Viral News: ಟ್ರಾಫಿಕ್ ಫೈನ್ ಇಲ್ಲ ಅಂದ್ರೆ ಮಗಳನ್ನು ಕೊಡ್ತೀನಿ! ಭಾವೀ ಅಳಿಯನ ಮುಂದೆ ವಿಚಿತ್ರ ಬೇಡಿಕೆ ಇಟ್ಟ ಮಾವ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

No Pending Challans? ಮದುವೆ ಸಂಬಂಧ ಕುದುರಿಸುವಾಗ ಹುಡುಗ ಏನ್​ ಮಾಡ್ತಾನೆ? ಸಂಬಳ ಎಷ್ಟು? ಕುಟುಂಬದ ಹಿನ್ನೆಲೆ ಏನು? ಜೊತೆಗೆ ಜಾತಕ ಮ್ಯಾಚ್​ ಆಯ್ತಾ? ಹೀಗೆ… ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ವರನನ್ನು ಆಯ್ಕೆ ಮಾಡುವ ಮುನ್ನ ವಿಭಿನ್ನ ದಾರಿ ಹಿಡಿದಿದ್ದಾರೆ. ಅದುವೇ, ಭಾವಿ ಅಳಿಯನ ವಾಹನದ ಟ್ರಾಫಿಕ್ ಚಲನ್ ಹಿಸ್ಟರಿ!

News18
News18

ಕಾಕಿನಾಡ (ಆಂಧ್ರ ಪ್ರದೇಶ): ಮದುವೆ (Marriage) ಸಂಬಂಧ ಕುದುರಿಸುವಾಗ ಹುಡುಗ ಏನ್​ ಮಾಡ್ತಾನೆ? ಸಂಬಳ ಎಷ್ಟು? ಕುಟುಂಬದ ಹಿನ್ನೆಲೆ ಏನು? ಜೊತೆಗೆ ಜಾತಕ ಮ್ಯಾಚ್​ ಆಯ್ತಾ? ಹೀಗೆ… ಆದರೆ, ಇಲ್ಲೊಬ್ಬ ತಂದೆ (Father) ತನ್ನ ಮಗಳಿಗೆ (Daughter) ವರನನ್ನು (Groom) ಆಯ್ಕೆ ಮಾಡುವ ಮುನ್ನ ವಿಭಿನ್ನ ದಾರಿ ಹಿಡಿದಿದ್ದಾರೆ. ಅದುವೇ, ಭಾವಿ ಅಳಿಯನ (Son in Law) ವಾಹನದ ಟ್ರಾಫಿಕ್ ಚಲನ್ ಹಿಸ್ಟರಿ (Traffic Challan History)!

ಹೌದು, ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಒಬ್ಬ 55 ವರ್ಷದ ತಂದೆ, ತನ್ನ ಮಗಳಿಗೆ ವರನನ್ನು ಆಯ್ಕೆ ಮಾಡುವ ಮುನ್ನ ವಿಭಿನ್ನ ದಾರಿ ಹುಡುಕಿದ್ದಾರೆ. ಅದುವೇ, ಭಾವಿ ಅಳಿಯನ ವಾಹನದ ಟ್ರಾಫಿಕ್ ಚಲನ್ ಹಿಸ್ಟರಿ ಹೇಗಿದೆ? ಎಂದು ತಿಳಿಯಲು ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಇದನ್ನೂ ಓದಿ: Viral News: ಗಂಡಸರ ಗೋಳು ಕೇಳೋರು ಯಾರು? 50 ವರ್ಷಗಳಿಂದ ಈ ಹಳ್ಳಿಯಲ್ಲಿ ಮದ್ವೆನೇ ಆಗಿಲ್ವಂತೆ! ಕಾರಣವೇನು ಗೊತ್ತಾ?

ನ್ಯೂಸ್​ 18 ಇಂಗ್ಲೀಷ್​ ವರದಿ ಮಾಡಿರುವಂತೆ, ಕಾಕಿನಾಡ ಜಿಲ್ಲೆಯ 55 ವರ್ಷದ ವ್ಯಕ್ತಿ ತಮ್ಮ ಮಗಳಿಗೆ ಸೂಕ್ತ ವರನನ್ನು ಹುಡುಕಿದ ನಂತರ ಅಂತಿಮ ನಿರ್ಧಾರಕ್ಕೆ ಮುನ್ನ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮಂಗಳವಾರ ಅವರು ನೇರವಾಗಿ ರಾಯುಡುಪಾಲೆಂ ಟ್ರಾಫಿಕ್ ಪೊಲೀಸ್ ಠಾಣೆಗೆ ತೆರಳಿ, ಸಂಭಾವ್ಯ ಅಳಿಯನಿಗೆ ಸೇರಿದ ಕಾರು ಮತ್ತು ಬೈಕ್​ ವಾಹನದ ನೋಂದಣಿ ಸಂಖ್ಯೆಗಳನ್ನು ನೀಡಿ ಯಾವುದಾದರೂ ಟ್ರಾಫಿಕ್ ಚಲನ್ ಬಾಕಿ ಇದೆಯೇ ಎಂದು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಯಾಕಂದ್ರೆ, “ವರನ ರಸ್ತೆ ನಡವಳಿಕೆಯಿಂದ ಆತನ ಜವಾಬ್ದಾರಿ ಅರಿಯಬಹುದು” ಎಂಬುದು ಅವರ ನಂಬಿಕೆಯಾಗಿತ್ತು.

ಮಗಳಿಗಾಗಿ ಏಕಾಂಗಿ ಹೋರಾಟ ನಡೆಸಿದ ತಂದೆ!

ಪೊಲೀಸರ ಮಾಹಿತಿ ಪ್ರಕಾರ, ಈ ತಂದೆ ಹಲವು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡು ಮಗಳನ್ನು ಒಬ್ಬಂಟಿಯಾಗಿ ಸಾಕಿದ್ದಾರೆ. ಕಷ್ಟದ ನಡುವೆಯೂ ಮಗಳನ್ನು ಓದಿಸಿ ಇಂಜಿನಿಯರ್ ಆಗಿ ರೂಪಿಸಿದ್ದಾರೆ. ಮಗಳ ಭವಿಷ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವ ಅವರು, ಕೇವಲ ಮಾತುಕತೆ ಅಥವಾ ಸಾಂಪ್ರದಾಯಿಕ ವಿಚಾರಣೆಗೆ ಸೀಮಿತವಾಗದೆ ಪ್ರಾಯೋಗಿಕವಾಗಿ ವರನನ್ನು ಅಳೆಯಲು ನಿರ್ಧರಿಸಿದ್ದರು.

ರಸ್ತೆ ನಡವಳಿಕೆ ವ್ಯಕ್ತಿತ್ವದ ಕನ್ನಡಿ!

ತಂದೆ ಪೊಲೀಸರಿಗೆ ಹೇಳಿದ ಪ್ರಕಾರ, ಅತಿವೇಗದ ಚಾಲನೆ, ಕುಡಿದು ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್, ಪದೇ ಪದೇ ನಿಯಮ ಉಲ್ಲಂಘನೆ ಮಾಡುವುದು ಇವೆಲ್ಲವೂ ವ್ಯಕ್ತಿಯ ತಾಳ್ಮೆ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ತೋರಿಸುತ್ತವೆ. ಮದುವೆಯಂತಹ ಜೀವನಪರ್ಯಂತದ ಬಾಂಧವ್ಯಕ್ಕೆ ಇಂತಹ ಗುಣಗಳು ಅತ್ಯಗತ್ಯ ಎಂದು ಭಾವಿಸಿದ ಅವರು, ಫೈನ್​ ಚಲನ್ ಇತಿಹಾಸವೇ ವರನ ನೈಜ ಚಿತ್ರಣ ನೀಡಬಹುದು ಎಂದು ಪೊಲೀಸರ ಮೊರೆ ಹೋಗಿದ್ದರು.

ಪರಿಶೀಲನೆಯಲ್ಲಿ ಕಂಡುಬಂದಿದ್ದು ಏನು?

ರಾಯುಡುಪಾಲೆಂ ಟ್ರಾಫಿಕ್ ಪೊಲೀಸರು ತಕ್ಷಣ ವಾಹನಗಳ ನೋಂದಣಿ ಸಂಖ್ಯೆಗಳನ್ನು ಈ-ಚಲನ್ ವ್ಯವಸ್ಥೆಯಲ್ಲಿ ಪರಿಶೀಲಿಸಿದರು. ಪರಿಶೀಲನೆಯಲ್ಲಿ ಎರಡೂ ವಾಹನಗಳ ಮೇಲೆ ಯಾವುದೇ ಬಾಕಿ ಚಲನ್ ಇಲ್ಲ, ಹಾಗೆಯೇ ರಾಶ್ ಡ್ರೈವಿಂಗ್ ಅಥವಾ ಡ್ರಂಕನ್ ಡ್ರೈವ್ ನಂತಹ ಗಂಭೀರ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಈ ಫಲಿತಾಂಶ ತಂದೆಗೆ ಸಮಾಧಾನ ತಂದಿತು.

ಒಟ್ಟಾರೆಯಾಗಿ, ಈ ಘಟನೆ ಮದುವೆ ಪೂರ್ವದ ಹಿನ್ನೆಲೆ ಪರಿಶೀಲನೆಗೆ ಹೊಸ ಆಯಾಮ ನೀಡಿದೆ. ಇಂದು ಡಿಜಿಟಲ್ ಯುಗದಲ್ಲಿ ಟ್ರಾಫಿಕ್ ಉಲ್ಲಂಘನೆಗಳ ದಾಖಲೆಗಳು ಸುಲಭವಾಗಿ ಲಭ್ಯವಿದ್ದು, ಅದನ್ನು ವ್ಯಕ್ತಿಯ ಜವಾಬ್ದಾರಿಯ ಸೂಚಕವಾಗಿ ಬಳಸಬಹುದು ಎಂಬ ಚರ್ಚೆ ಆರಂಭವಾಗಿದೆ. ಹಾಗಾಗಿ, ಕಾಕಿನಾಡದ ಈ ತಂದೆಯ ನಿರ್ಧಾರ ಕೇವಲ ತನ್ನ ಮಗಳ ಸುರಕ್ಷತೆಯ ಕಾಳಜಿಯಲ್ಲ, ಸಮಾಜದಲ್ಲಿ ರಸ್ತೆ ಶಿಸ್ತಿನ ಮಹತ್ವವನ್ನು ಎತ್ತಿ ಹಿಡಿದ ಉದಾಹರಣೆಯೂ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed