Women’s T20I WC: ಪಾಕಿಸ್ತಾನಕ್ಕೆ ಮತ್ತೊಂದು ಅವಮಾನಕರ ಸೋಲು! ಟೂರ್ನಿಯಿಂದ ಬಹುತೇಕ ಔಟ್! | ಕ್ರೀಡಾ ಸುದ್ದಿ | ACTPnews

ಪಾಕಿಸ್ತಾನ ಮಹಿಳಾ ತಂಡ


Last Updated:

ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 123 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತ್ತು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನವು ತನ್ನ ಪೂರ್ಣ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 100 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಸೋಲಿನೊಂದಿಗೆ, ಪಾಕಿಸ್ತಾನ ತನ್ನ ಮೂರು ಪಂದ್ಯಗಳಲ್ಲಿಯೂ ಸೋತು, ಗ್ರೂಪ್ ಎ ನಲ್ಲಿ ಒಂದೇ ಒಂದು ಅಂಕವಿಲ್ಲದೆ 5 ಸ್ಥಾನದಲ್ಲಿದೆ.

ಪಾಕಿಸ್ತಾನ ಮಹಿಳಾ ತಂಡ
ಪಾಕಿಸ್ತಾನ ಮಹಿಳಾ ತಂಡ

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮತ್ತೊಂದು ಆಘಾತಕಾರಿ ಸೋಲು ಕಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಭಾರತ, ದಕ್ಷಿಣ ಆಫ್ರಿಕಾದಂತಹ ದೊಡ್ಡ ತಂಡಗಳ ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನ ತಂಡ ಈ ಬಾರಿ ಅವರಿಗಿಂತ ಕಡಿಮೆ ಸಾಮರ್ಥ್ಯ ಇರುವ ತಂಡವಾದ ಬಾಂಗ್ಲಾದೇಶ ವಿರುದ್ಧ ಮುಖಭಂಗಕ್ಕೆ ಒಳಗಾಗಿದೆ. ಶನಿವಾರ ಸೌತಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶದಿಂದ 23 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದೆ. ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 123 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತ್ತು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನವು ತನ್ನ ಪೂರ್ಣ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 100 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಸೋಲಿನೊಂದಿಗೆ, ಪಾಕಿಸ್ತಾನ ತನ್ನ ಮೂರು ಪಂದ್ಯಗಳಲ್ಲಿಯೂ ಸೋತು, ಗ್ರೂಪ್ ಎ ನಲ್ಲಿ ಒಂದೇ ಒಂದು ಅಂಕವಿಲ್ಲದೆ 5 ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ, ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿತು. ಆದರೆ ಬಾಂಗ್ಲಾ ತಂಡವು ಕೇವಲ ಐದು ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಪಡೆಯಿತು. ನಂತರ, ಸ್ಕೋರ್ 13 ಆಗಿದ್ದಾಗ ಮೂರನೇ ವಿಕೆಟ್ ಪತನವಾಯಿತು. ಆದರೂ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಒಟ್ಟು 123 ರನ್‌ಗಳನ್ನು ಗಳಿಸಿತು. ಬಾಂಗ್ಲಾದೇಶ ಪರ, ನಾಯಕಿ ನಿಗರ್ ಸುಲ್ತಾನ 38 ಎಸೆತಗಳಲ್ಲಿ 36 ರನ್ ಗಳಿಸಿದರೆ, ಶೋಭನಾ ಮೋಸ್ತರಿ 19 ಎಸೆತಗಳಲ್ಲಿ 22 ರನ್‌ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ಶೋರ್ನಾ ಅಕ್ತರ್ 22 ಎಸೆತಗಳಲ್ಲಿ 39 ರನ್ ಗಳಿಸಿ ತಂಡದ ಮೊತ್ತವನ್ನ 120ರ ಗಡಿ ದಾಟಿಸಲು ನೆರವಾದರು. ಪಾಕಿಸ್ತಾನ ಪರ, ನಾಯಕಿ ಫಾತಿಮಾ ಸನಾ ಎರಡು ವಿಕೆಟ್ ಪಡೆದರೆ, ಇತರ ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು.

100ಕ್ಕೆ ಸುಸ್ತಾದ ಪಾಕಿಸ್ತಾನ

123 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಮಹಿಳಾ ತಂಡವು ಉತ್ತಮ ಆರಂಭ ಪಡೆಯಿತು. ಹಿಂದಿನ ಪಂದ್ಯಗಳಂತೆ ಮೊದಲ ವಿಕೆಟ್​​​​ಗೆ 49 ರನ್‌ಗಳ ಭರ್ಜರಿ ಆರಂಭ ಪಡೆದುಕೊಂಡಿತು. ಆದರೆ ಪವರ್​ ಪ್ಲೇ ನಂತರ ಪಾಕಿಸ್ತಾನ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತು. ಕೊನೆಗೆ ಇಡೀ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 100 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಇದನ್ನೂ ಓದಿ: Virat Kohli RCB: ವಿರಾಟ್ ಕೊಹ್ಲಿ ಇನ್ನೂ ಎಷ್ಟು ವರ್ಷ ಆರ್‌ಸಿಬಿ ಪರ ಆಡ್ತಾರೆ? ಬೆಂಗಳೂರು ಸಿಇಒ ಪ್ರಮುಖ ಘೋಷಣೆ

ಪಾಕಿಸ್ತಾನ ಪರ, ಆರಂಭಿಕ ಆಟಗಾರ್ತಿ ಮುನೀಬಾ ಅಲಿ 30 ಎಸೆತಗಳಲ್ಲಿ 25 ರನ್‌ಗಳನ್ನು ಗಳಿಸಿದರೆ, ಸಹ ಆರಂಭಿಕ ಆಟಗಾರ್ತಿ ಗುಲ್ ಫಿರೋಜಾ 18 ಎಸೆತಗಳಲ್ಲಿ 23 ರನ್‌ಗಳನ್ನು ಗಳಿಸಿ ಟಾಪ್ ಸ್ಕೋರರ್ ಆದರು. ಉಳಿದಂತೆ ಆಯೇಷಾ ಜಾಫರ್ 12 ಎಸೆತಗಳಲ್ಲಿ 11 ರನ್‌ ಮತ್ತು ನಾಯಕಿ ಫಾತಿಮಾ ಸನಾ 17 ಎಸೆತಗಳಲ್ಲಿ 10 ರನ್‌ಗಳನ್ನು ಗಳಿಸಿ ಎರಡಂಕಿ ದಾಟಿದರು. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

ಬಾಂಗ್ಲಾದೇಶದ ಪರ ನಹಿದಾ ಅಖ್ತರ್ 18ಕ್ಕೆ3, ಸಂಜಿದಾ ಅಖ್ತರ್ 21ಕ್ಕೆ3, ರೀತು ಮೋನಿ 24ಕ್ಕೆ1, ರಬೆಯಾ ಖಾನ್ 17ಕ್ಕೆ1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed