Last Updated:
ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು (ಜು.17): ಕನ್ನಡದ ‘ಬಾಸ್’ (Boss) ಸಿನಿಮಾ ಬಿಡುಗಡೆ ತಡೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ಇಂದೇ (ಜುಲೈ 17) ಸಿನಿಮಾ ಅನ್ನು ರಾಜ್ಯದಾದ್ಯಂತ ಬಿಡುಗಡೆ ಆಗ್ತಿದೆ. ಹೈಕೋರ್ಟ್ ಮಹತ್ವದ ತೀರ್ಪಿನಿಂದ ವಿಜಯಲಕ್ಷ್ಮಿ ದರ್ಶನ್ಗೆ ಭಾರೀ ಹಿನ್ನಡೆಯಾಗಿದೆ.
ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ವಿಜಯಲಕ್ಷಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು. ಬಾಸ್ ಸಿನಿಮಾ ರೇಣುಕಾಸ್ವಾಮಿ ಕೊಲೆಯ ಕಥೆಯಂತೆ ಇದೆ ಎಂದು ಸಿನಿಮಾ ರಿಲೀಸ್ಗೆ ತಡೆ ನೀಡುವಂತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಪೀಠ, ವಾದ-ವಿವಾದದ ಬಳಿಕ ಅರ್ಜಿ ವಜಾಗೊಳಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಅಕ್ರಮ (Illegality) ಅಥವಾ ಕಾನೂನುಬಾಹಿರ ದೋಷ (Perversity) ಕಂಡುಬಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.
ಬಾಸ್ ಸಿನಿಮಾದ ಪ್ರೊಡಕ್ಷನ್ ಕಂಪನಿಗೂ ಹೈಕೋರ್ಟ್ ಎಚ್ಚರಿಕೆ ನೀಡಿದೆ. ದರ್ಶನ್ ಕೇಸ್ ಅಥವಾ ದರ್ಶನ್ ಕುಟುಂಬಕ್ಕೆ ಸಿನಿಮಾಗೆ ಸಂಬಂಧವಿಲ್ಲ, ನೈಜ್ಯ ಘಟನೆ ಆಧಾರಿತ ಅಲ್ಲ ಎಂದು 30 ಸೆಕೆಂಡುಗಳ ಡಿಸ್ಕ್ಲೈಮರ್ ಹಾಕೋದು ಕಡ್ಡಾಯ ಎಂದು ತಿಳಿಸಿದೆ














