹೊತ್ತಿನಲ್ಲಿ ಪ್ರಕರಣದ ತನಿಖೆ ಪ್ರಶ್ನಿಸಿ ದೂರು ಸಲ್ಲಿಸಲಾಗಿರುವುದು ಇಡೀ ಕೇಸ್ನಲ್ಲಿ ದೊಡ್ಡ ಟ್ವಿಸ್ಟ್ ಕೊಟ್ಟಿದೆ.
ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಸೂಚನೆ ನೀಡಲಾಗಿದೆ. ತನಿಖಾಧಿಕಾರಿ ಎಸಿಪಿ ಚಂದನ್ ಹಾಗೂ ಪಿಎಸ್ಐ ವಿನಯ್ ವಿರುದ್ಧ ಇಲಾಖಾ ತನಿಖೆ ನಡೆಯಲಿದೆ.
ಸ್ನೇಹಮಯಿ ಕೃಷ್ಣ ತನಿಖೆಯಲ್ಲಿನ ಲೋಪ ದೋಷಗಳ ಸಂಬಂಧವಾಗಿ ದೂರು ನೀಡಿದ್ದರು. ತನಿಖೆಯಲ್ಲಿ ಹಲವು ಸಾಕ್ಷಿಗಳನ್ನ ಸೃಷ್ಟಿಸಲಾಗಿದೆ. ಪಿಎಸ್ಐ ವಿನಯ್ನನ್ನು ಆರೋಪಿ ಸ್ಥಾನದಿಂದ ತಪ್ಪಿಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು.
ಡಿಜಿ & ಐಜಿ ಡಾ. ಎಂ ಸಲೀಂಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದು, ದೂರಿನ ಬಗ್ಗೆ ಪರಿಶೀಲನೆ ನಡೆಸುವಂತೆ ಬೆಂಗಳೂರು ಕಮಿಷನರ್ ಗೆ ಸೂಚನೆ ನೀಡಲಾಗಿದೆ. ಸದ್ಯ ಡಿಜಿ & ಐಜಿ ಸೂಚನೆ ಮೇರೆಗೆ ಕಮಿಷನರ್ಯಿಂದ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.
ಪಿಎಸ್ಐ ವಿನಯ್ನನ್ನು ಆರೋಪಿ ಪಟ್ಟಿಗೆ ಸೇರಿಸುವಂತೆ ದೂರು ನೀಡಲಾಗಿತ್ತು. ಪಿಎಸ್ಐ ಅಣತಿಯಂತೆ ಆರೋಪಿಗಳು ಮೃತದೇಹ ಬಿಸಾಡಿದ್ದರು. ಹೀಗಾಗಿ ವಿಯ್ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಲೋಪ ಎಸಗಿರುವ ಆರೋಪ ಕೇಳಿ ಬಂದಿದ್ದು ಪ್ರಕರಣದಲ್ಲಿ ಸುಳ್ಳು ಸಾಕ್ಷಿಗಳನ್ನ ಸೃಷ್ಟಿಸಿದ್ದಾರೆ ಎಂದಿದ್ದಾರೆ. ಹೀಗಾಗಿ ಇಲಾಖೆಯ ಅಂತರಿಕ ತನಿಖೆ ಮಾಡುವಂತೆ ಮನವಿ ಮಾಡಲಾಗಿತ್ತು.
ಸದ್ಯ ತನಿಖಾ ತಂಡದ ವಿರುದ್ಧವೇ ಜಂಟಿ ಪೊಲೀಸ್ ಆಯುಕ್ತರು ಇಲಾಖಾ ತನಿಖೆಗೆ ಮುಂದಾಗಿದ್ದಾರೆ.
ವರದಿ: ಮಾದೇಶ್ ಸಿ.ಎನ್ ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು














