Last Updated:
ಒಂದೇ ಹೆರಿಗೆಯಲ್ಲಿ ನಾಲ್ವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. 7 ಮಕ್ಕಳ ಕುಟುಂಬಕ್ಕೆ 10 ಸೀಟರ್ ಕಾರು ಖರೀದಿಸಲು ನೆರವು ಕೋರಿದ ದಂಪತಿ.
ಅಪರೂಪ ಎಂಬಂತೆ ಮಹಿಳೆಯೊಬ್ಬರು (Women) ಒಂದೇ ಹೆರಿಗೆಯಲ್ಲಿ (Delivery) ನಾಲ್ವರು ಆರೋಗ್ಯವಂತ ಮಕ್ಕಳಿಗೆ ಜನ್ಮ (Children) ನೀಡಿದ್ದಾರೆ. ಇದರೊಂದಿಗೆ ಕುಟುಂಬದ ಚಿತ್ರಣ ರಾತ್ರೋರಾತ್ರಿ ಬದಲಾವಣೆಯಾಗಿದ್ದು, ದಿನನಿತ್ಯದ ಜೀವನದಲ್ಲಿ ಊಹೆಗೂ ನಿಲುಕದ ಸವಾಲುಗಳು ಎದುರಾಗಿದೆ. ಈಗಾಗಲೇ ದಂಪತಿಗೆ (Couple) ಮೂವರು ಮಕ್ಕಳಿದ್ದು, ಈಗ ನಾಲ್ವರು ಮಕ್ಕಳ ಆಗಮನದೊಂದಿಗೆ ಮನೆಯಲ್ಲಿ ಮಕ್ಕಳ ಸಂಖ್ಯೆ 7ಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಒಂದೇ ಹೆರಿಗೆಯಲ್ಲಿ ನಾಲ್ವರು ಹೆಣ್ಣು ಮಕ್ಕಳು ಜನಿಸಿರುವುದು ದಂಪತಿಗೆ ಸಖತ್ ಖುಷಿ ಕೊಟ್ಟಿದೆ. ಆದರೆ ಇದೇ ಸಂದರ್ಭದಲ್ಲಿ ಕುಟುಂಬಕ್ಕೆ (Family) ಹಲವು ಸವಾಲುಗಳು ಎದುರಾಗಿದೆ. ಇಷ್ಟು ಮಕ್ಕಳೊಂದಿಗೆ ಪ್ರಯಾಣಿಸಲು ಅಗತ್ಯವಿರುವ ದೊಡ್ಡ ವಾಹನ ಇಲ್ಲದೇ ಕುಟುಂಬ ಸಮಸ್ಯೆ ಎದುರಿಸುತ್ತಿದ್ದು, ಇಡೀ ಕುಟುಂಬ ಒಟ್ಟಿಗೆ ತೆರಳಲು ಅನುಕೂಲ ಆಗುವಂತೆ ಟೆನ್ ಸೀಟರ್ ಕಾರು (Ten Seater Car) ಖರೀದಿಗಾಗಿ ಸಹಾಯ ಮಾಡುವಂತೆ ದಂಪತಿ ಮನವಿ ಮಾಡಿದ್ದಾರೆ.
ದಿ ಆಸ್ಟ್ರೇಲಿಯಾನ್ ವರದಿಯಂತೆ, ಆಸ್ಟ್ರೇಲಿಯಾದ ಜೆನಿತಾರ್ ನಮೋನಾ ಅವರು ಜುಲೈ 14ರಂದು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. 1.5 ಕೋಟಿ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಈ ರೀತಿಯ ನಾಲ್ವರು ಶಿಶುಗಳು ಜನಿಸುತ್ತಾರೆ. ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದು ತಮ್ಮ ಜೀವನದಲ್ಲಿ ಮರೆಯಲು ಸಾಧ್ಯವಾಗದ ದೇವರ ಆಶೀರ್ವಾದ ಅಂತಲೇ ಭಾವಿಸುತ್ತಿರುವುದಾಗಿ ಜೆನಿತಾರ್ ಪತಿ ಜೋಥರ್ಮ್ ತಿಳಿಸಿದ್ದಾರೆ. ಆದರೆ ದೊಡ್ಡ ಬದಲಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಆರ್ಥಿಕ ಭಾರ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಮಕ್ಕಳಿಗೆ ನಿತ್ಯವೂ ಅಗತ್ಯವಿರುವ ಬಟ್ಟೆ, ಫಾರ್ಮುಲಾ ಹಾಲು, ಡೈಪರ್ ಗಳ ಖರ್ಚು ಹೆಚ್ಚಾಗಿದ್ದು, ಒಟ್ಟಿಗೆ ಪ್ರಯಾಣಿಸಲು ಅನುಕೂಲವಾಗುವ ವಾಹನ ಏರ್ಪಾಡು ಮಾಡಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ.
ಪ್ರಮುಖವಾಗಿ ಏಳು ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವುದು ನಮ್ಮ ಮೊದಲ ಜವಾಬ್ದಾರಿ. ಈಗ ನಮ್ಮ ಕುಟುಂಬದ ಬಳಿ ಇರುವ ಹಳೆಯ ಕಾರು ಇಷ್ಟು ಮಕ್ಕಳ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿ ಕುಳಿತುಕೊಳ್ಳಲು ಅಗತ್ಯವಿರುವ ಸೀಟುಗಳು ಹಳೆಯ ಕಾರಿನಲ್ಲಿ, ಕುಟುಂಬ ದೊಡ್ಡದಾಗಿರುವ ಕಾರಣ ಅಗತ್ಯತೆಗಳನ್ನು ಪೂರೈಸಿಕೊಳ್ಳಲು, ಅದರಲ್ಲೂ ಪ್ರಮುಖವಾಗಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಶಾಲೆಗೆ ಕಳುಹಿಸಲು, ಇತರ ಪ್ರಯಾಣಗಳಿಗೆ ಸುಲಭವಾಗಲು 10 ಸೀಟು ಇರುವ ಒಂದು ದೊಡ್ಡ ವ್ಯಾನ್ ಖರೀದಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ದಂಪತಿ ಆನ್ ಲೈನ್ ಮೂಲಕ ದೇಣಿಗೆ ಸಂಗ್ರಹಿಸಲು ಕೂಡ ಪ್ರಾರಂಭ ಮಾಡಿದ್ದಾರೆ.
A rare set of identical quadruplet girls has been born at Royal Brisbane and Women’s Hospital in Queensland, in a pregnancy described as being one in 15 million. The four babies named Emily, Harriet, Alexa and Catherine were delivered via caesarean on July 14 at 28 weeks and four… pic.twitter.com/7EZfVP5PWZ
— The Australian (@australian) July 20, 2026
ಒಟ್ಟಿಗೆ ನಾಲ್ಕು ಮಕ್ಕಳನ್ನು ಏಕಕಾಲದಲ್ಲಿ ಬೆಳೆಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುತ್ತಿರುವ ದಂಪತಿಗೆ ಅವರ ಸ್ನೇಹಿತರು, ಕುಟುಂಬಸ್ಥರು ಹಾಗೂ ಸ್ಥಳೀಯರು ಬೆಂಬಲವಾಗಿ ನಿಂತಿದ್ದಾರೆ. ದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ದಂಪತಿಗೆ, ಸ್ಥಳೀಯರು ನೆರವು ನೀಡುತ್ತಿರುವುದು ಬಹಳ ಹೆಮ್ಮೆ ಅನಿಸುತ್ತಿದೆ ಎಂದು ದಂಪತಿ ಹೇಳಿದ್ದಾರೆ. ಇಂತಹ ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಹಲವು ದಂಪತಿಯ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಬಿಬಿಸಿಯೊಂದಿಗೆ ಮಾತನಾಡಿರುವ ಡಾ. ಅಲೆಕ್ಸಾ ಬೆಂಡಾಲ್, ಪ್ರತಿ 1.5 ಕೋಟಿ ಮಂದಿಯಲ್ಲಿ ಒಬ್ಬರಿಗೆ ಈ ರೀತಿ ನೈಸರ್ಗಿಕವಾಗಿ ಗರ್ಭಧಾರಣೆಯಾಗುತ್ತದೆ. ಇಂತಹ ಗರ್ಭಧಾರಣೆಗಳು ಹೆಚ್ಚು ಅಪಾಯವನ್ನು ಹೊಂದಿರುತ್ತದೆ. ಆದ್ದರಿಂದ 25 ವಾರಗಳಿಗೆ ಅವರನ್ನು ಒಳರೋಗಿ ದಾಖಲಿಸಿಕೊಂಡು, 28 ವಾರಗಳ ವರೆಗೂ ಸುರಕ್ಷಿತವಾಗಿ ನೋಡಿಕೊಂಡಿದ್ದೇವು. ಆ ಬಳಿಕ ಅವರು ನಾಲ್ವರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ನಾಲ್ವರು ಹೆಣ್ಣು ಮಕ್ಕಳಿಗೆ ಎಮಿಲಿ, ಹ್ಯಾರಿಯೆಟ್, ಕ್ಯಾಥರೀನ್ ಮತ್ತು ಅಲೆಕ್ಸಾ ಎಂದು ಹೆಸರಿಡಲಾಗಿದೆ.
Bangalore [Bangalore],Bangalore,Karnataka
Jul 22, 2026 12:03 PM IST














