Last Updated:
ನಂಜನಗೂಡಿನಲ್ಲಿ ಹನುಮ ಜಯಂತಿ ಸಂದರ್ಭ ರಾಜ್ಯ ಮಟ್ಟದ ಪಂಜ ಕುಸ್ತಿ, ಮೈಸೂರಿನ ರಾಜುಗೆ ವಜ್ರಬಾಹು 2026, ಹಾಸನದ ಶಾರದಾಗೆ ಶಕ್ತಿ ದೀಪ್ತಿ 2026, ಶ್ರೇಯಾಂಕ್ ಯು. ಪಟೇಲ್ ದಕ್ಷಿಣ ಕಾಶಿ ಕಪ್ ಗೆಲುವು.
ಮೈಸೂರು: ನಂಜನಗೂಡಿನ (Nanjanagudu) ಅರಮನೆ ಮೈದಾನದಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪಂಜ ಕುಸ್ತಿ (Wrestling) ಪಂದ್ಯಾವಳಿ ಇಡೀ ಜಿಲ್ಲೆಯನ್ನೇ ರೋಮಾಂಚನಗೊಳಿಸಿದೆ. ಕರ್ನಾಟಕದ (Karnataka) ಮೂಲೆ ಮೂಲೆಗಳಿಂದ ಬಂದಿದ್ದ ಬಲಿಷ್ಠ ಬಾಹುಬಲಿಗಳು ತಮ್ಮ ತೋಳ್ಬಲ ಪ್ರದರ್ಶಿಸಲು ವೇದಿಕೆ ಏರಿದ್ದರು. ನಂಜನಗೂಡು ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಟೂರ್ನಿಯಲ್ಲಿ ರಾಜ್ಯದ (State) ವಿವಿಧ ಭಾಗಗಳಿಂದ 80ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿ ಧೂಳೆಬ್ಬಿಸಿದ್ದಾರೆ.
ಲೋಕಲ್ ಬಾಯ್ಸ್ ಪ್ರತಿಭೆ ಗುರುತಿಸಲು ನಡೆಸಿದ ವಿಶೇಷ ದಕ್ಷಿಣ ಕಾಶಿ ಕಪ್ ಫೈನಲ್‍ನಲ್ಲಿ ನಂಜನಗೂಡಿನ ಶ್ರೇಯಾಂಕ್ ಯು. ಪಟೇಲ್ ಮತ್ತು ಯಶವಂತ್ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಿತು. ಅಂತಿಮವಾಗಿ ಶ್ರೇಯಾಂಕ್ ಯು. ಪಟೇಲ್ ಕಪ್ ಗೆದ್ದು ಬೀಗಿದರು. ಮೊದಲ ಬಾರಿಗೆ ನಡೆದ ಈ ಪಂದ್ಯಾವಳಿಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಚಪ್ಪಾಳೆ, ಶಿಳ್ಳೆಗಳ ಮೂಲಕ ಇಡೀ ಮೈದಾನವನ್ನು ಗರಂ ಮಾಡಿದ್ದರು. ಪಂಜ ಕುಸ್ತಿಯ ಈ ಬಿಗ್ ಫೈಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗ್ತಿದೆ.
Mysore,Mysore,Karnataka
May 20, 2026 11:31 AM IST












