Heggana Muddu Movie: ಡಾಲಿ ‘ಹೆಗ್ಗಣ ಮುದ್ದು’ ಟ್ರೈಲರ್ ಔಟ್; ಸಿನಿಮಾ ಕಥೆ ಏನು, ನಾಯಕಿ ಯಾರು? | | ACTPnews

Adithi Sagar Poorna Mysore Daali Pictures Heggana Muddu Movie Updates


ಹೆಗ್ಗಣ ಮುದ್ದು…

ಹೆಗ್ಗಣ ಮುದ್ದು ಚಿತ್ರದಲ್ಲಿ ನವದಂಪತಿಗಳ ಕತೆ ಇದೆ. ಮದುವೆ ಆದ್ಮೇಲೆ ಗಂಡ ಹೇಳುವ ಆ ಎಲ್ಲ ಪ್ರಾಮಿಸ್‌ಗಳು ಇಲ್ಲಿವೆ. ಆದರೆ, ಮುಂದೆ ಅದು ಏನೆಲ್ಲ ಆಗುತ್ತದೆ ಅನ್ನುವ ಸತ್ಯ ಕೂಡ ಇದೆ.

ಇಬ್ಬರು ಮ್ಯೂಸಿಕ್ ಡೈರೆಕ್ಟರ್ಸ್

(ಚಿತ್ರ ಕೃಪೆ: ಹೆಗ್ಗಣ ಮುದ್ದು ಫಿಲ್ಮ್ ಟೀಮ್)

ಆದರೆ, ಇದನ್ನ ಹಾಸ್ಯದ ಚೌಕಟ್ಟಿನಲ್ಲಿಯೇ ಹೇಳಿದ್ದಾರೆ. ಚಿತ್ರದ ಟ್ರೈಲರ್ ನೋಡಿದಾಗ ಇದು ನಿಮಗೆ ಗಮನಕ್ಕೆ ಬರುತ್ತದೆ. ಹಾಸ್ಯದ ಮೂಲಕ ಎದೆಗೂ ಇಳಿಯುತ್ತದೆ.

ಅವಿನಾಶ್ ಬಲೆಕ್ಕಳ

ಅವಿನಾಶ್ ಬಲೆಕ್ಕಳ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವಾಗಿದೆ. ಹೊಸ ಕತೆ, ಹೊಸ ಯೋಚನೆ. ಒಟ್ಟು ಹೊಸದನ್ನ ಹುಡುಕುವ ನಟ-ನಿರ್ಮಾಪಕ ಡಾಲಿ ಧನಂಜಯ್ ಈ ಚಿತ್ರ ನಿರ್ಮಿಸಿದ್ದಾರೆ.

ಅದಿತಿ ಸಾಗರ್

ನಟ ಮತ್ತು ಕಲಾನಿರ್ದೇಶಕ ಅರುಣ್ ಸಾಗರ್ ಅವರ ಮಗಳು ಈ ಚಿತ್ರದ ನಾಯಕಿ ಆಗಿದ್ದಾರೆ. ಹೌದು, ನಟಿ ಅದಿತಿ ಸಾಗರ್ ಈ ಚಿತ್ರದ ನಾಯಕಿ ಆಗಿದ್ದಾರೆ.

Adithi Sagar Poorna Mysore Daali Pictures Heggana Muddu Movie Updates

ಸೆಪ್ಟೆಂಬರ್-25 ಕ್ಕೆ ರಿಲೀಸ್

(ಚಿತ್ರ ಕೃಪೆ: ಹೆಗ್ಗಣ ಮುದ್ದು ಫಿಲ್ಮ್ ಟೀಮ್)

ಗಾಯಕಿ ಆಗಿ ಇವರು ಗುರುತಿಸಿಕೊಂಡಿರೋದು ಗೊತ್ತೇ ಇದೆ. ವೇದ ಚಿತ್ರದಲ್ಲಿ ಕನಕ ಅನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಶಿವಣ್ಣನ ಜೊತೆಗೆ ಮಗಳಾಗಿ ಅಭಿನಯಿಸಿ ಮೆಚ್ಚುಗೆ ಕೂಡ ಪಡೆದುಕೊಂಡಿದ್ದಾರೆ.

ಆದರೆ, ಪೂರ್ಣ ಪ್ರಮಾಣದ ನಾಯಕಿ ಆಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಡಾಲಿ ಧನಂಜಯ್ ಗೆಳೆಯ ಪೂರ್ಣ ಮೈಸೂರು ಈ ಸಿನಿಮಾದ ನಾಯಕರಾಗಿದ್ದಾರೆ. ಇವರೇ ಈ ಚಿತ್ರದ ನವದಂಪತಿಗಳಾಗಿದ್ದಾರೆ.

ಸೆಪ್ಟೆಂಬರ್-25 ಕ್ಕೆ ರಿಲೀಸ್

ಹೆಗ್ಗಣ ಮುದ್ದು ಈ ತಿಂಗಳು ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್-25 ರಂದು ನಾವು ಬರ್ತೀವಿ ಅಂತ ಚಿತ್ರ ತಂಡ ಅಧಿಕೃತವಾಗಿ ಹೇಳಿಕೊಂಡಿದೆ.

ಈ ಚಿತ್ರದ ಟ್ರೈಲರ್ ಮಂಗಳವಾರ ಸೆಪ್ಟೆಂಬರ್-15 ರಂದು ರಿಲೀಸ್ ಆಗಿದೆ. ನೋಡುಗರಿಗೆ ಅಷ್ಟೆ ಮಜಾ ಕೊಡುತ್ತಿದೆ. ನವದಂಪತಿಗಳ ಸುತ್ತವೇ ಈ ಚಿತ್ರ ಇದೆ ಅನ್ನುವುದನ್ನ ಈ ಟ್ರೈಲರ್ ಹೇಳುತ್ತದೆ.

ಇಬ್ಬರು ಮ್ಯೂಸಿಕ್ ಡೈರೆಕ್ಟರ್ಸ್

ಹೆಗ್ಗಣ ಮುದ್ದು ಚಿತ್ರಕ್ಕೆ ಇಬ್ಬರು ಮ್ಯೂಸಿಕ್ ಡೈರೆಕ್ಟರ್ ಇದ್ದಾರೆ. ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೆಶ್ ಸಂಗೀತ ಮಾಡಿದ್ದಾರೆ. ನಚಿಕೇತ್ ಬಲೆಕ್ಕಳ ಕ್ಯಾಮರಾವರ್ಕ್ ಮಾಡಿದ್ದಾರೆ.

ಹೆಗ್ಗಣ ಮುದ್ದು ಚಿತ್ರ ಟೈಟಲ್‌ನಿಂದ ಗಮನ ಸೆಳೆಯುತ್ತಿದೆ. ಟ್ರೈಲರ್ ಈ ಸೆಳೆತಕ್ಕೆ ಒಂದಷ್ಟು ಕಂಟೆಂಟ್ ಕೊಟ್ಟಿದೆ. ಈ ಸಿನಿಮಾದಲ್ಲಿ ಮಜಾ ಇದೆ ಅನ್ನುವ ಭರವಸೆಯನ್ನು ಕೊಟ್ಟಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed