Viral Story: ಅಮ್ಮ ಮಾತಾಡ್ತಿಲ್ಲ ಎಂದು 2 ಕಿಮೀ. ಪೊಲೀಸ್ ಸ್ಟೇಷನ್​ಗೆ ಓಡಿಕೊಂಡೇ ಬಂದ 8 ವರ್ಷದ ಬಾಲಕ | ಟ್ರೆಂಡಿಂಗ್ ಸುದ್ದಿ | ACTPnews

ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಐ)


Last Updated:

ಈ ಬಾಲಕ ಅಮ್ಮ ನನ್ನ ಜೊತೆ ಮಾತಾಡ್ತಿಲ್ಲ ಎಂದು 2 ಕಿಮೀ ದೂರದ ಪೊಲೀಸ್ ಸ್ಟೇಷನ್​ಗೆ ಓಡಿಕೊಂಡೇ ಬಂದಿದ್ದಾರೆ. ಅಷ್ಟಕ್ಕೂ ಆಘಿದ್ದೇನು?

ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಐ)
ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಐ)

ಇತ್ತೀಚೆಗೆ ತಮಿಳುನಾಡಿನಲ್ಲಿ (Tamil Nadu) ನಾಮಕ್ಕಲ್ ಜಿಲ್ಲೆಯ (Namakkal) ರಾಸಿಪುರಂ (Rasipuram) ಎಂಬಲ್ಲಿ 8 ವರ್ಷದ ಬಾಲಕನೊಬ್ಬ ತನ್ನ ಅಮ್ಮ ತನ್ನ ಜೊತೆ ಮಾತನಾಡ್ತಿಲ್ಲ ಎಂದು ಪೊಲೀಸ್ ಠಾಣೆಗೆ (Police Station) ಬಂದಿದ್ದಾನೆ.

ನಾಮಕ್ಕಲ್ ಜಿಲ್ಲೆಯ ರಾಸಿಪುರಂನ ನಾಲ್ಕನೇ ತರಗತಿ ಬಾಲಕನಾಗಿರುವ ಈತ ಮಲ್ಲೂರ್​ ಬಳಿ ಖಾಸಗಿ ಶಾಲೆಯ ವಿದ್ಯಾರ್ಥಿ. ಆತ ಹಿಂದಿನ ದಿನ ಬೆಳಗ್ಗೆ ಮನೆಯಲ್ಲಿ ಸೋಫಾ ಹಾಳು ಮಾಡಿದ್ದು, ಆ ನಂತರ ಅಮ್ಮ ಅವನಿಗೆ ಹೊಡೆದಿದ್ದರು ಎನ್ನಲಾಗಿದೆ.

ಸಂಜೆ ಶಾಲೆಯಿಂದ ಬಂದ ನಂತರವೂ ಅಮ್ಮ ಆತನಲ್ಲಿ ಮಾತನಾಡಿಲ್ಲ. ಟ್ಯೂಷನ್ ಮುಗಿಸಿ ಬಂದರೂ ಅಮ್ಮ ಮಾತನಾಡಿಲ್ಲ. ಕೊನೆಗೆ ಅಮ್ಮನ ಬಳಸಿ ಗೋಗರೆದು ಮಾತಾಡಮ್ಮಾ ಅಂದ್ರೆ ತಾಯಿ ಮಾತನಾಡಿಯೇ ಇಲ್ಲ.

ಒಂದು ಸಲ ಬಾಲಕ ಬ್ಯಾಟ್ ಹಿಡಿದು ಅಮ್ಮನ ಬಳಿ ಆಡಿಸುವಂತೆ ಹೋಗಿದ್ದಾನೆ. ಆಗ ಅವನ ತಾಯಿ ಪೊಲೀಸ್ ಸ್ಟೇಷನ್​​ಗೆ ಕಾಲ್ ಮಾಡುವಂತೆ ನಾಟಕ ಮಾಡಿದ್ದರು. ಹೆದರಿದ ಬಾಲಕ ನೀವು ದೂರು ಕೊಡೋದು ಬೇಡ, ನಾನೇ ಹೋಗ್ತೀನಿ ಎಂದು ಸುಮಾರು 2 ಕಿಮೀ ದೂರದ ರಾಸಿಪುರಂ ಪೊಲೀಸ್ ಠಾಣೆಗೆ ಬಂದಿದ್ದಾನೆ.

ಪೊಲೀಸ್ ಠಾಣೆಗೆ ಬಂದ ಬಾಲಕ ಅಮ್ಮ ತನ್ನಲ್ಲಿ ಮಾತನಾಡುತ್ತಿಲ್ಲ ಎಂದು ದೂರು ನೀಡಿದ್ದಷ್ಟೇ ಅಲ್ಲದೆ ಅಪ್ಪ ಚಾಕು ಹಿಡಿದು ಹೆದರಿಸಿದ್ದಾರೆ ಎಂದು ಆರೋಪಿಸಿದ್ದಾನೆ. ನಂತರ ಬಾಲಕನ ಪೋಸಕರು ಕೂಡಾ ಠಾಣೆಗೆ ಬಂದಿದ್ದಾರೆ. ಅವರ ಮಗ ಅವರ ಮಾತನ್ನು ಕೇಳುತ್ತಿಲ್ಲ ಎಂದು ದೂರು ಕೊಟ್ಟಿದ್ದಾರೆ. ನಂತರ ಪೊಲೀಸರು ಪೋಷಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಮಗುವನ್ನು ಕ್ರೂರವಾಗಿ ಹೆದರಿಸಿ ಬೈಯುವ ಬದಲು ಗೈಡ್ ಮಾಡಿ ಎಂದಿದ್ದಾರೆ. ತಮಾಷೆಗಾಗಿ ಮಾಡಿದ್ದು ಕೂಡಾ ಕೆಲವೊಮ್ಮೆ ಗಂಭೀರವಾಗಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ನಂತರ ಪೊಲೀಸರು ಬಾಲಕನಿಗೆ ಕೂಡಾ ಚೆನ್ನಾಗಿ ಓದುವಂತೆ ಹೇಳಿದ್ದಾರೆ. ಪೋಷಕರ ಮಾತು ಕೇಳದೆ ವರ್ತಿಸದಂತೆ ಉಪದೇಶಿಸಿದ್ದಾರೆ. ಕುಟುಂಬದ ಜೊತೆ ಕೌನ್ಸೆಲಿಂಗ್ ಮಾಡಿ ಬಾಲಕನನ್ನು ತಂದೆಯ ಜೊತೆ ಕಳಿಸಿದ್ದಾರೆ.

(Note: The faces of the child and his father should be blurred/covered before publishing.)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports