West Indies: ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ‌ ಹೊಸ ತಾರೋದಯ, ಶೇ ಹೋಪ್ ಆಟಕ್ಕೆ ಜಗತ್ತೇ ನಿಬ್ಬೆರಗು! | ಕ್ರೀಡಾ ಸುದ್ದಿ | ACTPnews

ಶೇ ಹೋಪ್

[ad_1]

Last Updated:

ಭವ್ಯ ಇತಿಹಾಸ‌ ಇರುವ ಕೆರಿಬಿಯನ್ನರು ಸದ್ಯಕ್ಕೆ ಹಾದಿ ತಪ್ಪಿದ ಮಕ್ಕಳಂತೆ ಕ್ರಿಕೆಟ್ ಲೋಕದಲ್ಲಿ ಎಡವಿದ್ದಾರೆ. ಆದರೆ ನೊಂದು ಬೆಂದು ಪವಾಡಗಳಿಗಾಗಿ ಕಾಯುವ ಮಾನವ ಕುಲ ಸದಾ ಆಶಾಭಾವೆನಯನ್ನು ಕೈ ಬಿಡುವುದಿಲ್ಲ. ಈಗ ಕೆರಿಬಿಯನ್ನರಿಗೂ ಅಂಥದ್ದೊಂದು ನಿಟ್ಟಿಸಿರು ಬಂದಿದೆ. ಕೆರಿಬಿಯನ್ನರ ಆ ಉಸಿರಿನ ಹೆಸರೆ ಶೇ ಹೋಪ್.

ಶೇ ಹೋಪ್
ಶೇ ಹೋಪ್

ನೂರಾರು ವರ್ಷಗಳ ಕೆಳಗೆ ಬ್ರಿಟೀಷರ ಕಪಿಮುಷ್ಟಿಯಿಂದ ಕಬ್ಬಿನ ಗದ್ದೆಯಿಂದ ಗಂಡಭೇರುಂಡಗಳಂತೆ ಪುಟಿದೆದ್ದು ಬಂದ ಕೆರಿಬಿಯನ್ನರಿಗೆ ಕ್ರಿಕೆಟ್ ಒಂದು ಕ್ರೀಡೆ ಮಾತ್ರ ಅಲ್ಲ. ಅದು ಅವರ ವಿಮೋಚನೆಯ ಯಶೋಗಾಥೆ. ಬದುಕಿನ ಮೂಲಮಂತ್ರ. ಸ್ವಾತಂತ್ರ್ಯದ ಹಾಲುಹಾದಿ. ಅಂಥದ್ದೊಂದು ಭವ್ಯ ಇತಿಹಾಸ‌ ಇರುವ ಕೆರಿಬಿಯನ್ನರು ಸದ್ಯಕ್ಕೆ ಹಾದಿ ತಪ್ಪಿದ ಮಕ್ಕಳಂತೆ ಕ್ರಿಕೆಟ್ ಲೋಕದಲ್ಲಿ ಎಡವಿದ್ದಾರೆ. ಆದರೆ ನೊಂದು ಬೆಂದು ಪವಾಡಗಳಿಗಾಗಿ ಕಾಯುವ ಮಾನವ ಕುಲ ಸದಾ ಆಶಾಭಾವೆನಯನ್ನು ಕೈ ಬಿಡುವುದಿಲ್ಲ. ಈಗ ಕೆರಿಬಿಯನ್ನರಿಗೂ ಅಂಥದ್ದೊಂದು ನಿಟ್ಟಿಸಿರು ಬಂದಿದೆ. ಕೆರಿಬಿಯನ್ನರ ಆ ಉಸಿರಿನ ಹೆಸರೆ ಶೇ ಹೋಪ್.

ಕೆಲವರ ಹೆಸರೇ ಹಾಗೆ. ಅವರು ಸಾಧಿಸಬಲ್ಲ ಹಾದಿಯನ್ನು ಸಾರಿ ಹೇಳುತ್ತದೆ. ಅಂಥದ್ದೊಂದು ಭರವಸೆಯ ಬೆಳಕು ಈತ. ಹೆಸರಲ್ಲೇ ಭರವಸೆ ಹೊತ್ತು ತಿರುಗುವ ಈ ಮನುಷ್ಯನಲ್ಲಿ ಕ್ರಿಕೆಟ್ ಲೋಕವೇ ದಂಗು ಬಡಿಯುವಂತೆ ಮಾಡುವಂತೆ ಕಲೆಯಿದೆ ಎಂದರೆ ಅತಿಶಯೋಕ್ತಿ ಅಲ್ಲ. ಅರ್ಧ ಜೀವದಲ್ಲಿ ಏದುಸಿರು ಬಿಡುತ್ತಿರುವ ವೆಸ್ಟ್ ಇಂಡೀಸ್ ಗೆ ಮರು ಜೀವ ಕೊಡಬಲ್ಲ ತಾಕತ್ತು ಶೇ ಹೋಪ್ ಗಿದೆ. ಆತನ ಬ್ಯಾಟಿಂಗ್ ಅಬ್ಬರ, ನಾಯಕತ್ವದ ಗುಣ ಹಾಗೂ ಸದಾ ಹಸನ್ಮುಖಿ ಮುಖಚಹರೆ ಜೊತೆಗೆ ತಾಳ್ಮೆಯ ವರಮೂರ್ತಿ ಅವತಾರದಂತೆ ಕೆರಿಬಿಯನ್ ಕ್ರಿಕೆಟ್‌ನ ಹೊಸ ಭರವಸೆಯ ಕಿಡಿ ಶೇ ಹೋಪ್.

ಬಾರ್ಬಡೋಸ್ ಪಟ್ಟಣದಿಂದ ಬಂದು ಇವತ್ತು ಜಗತ್ತನ್ನೇ ತಿರುಗಿ ನೋಡುವಂತೆ ಮಾಡುತ್ತಿರುವ ಶೇ ಹೋಪ್ ಬದುಕಿನಲ್ಲಿ ಹಲವು ಆಸಕ್ತಿದಾಯಕ ಕತೆಗಳಿವೆ. ಹೋಪ್ ಗೆ ಅಂಥಾ ಬಡತನದ ಹಿನ್ನಲೆಯೇನು ಇಲ್ಲ. ಅಪ್ಪ ಇಯಾನ್ ಹೋಪ್ ತಕ್ಕಮಟ್ಟಿಗೆ ಬದುಕಿಗೆ ಒಳ್ಳೆಯ ಬುನಾದಿಯೇ ಹಾಕಿಕೊಂಡಿದ್ದರು. ಬಾರ್ಬಡೋಸ್ ಮೇಲ್ವರ್ಗದ ಉಳ್ಳ ಕುಟುಂಬವೇ ಆಗಿತ್ತು. ಆದರೆ ಇವತ್ತು ಶೇ ಹೋಪ್ ಮಾಡಿಕೊಂಡಿರುವ ಹೆಸರಿನ ಹಿಂದೆ ಆತನ ಬೆವರಿನ ಕತೆ ಇದೆ. ಕಣ್ಣಮುಂದೆಯೇ ನುಚ್ಚುನೂರಾದ ಅಣ್ಣನ ಅಸಹಾಯಕತೆಯ ನೋವಿದೆ.

ಶೇ ಹೋಪ್ ಗೂ ಮೊದಲು ಅಣ್ಣ ಕೈಲ್ ಹೋಪ್ ಆ ಕುಟುಂಬಕ್ಕಿದ್ದ ಕ್ರಿಕೆಟ್ ಲೋಕದಲ್ಲಿ ಸಾಧಿಸಬೇಕೆಂಬ ಹಂಬಲ ಹೊತ್ತಿದ್ದ. ಕೆರಿಬಿಯನ್ ಕೌಂಟಿ ಕ್ರಿಕೆಟ್ ನಲ್ಲಿ ಕೈಲ್ ಮಿಂಚಿದರೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ನಿರೀಕ್ಷಿತ ಗೆಲುವು ಧಕ್ಕಲಿಲ್ಲ. ಬಂದಷ್ಟೇ ವೇಗವಾಗಿ ಕೈಲ್ ತಂಡದಿಂದ ಹೊರೆಗುಳಿದರು. ಆದರೆ ಇಯಾನ್ ಹೋಪ್ ಆಸೆಗೆ ಜೀವ ತುಂಬಿಕೊಂಡು ಕೈಲ್ ತಮ್ಮ ಶೇ ಸಿದ್ದಗೊಂಡಿದ್ದ. ಅಣ್ಣನ ಎಕ್ಸಿಟ್ ಗೆ ತಮ್ಮನ ಎಂಟ್ರಿಗೆ ಕ್ರಿಕೆಟ್ ಜಗತ್ತು ಸಾಕ್ಷಿವಹಿಸಿದ್ದು ಈಗ ಇತಿಹಾಸದ ಭಾಗ.

ಆರಂಭದಿಂದಲೂ ತನ್ನ ಕರಾರುವಾಕ್ ಬ್ಯಾಟಿಂಗ್ ನಿಂದಲೇ ಎದುರಾಳಿಗಳ ಕಡೆಗೆ ಮುನ್ನುಗುವ ಶೇ ಹೋಪ್ ವಿಕೆಟ್ ಹಿಂದೆ ನಿಂತರೆ ಶಾಂತ ಸ್ವರೂಪಿ. ಎದುರಾಳಿಗಳ ಲೆಕ್ಕಾಚಾರಗಳನ್ನು ಅಳೆದು ತೂಗಿ‌ ಮಟ್ಟ ಹಾಕುವ ಚತುರ. ಇದು ಇತ್ತೀಚೆಗೆ ಸೋಲುಗಳನ್ನೇ ನೋಡಿರುವ ಕೆರಿಬಿಯನ್ನರಿಗೆ ಹೊಸ ಹುಮ್ಮಸ್ಸು ನೀಡಿದೆ. ಅದು 2015ರ ಮೇ1. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ಅಂಗಿ ತೊಟ್ಟು ಶೇ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟರು. ಆದರೆ ಮೊದಲ ಪಂದ್ಯದಲ್ಲಿ ನೆನಪಿಡುವ ಗಳಿಗೆಯೇನು ಕೂಡಿ ಬರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಆ ಟೆಸ್ಟ್ ಪಂದ್ಯ ಶೇ ಪಾಲಿಗೆ ಐತಿಹಾಸಿಕವಾದದ್ದು.

ಯಾಕೆಂದರೆ ಬಾರ್ಬಡೋಸ್ ಪಟ್ಟಣದಲ್ಲಿ ಕ್ರಿಕೆಟ್ ಕಡೆಗೆ ಆಸೆಗಣ್ಣು ಬೀರಿದ್ದ ಶೇಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿಂದ ಭಾರೀ ಆಫರ್ ಬಂದಿತ್ತು. ತನ್ನ ಅದ್ವಿತೀಯ ಬ್ಯಾಂಟಿಂಗ್ ಹಾಗೂ ಕೀಪಿಂಗ್ ಸ್ಕಿಲ್ ಕಾರಣಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶೇಗೆ ಇಂಗ್ಲೆಂಡ್ ಗೆ ಬಂದು ನೆಲೆಸಿ ಪೌರತ್ವ ನೀಡಿ ಇಂಗ್ಲೆಂಡ್ ತಂಡದಲ್ಲಿ ಆಡುವ ಆಫರ್ ನೀಡಿತ್ತು. ಆದರೆ ಹುಟ್ಟಿದ ನೆಲ ಹಾಗೂ ಕಪ್ಪುಜನರ ಭಾವಬಂಧಕ್ಕೆ ಭಾವನಾತ್ಮಕವಾಗಿ ಬೆಸೆದುಕೊಂಡ ಶೇ ಹೋಪ್ ಕೋಟಿ ಕೋಟಿ ಕೊಟ್ಟರೂ ಹುಟ್ಟು ಕೊಟ್ಟ ನೆಲ ಬಿಡುವ ಮಾತೇ ಇಲ್ಲ ಎಂಬಂತೆ ತಾಯಿ ನೆಲವನ್ನೇ ಆಯ್ದುಕೊಂಡರು. ಅಂದಹಾಗೆ ತನ್ನ ಪಾದಾರ್ಪಣೆಯ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಬಗ್ಗು ಬಡಿದು ಗೆಲುವಿನ ಕೇಕೆ ಹಾಕಿತ್ತು.

ಅದಾಗಿ ಇಲ್ಲಿಯವರೆಗೆ ಬೆನ್ನ ಮೇಲೆ‌ ಭರವಸೆ ಎಂದು ಬರೆದುಕೊಂಡು ಹೆಗಲಮೇಲೆ‌ ಕೆರಿಬಿಯನ್ನರದ ಭಾವಗಳನ್ನು ಹೊತ್ತುಕೊಂಡಿರುವ ಶೇ ಹೋಪ್ ಟೀಂ ಇಂಡಿಯಾ ಸೇರಿದ ಘಟಾನುಘಟಿಗಳ ತಂಡದ ಮುಂದೆ ತನ್ನ ರೌದ್ರರೂಪ ತಾಳುತ್ತಿದ್ದಾನೆ. 49 ಟೆಸ್ಟ್, 158 ಏಕದಿನ ಹಾಗೂ 72 ಟಿ20 ಪಂದ್ಯ ಆಡಿರುವ ಶೇ ಈವರೆಗೆ 28 ಶತಕ ಹಾಗೂ 52 ಅರ್ಧ ಶತಕ ಪೇರಿಸಿದ್ದಾನೆ. ಬ್ರೈನ್ ಲಾರಾ ಅಂದು ವಿಶ್ವ ದಾಖಲೆ ಬರೆದು ಮೈದಾನದಲ್ಲಿ ಕುಣಿದು ಕುಪ್ಪಳಿಸಿದಾಗ ಆ ಕ್ಷಣಗಳನ್ನು ಟಿವಿಯಲ್ಲಿ ನೋಡುತ್ತಾ ನಿಂತಿದ್ದ ಶೇ ಇಂದು ಅದೇ ಕೆರಿಬಿಯನ್ನರ ಭಾವ ಲೋಕದ ದೊರೆಯಾಗಿದ್ದಾನೆ.

ಅದೊಂದು ಸಂದರ್ಶನ. ಅದರಲ್ಲಿ Who is Inspiration Shai? ಎಂದು ಕೇಳಿದ್ದಕ್ಕೆ! ಯಾವುದೇ ತಡವಿಲ್ಲದೆ My Blood Brother Kyle ಎಂದು ಶೇ ಹೇಳಿದ್ದ. ಮೊದಲೇ ಹೇಳಿದಂತೆ ತನ್ನ ಕಣ್ಣಮುಂದೆ ನುಚ್ಚುನೂರಾದ ಅಣ್ಣನ ಆಸೆಯನ್ನು ಇದೀಗ ತಮ್ಮ ಶೇ ತೇರಿನಿಂದ‌ ಎಳೆಯುತ್ತಿದ್ದಾನೆ. ಅದೇ ಕಾರಣಕ್ಕೆ ಇವರಿಬ್ಬರು ಗಂಡಭೇರುಂಡ. ಕ್ರಿಕೆಟ್ ಒಂದು ಮಹಾ ಸಮುದ್ರ. ಅಲ್ಲಿ ಈಜುತ್ತಿರುವ ಶೇ ಅಪ್ರತಿಮ ದಾಖಲೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ. ಆತನಲ್ಲಿ ಕ್ರಿಕೆಟ್ ಜಗತ್ತು ನಿಬ್ಬೆರಗಾಗುವಂತೆ ಮಾಡುವ ಕಲೆ ಇದೆ. ಆತ ಮಿನುಗಲಿ. ಕೆರಿಬಿಯನ್ನರು ಕಳಕೊಂಡಿರುವ ಕ್ರಿಕೆಟ್ ವೈಭವಕ್ಕೆ ಮರಳಲಿ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed