Warship Collision: ಭಾರತೀಯ ಕ್ಯಾಪ್ಟನ್ ಚಾಣಾಕ್ಷತನದಿಂದ ತಪ್ಪಿದ ಭಾರೀ ದುರಂತ! ಯುದ್ಧದ ಕಿಡಿ ಹೊತ್ತಿಸಲು ಬಂದ ಪಾಕಿಸ್ತಾನಿ ಹಡಗು ಜಖಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಾರತದ ಹಡಗಿಗೆ ಡಿಕ್ಕಿ ಹೊಡೆ ಹಡಗು (AI ಜನರೇಟ್)


Last Updated:


ಉತ್ತರ ಅರೇಬಿಯನ್ ಸಮುದ್ರದ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಪಾಕಿಸ್ತಾನ ನೌಕಾಪಡೆಯ ಹಡಗಿನ ನಡುವೆ ಮಂಗಳವಾರ ಸಂಜೆ ಡಿಕ್ಕಿ ಸಂಭವಿಸಿದೆ. ಆದರೆ ಈ ದುರ್ಘಟನೆಯಿಂದ ಭಾರತೀಯ ನಾಕಾ ಹಡಗಿಗಿಂತ ಪಾಕಿಸ್ತಾನದ ಹಡಗಿಗೆ ಹೆಚ್ಚಿನ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಭಾರತದ ಹಡಗಿಗೆ ಡಿಕ್ಕಿ ಹೊಡೆ ಹಡಗು (AI ಜನರೇಟ್)
ಭಾರತದ ಹಡಗಿಗೆ ಡಿಕ್ಕಿ ಹೊಡೆ ಹಡಗು (AI ಜನರೇಟ್)

ಉತ್ತರ ಅರೇಬಿಯನ್ ಸಮುದ್ರದ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಪಾಕಿಸ್ತಾನ ನೌಕಾಪಡೆಯ ಹಡಗಿನ ನಡುವೆ ಮಂಗಳವಾರ ಸಂಜೆ ಡಿಕ್ಕಿ ಸಂಭವಿಸಿದ್ದು, ಪಾಕಿಸ್ತಾನಿ ನೌಕಾಪಡೆಯ ನಡವಳಿಕೆಯ ವಿರುದ್ಧ ಭಾರತವು ಇಸ್ಲಾಮಾಬಾದ್‌ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ಘಟನೆಯು 1991ರ ಮಿಲಿಟರಿ ಒಪ್ಪಂದದ ಆರ್ಟಿಕಲ್ 10ರ ಉಲ್ಲಂಘನೆಯಾಗಿದೆ ಎಂದು ಭಾರತ ಸರ್ಕಾರ ತಿಳಿಸಿದ್ದು, ಈ ಸಂಬಂಧ ದೆಹಲಿಯಲ್ಲಿರುವ ಪಾಕಿಸ್ತಾನಿ ರಾಜತಾಂತ್ರಿಕರನ್ನು ಕರೆಸಿ ಆಕ್ಷೇಪ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಹೈಕಮಿಷನ್ ವಿರುದ್ಧ ವಾಗ್ದಾಳಿ

ಈ ಡಿಕ್ಕಿಯಿಂದಾಗಿ ಭಾರತೀಯ ಹಡಗಿಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ. ಆದರೆ, ಭಾರತೀಯ ವಿದೇಶಾಂಗ ಸಚಿವಾಲಯವು ತಕ್ಷಣವೇ ಕಾರ್ಯಪ್ರವೃತ್ತರಾಗಿ, ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಪ್ರಭಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದೆ. ಇದರೊಂದಿಗೆ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೂ ಸಹ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮುಂದೆ ಇದೇ ರೀತಿಯ ಕಠಿಣ ಆಕ್ಷೇಪವನ್ನು ವ್ಯಕ್ತಪಡಿಸಲು ಸೂಚಿಸಲಾಗಿದೆ.

ಸಮುದ್ರದಲ್ಲಿ ನಡೆದ ಈ ಘರ್ಷಣೆ ಯೋಜಿತ ಪಿತೂರಿಯೇ?

ಆರಂಭಿಕ ಕಾರ್ಯಾಚರಣೆಯ ಡೇಟಾ ಮತ್ತು ಹಡಗಿನ ದಾಖಲೆಗಳು (Ship Logs) ಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿವೆ. ಸರ್ಕಾರಿ ಮೂಲಗಳ ಪ್ರಕಾರ, ಪಾಕಿಸ್ತಾನದ ಹಡಗು ‘ಪಿಎನ್‌ಎಸ್ ಹುನೈನ್’ (PNS Hunain) ಸಾಕಷ್ಟು ಸಮಯದಿಂದ ಭಾರತೀಯ ಯುದ್ಧನೌಕೆಯನ್ನು ಹಿಂಬಾಲಿಸುತ್ತಿತ್ತು. ಭಾರತೀಯ ನೌಕಾಪಡೆಯು ರೇಡಿಯೋ ಚಾನೆಲ್ (Channel 16) ಮೂಲಕ ಅದಕ್ಕೆ ಸತತವಾಗಿ ಎಚ್ಚರಿಕೆಗಳನ್ನು ನೀಡುತ್ತಿತ್ತು.

ಆದರೆ ಪಾಕಿಸ್ತಾನದ ಹಡಗು ಈ ಎಲ್ಲಾ ಎಚ್ಚರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದಾದ ನಂತರ ಅದು ಇದ್ದಕ್ಕಿದ್ದಂತೆ ತನ್ನ ವೇಗವನ್ನು ಹೆಚ್ಚಿಸಿ, ಭಾರತೀಯ ಹಡಗಿನ ಅತ್ಯಂತ ಹತ್ತಿರ ಬಂದು ಅದರ ಮಾರ್ಗವನ್ನು ತಿರುಗಿಸಲು ಪ್ರಯತ್ನಿಸಿದೆ. ಸಮುದ್ರದಲ್ಲಿ ಅಲೆಗಳು ಭೀಕರವಾಗಿದ್ದ ಕಾರಣ ಹಡಗಿನ ಮೇಲಿನ ನಿಯಂತ್ರಣ ತಪ್ಪಿ, ಪಾಕ್ ಹಡಗು ಭಾರತೀಯ ನೌಕೆಯ ಪಕ್ಕದ ಭಾಗಕ್ಕೆ ಬಂದು ಉಜ್ಜಿಕೊಂಡು ಡಿಕ್ಕಿ ಹೊಡೆದಿದೆ. ಈ ಇಡೀ ಘಟನಾವಳಿಗಳನ್ನು ನೋಡಿದರೆ, ಇದು ಯಾವುದೇ ನ್ಯಾವಿಗೇಷನ್ (ಮಾರ್ಗಸೂಚಿ) ತಪ್ಪಿನಿಂದ ಆಗಿದ್ದಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ಮಾಡಿದ ಆಕ್ರಮಣಕಾರಿ ನಡವಳಿಕೆ ಎಂಬುದು ಸ್ಪಷ್ಟವಾಗುತ್ತದೆ.

ಪಾಕಿಸ್ತಾನಿ ಯುದ್ಧನೌಕೆಯಲ್ಲಿ ಯಾವುದೇ ತಾಂತ್ರಿಕ ದೋಷವಿತ್ತೇ?

ಭಾರತೀಯ ನೌಕಾಪಡೆಯ ಆರಂಭಿಕ ವಿಶ್ಲೇಷಣೆಯಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಅಥವಾ ಸ್ಟೀರಿಂಗ್ ವೈಫಲ್ಯದ ಲಕ್ಷಣಗಳು ಕಂಡುಬಂದಿಲ್ಲ. ಹಡಗಿನ ಡೇಟಾ ಪ್ರಕಾರ, ಪಾಕಿಸ್ತಾನಿ ಸಿಬ್ಬಂದಿ ಹಡಗಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಒಂದು ವೇಳೆ ಯಾವುದೇ ತುರ್ತು ಪರಿಸ್ಥಿತಿ ಇದ್ದಿದ್ದರೆ, ಹಡಗು ದೂರವಿರಲು ಪ್ರಯತ್ನಿಸುತ್ತಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ, ಪಿಎನ್‌ಎಸ್ ಹುನೈನ್ ಅತ್ಯಂತ ವೇಗವಾಗಿ ಬಂದು ಭಾರತೀಯ ಯುದ್ಧನೌಕೆಯ ಮುಂದೆ ಕಟ್ ಮಾಡಿದೆ. ಸಮುದ್ರದಲ್ಲಿ ಈ ರೀತಿ ಡಿಕ್ಕಿಯಾಗುವುದು ನೇರವಾದ ಪ್ರಚೋದನಾತ್ಮಕ ಕ್ರಮವಾಗಿದೆ. ಸಮುದ್ರದಲ್ಲಿ ಭಾರತೀಯ ನೌಕಾಪಡೆಗೆ ನೇರ ಸವಾಲು ಹಾಕಲು ಮಾಡಿದ ಒಂದು ಅವೃತ್ತಿಪರ ಸ್ಟಂಟ್ ಇದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕ್ಯಾಪ್ಟನ್ ಸಮಯಪ್ರಜ್ಞೆ – ದೊಡ್ಡ ದುರಂತ ತಪ್ಪಿದ್ದೇಗೆ?

ಇದು ಆಕಸ್ಮಿಕ ಡಿಕ್ಕಿಯಾಗಿರಲಿಲ್ಲ. ಪಾಕಿಸ್ತಾನಿ ಹಡಗು ನುಗ್ಗಿ ಬರುತ್ತಿದ್ದಂತೆಯೇ ಭಾರತೀಯ ಯುದ್ಧನೌಕೆಯ ಕ್ಯಾಪ್ಟನ್ ಅತ್ಯಂತ ಚಾಣಾಕ್ಷತನ ಮತ್ತು ಸಮಯಪ್ರಜ್ಞೆ ಮೆರೆದಿದ್ದಾರೆ. ಅವರು ತಕ್ಷಣವೇ ಭಾರತೀಯ ಹಡಗಿನ ದಿಕ್ಕನ್ನು ಬದಲಿಸಿ ದೂರ ಸರಿಸಿದ್ದರಿಂದ ನೇರವಾದ ಭೀಕರ ದುರಂತ ತಪ್ಪಿತು. ಒಂದು ವೇಳೆ ಭಾರತೀಯ ಹಡಗು ತಕ್ಷಣ ಪ್ರತಿಕ್ರಿಯಿಸದಿದ್ದರೆ ಎರಡು ಬೃಹತ್ ಯುದ್ಧನೌಕೆಗಳು ಮುಳುಗುವಷ್ಟು ದೊಡ್ಡ ದುರಂತ ಸಂಭವಿಸುತ್ತಿತ್ತು.

ಈ ಬೇಜವಾಬ್ದಾರಿತನದ ಸಾಹಸ ಮಾಡಲು ಹೋದ ಪಾಕಿಸ್ತಾನದ ‘ಪಿಎನ್‌ಎಸ್ ಹುನೈನ್’ ಹಡಗಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದೆ. ಹೀಗಾಗಿ ಅದು ತನ್ನ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಿ ಪಾಕಿಸ್ತಾನದ ಬಂದರಿನತ್ತ ಮುಖ ಮಾಡಿದೆ. ಭಾರತದ ಯುದ್ಧನೌಕೆಗೆ ಯಾವುದೇ ಪ್ರಮುಖ ಹಾನಿಯಾಗಿಲ್ಲ. ಅದು ಇಂದಿಗೂ ಸಮುದ್ರದಲ್ಲೇ ಉಳಿದು ತನ್ನ ಕಣ್ಗಾವಲು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಂದುವರಿಸಿದೆ ಎಂದು ತಿಳಿದುಬಂದಿದೆ.

1991ರ ಒಪ್ಪಂದವನ್ನು ಗಾಳಿಗೆ ತೂರಿತ ಪಾಕಿಸ್ತಾನ?

ಈ ಅಪಾಯಕಾರಿ ಕೃತ್ಯದ ಮೂಲಕ ಪಾಕಿಸ್ತಾನವು ಉಭಯ ದೇಶಗಳ ನಡುವೆ ನಡೆದಿರುವ 1991ರ ಮಿಲಿಟರಿ ಒಪ್ಪಂದದ ಆರ್ಟಿಕಲ್ 10 ಅನ್ನು ಬಹಿರಂಗವಾಗಿ ಉಲ್ಲಂಘಿಸಿದೆ. ಈ ನಿಯಮದ ಪ್ರಕಾರ, ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಉಭಯ ದೇಶಗಳ ಯುದ್ಧದ ಹಡಗುಗಳು ಮತ್ತು ಜಲಾಂತರ್ಗಾಮಿಗಳು (Submarines) ಪರಸ್ಪರ ಕನಿಷ್ಠ ಮೂರು ನಾಟಿಕಲ್ ಮೈಲಿಗಳಷ್ಟು ಸುರಕ್ಷಿತ ದೂರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಆದರೆ ಪಾಕಿಸ್ತಾನದ ಹಡಗು ಈ ದೂರದ ನಿಯಮವನ್ನು ಮುರಿದು, ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಯುವ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಇಂತಹ ಬೇಜವಾಬ್ದಾರಿಯ ಸ್ಟಂಟ್‌ಗಳು ದೊಡ್ಡ ಮಟ್ಟದ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಭಾರತ ಸ್ಪಷ್ಟಪಡಿಸಿದೆ. ಪಾಕಿಸ್ತಾನವು ತನ್ನ ಅಧಿಕಾರಿಗಳಿಗೆ ಮರ್ಯಾದೆಯಿಂದ ನಡೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಎಚ್ಚರಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed