Vinod Prabhakar: ಟ್ರೈಲರ್ ಲಾಂಚ್ ಇವೆಂಟ್​ಗೆ ಗೈರು! ವಿನೋದ್ ಪ್ರಭಾಕರ್ ಈಗ ಹೇಗಿದ್ದಾರೆ? | Vinod Prabhakar not attended trailer launch event how he is doing now | | ACTPnews

ಟೈಗರ್ ಪ್ರಭಾಕರ್ ನೆನೆದು ಎಮೋಷನ್ ಆದ ವಿನೋದ್ ಪ್ರಭಾಕರ್!


Last Updated:

Vinod Prabhakar: ಬಾಲರಾಮನ ಆ ದಿನಗಳು ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್​ಗೆ ವಿನೋದ್ ಪ್ರಭಾಕರ್ ಅವರು ಗೈರಾಗಿದ್ದರು. ಅವರೀಗ ಹೇಗಿದ್ದಾರೆ? ಆರೋಗ್ಯ ಹೇಗಿದೆ?

ವಿನೋದ್ ಪ್ರಭಾಕರ್
ವಿನೋದ್ ಪ್ರಭಾಕರ್

ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿ ವಿನೋದ್‌ ರಾಜ್ (Vinod Raj) ಅಭಿನಯದ ಬಲರಾಮನ ದಿನಗಳು ಸಿನಿಮಾದ ಟ್ರೈಲರ್ ಲಾಂಚ್ (Trailer Launch) ಕಾರ್ಯಕ್ರಮ ನಡೆದಿದೆ. ಅನಾರೋಗ್ಯದಿಂದಾಗಿ (Illness) ನಟ ವಿನೋದ್ ಪ್ರಭಾಕರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚೈತನ್ಯ, ಕಳೆದೊಂದು ವಾರದಿಂದ ಪ್ರಚಾರದಲ್ಲಿ ವಿನೋದ್ ಬ್ಯುಸಿಯಾಗಿದ್ದರು. ಈ ಹಿನ್ನೆಲೆ ಸುಸ್ತಾಗಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.

ಬಲರಾಮನ ದಿನಗಳು ಟ್ರೇಲರ್ ಲಾಂಚ್ ಗೆ ವಿನೋದ್ ಪ್ರಭಾಕರ್‌ ಗೈರಾಗಿದ್ದಾರೆ. ಈಗ ವಿನೋದ್ ಪ್ರಭಾಕರ್ ಆರೋಗ್ಯವಾಗಿದ್ದಾರೆ. ಕಳೆದ ಒಂದು ವಾರದಿಂದ ಪ್ರಚಾರ ಮಾಡಿದ್ದರು. ಇದರಿಂದಾಗಿ 4 ಕೆಜಿ ಸಣ್ಣಗಾಗಿದ್ದು ಇದರಿಂದಾಗಿ ವಿಪರೀತ ಸುಸ್ತಾಗಿದ್ದಾರೆ ಎಂದು ಚಿತ್ರದ‌ ನಿರ್ದೇಶಕ ಕೆನ್ ಎನ್ ಚೈತನ್ಯ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಟ ವಿನೋದ್ ಪ್ರಭಾಕರ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಎರಡು ದಿನ ಹಿಂದೆ ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು.

ಇದನ್ನೂ ಓದಿ: Love & War Movie: ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಸೆಟ್​​ನಲ್ಲಿ ಕೆಲಸಗಾರ ಸಾವು, 50 ಲಕ್ಷ ನೀಡಿ ಎಂದ FWICE

ಮನೆಯಲ್ಲಿ ಇದ್ದ ವೇಳೆಯೇ ನಟ ವಿನೋದ್ ಪ್ರಭಾಕರ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಯಲ್ಲಿ ಇದ್ದ ವೇಳೆಯೇ ನಟ ವಿನೋದ್ ಪ್ರಭಾಕರ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನಾಗರಭಾವಿಯ ಖಾಸಗಿ ಆಸ್ಪತ್ರೆಯ ಚಿಕಿತ್ಸೆ ಪಡೆದಿದ್ದು, ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು.

ಇದನ್ನೂ ಓದಿ: Vijay-Trisha Breakup: ವಿಜಯ್​ನ ಅನ್​ಫಾಲೋ ಮಾಡಿದ ತ್ರಿಶಾ! ಗಿಲ್ಲಿ ಜೋಡಿ ಬ್ರೇಕಪ್?

ಇನ್ನು ಇತ್ತೀಚಿಗೆ ನಟ ವಿನೋದ್ ಪ್ರಭಾಕರ್ ತಮ್ಮ ಬಲರಾಮ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹೀಗಿರುವಾಗ ಇದೀಗ ಇದ್ದಕಿದ್ದ ಹಾಗೆ ನಟನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಕೆ.ಎಂ ಚೈತನ್ಯ ಸ್ಪಷ್ಟನೆ ನೀಡಿದ್ದಾರೆ. ನಮ್ಮ ನೆಚ್ಚಿನ ಹೀರೋ ವಿನೋದ್ ಪ್ರಭಾಕರ್, ಅವರ ಹೆಮ್ಮೆಯ ಸಿನಿಮಾ , ನಮ್ಮ ‘ಬಲರಾಮನ ದಿನಗಳು’. ಇದರ ಪ್ರಚಾರ ಮಾಡಲು ಅತಿ ಹುರುಪಿನಿಂದ ಕೆಲಸ ಮಾಡಿದ್ದಾರೆ.

ನಿದ್ದೆ ಕೆಟ್ಟು ಅನೇಕ ದಿನ ಅವರ ಆರೋಗ್ಯ ಕೆಟ್ಟು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ, ನಮ್ಮ ಪ್ರಚಾರ ಕೆಲಸಗಳಲ್ಲಿ ವಾಪಸ್ಸು ಅದೇ ಹುರುಪಿನಲ್ಲಿ ಬರುತ್ತಿದ್ದಾರೆ. ಆತಂಕ ಪಡುವ ವಿಶಯ ಇಲ್ಲ ಎಂದು ತಿಳಿಸಿದ್ದಾರೆ.

ವರದಿ: ಗೀತಾ ಹಾಸನ್, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed