Last Updated:
ಐಸಿಸಿ 2027ರ ಏಕದಿನ ವಿಶ್ವಕಪ್ನಲ್ಲಿ ಯಾವ ತಂಡಗಳು ಆಡುತ್ತವೆ ಎನ್ನುವುದು ನಿಧಾನವಾಗಿ ಸ್ಪಷ್ಟವಾಗುತ್ತಿದೆ. ಈ ಮಧ್ಯೆ ವೆಸ್ಟ್ ಇಂಡೀಸ್ ತಂಡಕ್ಕೆ ನೇರವಾಗಿ ಅರ್ಹತೆ ಪಡೆಯುವ ಅವಕಾಶ ಕೈ ತಪ್ಪಿ ಹೋಗಿದೆ. ಆದರೆ ಕೆರಿಬಿಯನ್ನರಿಗೆ ಸಂಪೂರ್ಣವಾಗಿ ವಿಶ್ವಕಪ್ ಬಾಗಿಲು ಮುಚ್ಚಿಲ್ಲ.
ಐಸಿಸಿ (ICC) 2027ರ ಏಕದಿನ (ODI) ವಿಶ್ವಕಪ್ (World Cup) ಟೂರ್ನಿಗೆ ದಿನಗಳು ಹತ್ತಿರವಾಗುತ್ತಿವೆ. ಐಸಿಸಿ ಮೆಗಾ ಟೂರ್ನಿ ಮುಂದಿನ ವರ್ಷ ಪ್ರಾರಂಭವಾಗಲಿದೆ. ತಂಡಗಳಿಗೆ ಆತಂಕ ಹೆಚ್ಚಾಗುತ್ತಿದೆ. ಎರಡು ಬಾರಿ ವಿಶ್ವ ಚಾಂಪಿಯನ್ (Champion) ಆದ ವೆಸ್ಟ್ ಇಂಡೀಸ್ (West Indies) ತಂಡಕ್ಕೆ ನೇರವಾಗಿ ಅರ್ಹತೆ ಪಡೆಯುವ ಅವಕಾಶ ಕೈ ತಪ್ಪಿ ಹೋಗಿದೆ. ಆದರೆ ಕೆರಿಬಿಯನ್ನರಿಗೆ (Caribbeans) ಸಂಪೂರ್ಣವಾಗಿ ವಿಶ್ವಕಪ್ ಬಾಗಿಲು ಮುಚ್ಚಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಮುಂದಿನ ವರ್ಷದ ವಿಶ್ವಕಪ್ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎನ್ನುವುದು ಸರಿಯಲ್ಲ.














