Last Updated:
Vinod Prabhakar: ಬಾಲರಾಮನ ಆ ದಿನಗಳು ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ಗೆ ವಿನೋದ್ ಪ್ರಭಾಕರ್ ಅವರು ಗೈರಾಗಿದ್ದರು. ಅವರೀಗ ಹೇಗಿದ್ದಾರೆ? ಆರೋಗ್ಯ ಹೇಗಿದೆ?
ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ನಲ್ಲಿ ವಿನೋದ್ ರಾಜ್ (Vinod Raj) ಅಭಿನಯದ ಬಲರಾಮನ ದಿನಗಳು ಸಿನಿಮಾದ ಟ್ರೈಲರ್ ಲಾಂಚ್ (Trailer Launch) ಕಾರ್ಯಕ್ರಮ ನಡೆದಿದೆ. ಅನಾರೋಗ್ಯದಿಂದಾಗಿ (Illness) ನಟ ವಿನೋದ್ ಪ್ರಭಾಕರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚೈತನ್ಯ, ಕಳೆದೊಂದು ವಾರದಿಂದ ಪ್ರಚಾರದಲ್ಲಿ ವಿನೋದ್ ಬ್ಯುಸಿಯಾಗಿದ್ದರು. ಈ ಹಿನ್ನೆಲೆ ಸುಸ್ತಾಗಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.
ಬಲರಾಮನ ದಿನಗಳು ಟ್ರೇಲರ್ ಲಾಂಚ್ ಗೆ ವಿನೋದ್ ಪ್ರಭಾಕರ್ ಗೈರಾಗಿದ್ದಾರೆ. ಈಗ ವಿನೋದ್ ಪ್ರಭಾಕರ್ ಆರೋಗ್ಯವಾಗಿದ್ದಾರೆ. ಕಳೆದ ಒಂದು ವಾರದಿಂದ ಪ್ರಚಾರ ಮಾಡಿದ್ದರು. ಇದರಿಂದಾಗಿ 4 ಕೆಜಿ ಸಣ್ಣಗಾಗಿದ್ದು ಇದರಿಂದಾಗಿ ವಿಪರೀತ ಸುಸ್ತಾಗಿದ್ದಾರೆ ಎಂದು ಚಿತ್ರದ ನಿರ್ದೇಶಕ ಕೆನ್ ಎನ್ ಚೈತನ್ಯ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಟ ವಿನೋದ್ ಪ್ರಭಾಕರ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಎರಡು ದಿನ ಹಿಂದೆ ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು.
ಮನೆಯಲ್ಲಿ ಇದ್ದ ವೇಳೆಯೇ ನಟ ವಿನೋದ್ ಪ್ರಭಾಕರ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಯಲ್ಲಿ ಇದ್ದ ವೇಳೆಯೇ ನಟ ವಿನೋದ್ ಪ್ರಭಾಕರ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನಾಗರಭಾವಿಯ ಖಾಸಗಿ ಆಸ್ಪತ್ರೆಯ ಚಿಕಿತ್ಸೆ ಪಡೆದಿದ್ದು, ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು.
ಇನ್ನು ಇತ್ತೀಚಿಗೆ ನಟ ವಿನೋದ್ ಪ್ರಭಾಕರ್ ತಮ್ಮ ಬಲರಾಮ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹೀಗಿರುವಾಗ ಇದೀಗ ಇದ್ದಕಿದ್ದ ಹಾಗೆ ನಟನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಕೆ.ಎಂ ಚೈತನ್ಯ ಸ್ಪಷ್ಟನೆ ನೀಡಿದ್ದಾರೆ. ನಮ್ಮ ನೆಚ್ಚಿನ ಹೀರೋ ವಿನೋದ್ ಪ್ರಭಾಕರ್, ಅವರ ಹೆಮ್ಮೆಯ ಸಿನಿಮಾ , ನಮ್ಮ ‘ಬಲರಾಮನ ದಿನಗಳು’. ಇದರ ಪ್ರಚಾರ ಮಾಡಲು ಅತಿ ಹುರುಪಿನಿಂದ ಕೆಲಸ ಮಾಡಿದ್ದಾರೆ.
ನಿದ್ದೆ ಕೆಟ್ಟು ಅನೇಕ ದಿನ ಅವರ ಆರೋಗ್ಯ ಕೆಟ್ಟು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ, ನಮ್ಮ ಪ್ರಚಾರ ಕೆಲಸಗಳಲ್ಲಿ ವಾಪಸ್ಸು ಅದೇ ಹುರುಪಿನಲ್ಲಿ ಬರುತ್ತಿದ್ದಾರೆ. ಆತಂಕ ಪಡುವ ವಿಶಯ ಇಲ್ಲ ಎಂದು ತಿಳಿಸಿದ್ದಾರೆ.
ವರದಿ: ಗೀತಾ ಹಾಸನ್, ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು
Bangalore,Karnataka













