NEET ಪರೀಕ್ಷೆ ಬರೆಯಲು 2,500 ಕಿ.ಮೀ ಪ್ರಯಾಣಿಸ್ಬೇಕಾ? ನಾಗ್ಬುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ / NEET Exam Shock: Nagpur Student Allotted Abu Dhabi Centre | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

2,500 ಕಿ.ಮೀ ದೂರದಲ್ಲಿ NEET ಪರೀಕ್ಷೆ!


Last Updated:

ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ (NTA) ಮತ್ತೊಂದು ಎಡವಟ್ಟು ಮಾಡಿದೆ. ನಾಳೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಓರ್ವ ವಿದ್ಯಾರ್ಥಿಗೆ ಬಿಗ್​ ಶಾಕ್​ ನೀಡಲಾಗಿದೆ. ಪರೀಕ್ಷೆ ಬರೆಯೋಕೆ 2500 ಕಿಮೀ ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದಿದೆ.

2,500 ಕಿ.ಮೀ ದೂರದಲ್ಲಿ NEET ಪರೀಕ್ಷೆ!
2,500 ಕಿ.ಮೀ ದೂರದಲ್ಲಿ NEET ಪರೀಕ್ಷೆ!

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ. ಓರ್ವ ವಿದ್ಯಾರ್ಥಿಯ ನೀಟ್​ ಪರೀಕ್ಷೆ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ (Question Paper Leak) ಕಾರಣಕ್ಕೆ ಜೂನ್ 21ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿರುವಾಗಲೇ ಶಾಕ್​ ಕೊಟ್ಟಿದೆ. ನಾಗಪುರದ 18 ವರ್ಷದ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಅವರಿಗೆ ಅಬುಧಾಬಿ (UAE) ಪರೀಕ್ಷಾ ಕೇಂದ್ರ ನಿಯೋಜಿಸಿದೆ.

ನಾಗಪುರದ 18 ವರ್ಷದ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಅವರಿಗೆ ಅಬುಧಾಬಿ (ಯುಎಇ) ಪರೀಕ್ಷಾ ಕೇಂದ್ರ ನಿಯೋಜಿಸಿರುವುದು ದೊಡ್ಡ ಆಘಾತ ಸೃಷ್ಟಿಸಿದೆ. ಈಗ ವಿದ್ಯಾರ್ಥಿ ಪರೀಕ್ಷೆ ಬರೆಯೋಕೆ 2500 ಕಿಮೀ ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದಿದೆ.

ಅಬುದಾಭಿ ಪರೀಕ್ಷಾ ಕೇಂದ್ರ ನಿಯೋಜನೆ!

ಈ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್, ತನ್ನ ಮೂರು ಆಯ್ಕೆಗಳಲ್ಲಿ ಎಲ್ಲವೂ ನಾಗಪುರದ ಸುತ್ತಮುತ್ತಲಿನ ಸ್ಥಳೀಯ ಕೇಂದ್ರಗಳನ್ನೇ ಆಯ್ಕೆ ಮಾಡಿದ್ದರು. ಆದರೆ NTA ಜೂನ್ 14ರಂದು ಜನರೇಟ್ ಮಾಡಿದ ಹಾಲ್ ಟಿಕೆಟ್‌ನಲ್ಲಿ ಅಬುಧಾಬಿ ಇಂಡಿಯನ್ ಸ್ಕೂಲ್‌ ಅನ್ನು ಪರೀಕ್ಷಾ ಕೇಂದ್ರವಾಗಿ ನೀಡಿದೆ. ಇದು ನಾಗಪುರದಿಂದ ಸುಮಾರು 2500 ಕಿಲೋಮೀಟರ್ ದೂರದಲ್ಲಿದೆ.

ವಿದ್ಯಾರ್ಥಿಯು ಪಾಸ್‌ಪೋರ್ಟ್ ಹೊಂದಿಲ್ಲ. ಸಾಮಾನ್ಯವಾಗಿ ಅನಿವಾಸಿ ಭಾರತೀಯರು (NRI) ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ವಿದೇಶಿ ಕೇಂದ್ರಗಳನ್ನು ನಿಯೋಜಿಸುವುದು ರೂಢಿ. ಆದರೆ ಈ ಬಾರಿ ಸ್ಥಳೀಯ ವಿದ್ಯಾರ್ಥಿಗೆ ವಿದೇಶಿ ಕೇಂದ್ರ ನೀಡಿರುವುದು ದೊಡ್ಡ ತಪ್ಪು ಎಂದು ಆರೋಪಿಸಲಾಗುತ್ತಿದೆ.

ವಿದ್ಯಾರ್ಥಿ ಮತ್ತು ಪೋಷಕರ ಆತಂಕ!

ಹಾಲ್ ಟಿಕೆಟ್ ಬಿಡುಗಡೆಯಾದ ತಕ್ಷಣ ವಿದ್ಯಾರ್ಥಿಯ ಪೋಷಕರು NTA ಸಹಾಯವಾಣಿಗೆ ಕರೆ ಮಾಡಿ ತಪ್ಪು ಸರಿಪಡಿಸುವಂತೆ ಮನವಿ ಮಾಡಿದ್ದರು. NTA ಅಧಿಕಾರಿಗಳು ತಪ್ಪು ಸರಿಪಡಿಸುವ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಬದಲಾವಣೆ ಆಗಿಲ್ಲ. ಇದರಿಂದ ವಿದ್ಯಾರ್ಥಿ ಮತ್ತು ಅವರ ಕುಟುಂಬಸ್ಥರು ತೀವ್ರ ಅತಂತ್ರದಲ್ಲಿದ್ದಾರೆ. ಪರೀಕ್ಷೆಗೆ ಇನ್ನು ಒಂದೇ ದಿನ ಬಾಕಿ ಇರುವಾಗ ವಿದೇಶಕ್ಕೆ ಪ್ರಯಾಣ, ವೀಸಾ, ಪಾಸ್‌ಪೋರ್ಟ್, ವೆಚ್ಚ ಮತ್ತು ಇತರ ಸಮಸ್ಯೆಗಳು ದೊಡ್ಡ ಸವಾಲಾಗಿ ನಿಂತಿವೆ.

NSUI ಪ್ರತಿಕ್ರಿಯೆ ಏನು?

NSUI ಪ್ರಧಾನ ಕಾರ್ಯದರ್ಶಿ ಧೃವ್ ಜತ್ತಿ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ‘ಸ್ಥಳೀಯ ವಿದ್ಯಾರ್ಥಿಗೆ ವಿದೇಶಿ ಕೇಂದ್ರ ನೀಡುವುದು ಸರಿಯಲ್ಲ. NTA ತ್ವರಿತವಾಗಿ ತಪ್ಪು ಸರಿಪಡಿಸಬೇಕು’ ಎಂದು ಅವರು ಹೇಳಿದ್ದಾರೆ.

NTA ಎದುರಿಸುತ್ತಿರುವ ವಿವಾದಗಳು

ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನೀಟ್ ಪರೀಕ್ಷೆಯನ್ನು ಮರು ನಡೆಸುತ್ತಿರುವ NTA ಮೇಲೆ ದೇಶಾದ್ಯಂತ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಈಗ ಈ ಕೇಂದ್ರ ನಿಯೋಜನೆ ಎಡವಟ್ಟು ಸೇರಿಕೊಂಡು NTA ಮೇಲಿನ ಅಸಮಾಧಾನ ಇನ್ನಷ್ಟು ಹೆಚ್ಚಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಇಂತಹ ತಪ್ಪುಗಳಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ವರ್ಷಗಳ ಕಾಲ ಕಷ್ಟಪಟ್ಟು ತಯಾರಿ ಮಾಡಿದ ವಿದ್ಯಾರ್ಥಿಯ ಭವಿಷ್ಯಕ್ಕೆ ಇಂತಹ ತಾಂತ್ರಿಕ ತಪ್ಪುಗಳು ತೊಂದರೆ ಉಂಟುಮಾಡುತ್ತಿವೆ.

ಮುಂದೆ ಏನಾಗಬಹುದು?

ವಿದ್ಯಾರ್ಥಿಯು ಪಾಸ್‌ಪೋರ್ಟ್ ಇಲ್ಲದ ಕಾರಣ ಅಬುಧಾಬಿಗೆ ಹೋಗುವುದು ಕಷ್ಟಸಾಧ್ಯ. NTA ಈಗಲಾದರೂ ತ್ವರಿತವಾಗಿ ಸ್ಥಳೀಯ ಕೇಂದ್ರಕ್ಕೆ ಬದಲಾವಣೆ ಮಾಡಬೇಕು ಎಂಬುದು ವಿದ್ಯಾರ್ಥಿ ಸಮುದಾಯದ ಬೇಡಿಕೆಯಾಗಿದೆ. ಈ ಘಟನೆಯು NTA ಯ ಪರೀಕ್ಷಾ ನಿರ್ವಹಣೆಯಲ್ಲಿ ಇನ್ನೂ ಸುಧಾರಣೆ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಇಂತಹ ಸಣ್ಣ ತಪ್ಪುಗಳಿಂದ ಪ್ರಭಾವಿತವಾಗಬಾರದು ಎಂಬುದು ಎಲ್ಲರ ಅಪೇಕ್ಷೆ. ಪ್ರಸ್ತುತ ವಿದ್ಯಾರ್ಥಿ ಮತ್ತು ಪೋಷಕರು NTA ಯಿಂದ ತ್ವರಿತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಈ ವಿಷಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, NTA ಮೇಲೆ ಒತ್ತಡ ಹೆಚ್ಚಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed