Last Updated:
2026ರ ಮಹಿಳಾ ಏಷ್ಯಾಕಪ್ನಲ್ಲಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡ ಭಾರತ. ಭಾರತದ ಜೊತೆಗೆ ಶ್ರೀಲಂಕಾ ಕೂಡ ಬಿ ಗುಂಪಿನಿಂದ ಸೆಮಿಫೈನಲ್ ತಲುಪಿದೆ.
ಪಾಕಿಸ್ತಾನ ಮಹಿಳಾ ತಂಡ (Pakistan Women Team) 2026ರ ಮಹಿಳಾ ಏಷ್ಯಾಕಪ್ನಲ್ಲಿ ಸೆಮಿಫೈನಲ್ (Women’s Asia Cup Semi Final) ತಲುಪಿದ ಮೂರನೇ ತಂಡವಾಗಿದೆ. ಭಾರತ ವಿರುದ್ಧದ ಹೀನಾಯ ಸೋಲಿನ ನಂತರ, ಪಾಕಿಸ್ತಾನದ ಸೆಮಿಫೈನಲ್ ಕಷ್ಟಕರ ಎಂದೇ ಭಾವಿಸಲಾಗಿತ್ತು. ಆದರೆ ಅವರು ತಮ್ಮ ಕೊನೆಯ ಪಂದ್ಯದಲ್ಲಿ ಹಾಂಗ್ ಕಾಂಗ್ ಅನ್ನು ಸುಲಭವಾಗಿ ಸೋಲಿಸಿ ನಾಕೌಟ್ ಸ್ಥಾನವನ್ನ ಖಚಿತಪಡಿಸಿಕೊಂಡಿತು. ಶ್ರೀಲಂಕಾ ಕೂಡ ಬಿ ಗುಂಪಿನಿಂದ ಅಗ್ರಸ್ಥಾನಿಯಾಗಿ ಮುನ್ನಡೆದಿದೆ. ಅಂತಿಮ ಸ್ಥಾನಕ್ಕಾಗಿ ಇಂದು ಬಾಂಗ್ಲಾದೇಶ ಮತ್ತು ಯುಎಇ ನಡುವೆ ಪಂದ್ಯ ನಡೆಯಲಿದೆ. ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.














