Prajwal Devaraj: ಕೊರಗಜ್ಜ ಸನ್ನಿಧಾನದಲ್ಲಿ ಪ್ರಜ್ವಲ್ ದೇವರಾಜ್; ನವಿಲು ನರ್ತನ ಕಂಡು ಬೆರಗಾದ ಕರಾವಳಿ ಹೀರೋ! | | ACTPnews

prajwal devaraj delighted to witness peacock dance at koragajja temple


ನವಿಲು ನಾಟ್ಯ…

ಪ್ರಜ್ವಲ್ ದೇವರಾಜ್ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ. ಒಂದಾದ್ಮೇಲೆ ಒಂದು ಅನ್ನುವ ಹಾಗೆ ದೇವರ ದರುಶನ ಪಡೆಯುತ್ತಲೇ ಇದ್ದಾರೆ.
ನವಿಲು ನಾಟ್ಯ ಕಂಡು ಬೆರಗು

ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಮಾಡಿ ಬಂದಿದ್ದಾರೆ. ಅದಕ್ಕೂ ಮೊದಲು ಶೃಂಗೇರಿಯ ಶಾರದಾಂಬೆಯ ದರ್ಶನ ಮಾಡಿದ್ದಾರೆ. ಇದೀಗ ಕೊರಗಜ್ಜನ ಸನ್ನಿಧಾನಕ್ಕೂ ಪ್ರಜ್ವಲ್ ದೇವರಾಜ್ ಹೋಗಿ ಬಂದಿದ್ದಾರೆ.

ನವಿಲು ನಾಟ್ಯ ಕಂಡು ಬೆರಗು

ಶೃಂಗೇರಿ ಹಾಗೂ ಹೊರನಾಡು ಬೆನ್ನಲ್ಲಿಯೇ ಪ್ರಜ್ವಲ್ ದೇವರಾಜ್ ಕೊರಜ್ಜನ ಸನ್ನಿಧಾನಕ್ಕೆ ಹೋಗಿದ್ದಾರೆ. ಕೊರಗಜ್ಜನ ದರ್ಶನ ಕೂಡ ಮಾಡಿದ್ದಾರೆ.

ಕರಾವಳಿ-24 ರಂದು ಚಿತ್ರ ರಿಲೀಸ್

ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಚಿತ್ರ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಜುಲೈ-24 ರಂದು ಇದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ.

ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅದ್ಭುತವಾಗಿಯೇ ನಟಿಸಿದ್ದಾರೆ. ಚಿತ್ರ ಜೀವನದಲ್ಲಿ ಪ್ರಜ್ವಲ್ ಇಂತಹ ಪಾತ್ರವನ್ನ ಮಾಡಿಯೇ ಇಲ್ಲ. ಆ ರೀತಿಯ ಪಾತ್ರವನ್ನೆ ಪ್ರಜ್ವಲ್ ದೇವರಾಜ್ ಇಲ್ಲಿ ಮಾಡಿದ್ದಾರೆ.

ಪ್ರಜ್ವಲ್ ಧ್ವನಿ ಇರುತ್ತಾ

ಈ ಒಂದು ಪ್ರಶ್ನೆ ಇದ್ದೇ ಇದೆ. ಕಾರಣ, ಕರಾವಳಿ ಡಬ್ಬಿಂಗ್ ವಿವಾದ ಮುಗಿದೆ. ಕೊಡಬೇಕಿರೋ ದುಡ್ಡನ್ನ ಕರಾವಳಿ ನಿರ್ಮಾಪಕರು ಪ್ರಜ್ವಲ್‌ ದೇವರಾಜ್‌ಗೆ ಕೊಟ್ಟಿದ್ದಾರೆ.

prajwal devaraj delighted to witness peacock dance at koragajja temple

ನವಿಲು ನಾಟ್ಯ…

ಆದರೆ, ಇದರ ಬೆನ್ನಲ್ಲಿಯೇ ನೀವು ಚಿತ್ರ ಪ್ರಚಾರಕ್ಕೆ ಬರೋದು ಬೇಡ, ನಿಮ್ಮ ಡಬ್ಬಿಂಗ್ ಕೂಡ ಬೇಡ ಅಂತಲೇ ಹೇಳಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿವೆ. ಹಾಗಾಗಿಯೇ ಪ್ರಜ್ವಲ್ ದೇವರಾಜ್ ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿಲ್ಲ ಅನ್ನುವ ಮಾತುಗಳೇ ಹೆಚ್ಚಾಗಿ ಇವೆ ನೋಡಿ.

ಕರಾವಳಿ ಡೈರೆಕ್ಟರ್

ಕರಾವಳಿ ಚಿತ್ರವನ್ನ ಗುರುದತ್ತ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದ ನಿರ್ಮಾಪಕರಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ. ಇವರ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ನಟಿ ಸಂಪದ ಜೋಡಿ ಆಗಿದ್ದಾರೆ.

ಕರಾವಳಿ ಪ್ರೀಮಿಯರ್ ಶೋ

ಕರಾವಳಿ ಚಿತ್ರದ ಪ್ರೀಮಿಯರ್ ಶೋ ಕೂಡ ಪ್ಲಾನ್ ಆಗಿದೆ. ರಾಜ್ ಬಿ ಶೆಟ್ಟಿ ಈ ಚಿತ್ರದ ಪ್ರೀಮಿಯರ್ ಶೋ ಮಾಹಿತಿ ಕೊಟ್ಟಿದ್ದಾರೆ. ಇದರ ವಿವರ ಈ ರೀತಿ ಇದೆ.

19-ಮಂಗಳೂರು

20-ಶಿವಮೊಗ್ಗ

21 ದಾವಣಗೆರೆ

22 ಮೈಸೂರು

23 ಬೆಂಗಳೂರಿನಲ್ಲಿ ಈ ಚಿತ್ರದ ಪ್ರೀಮಿಯರ್ ಶೋಗಳಿವೆ. ಜುಲೈ-24 ರಂದು ಈ ಕರಾವಳಿ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.ಇನ್ನುಳಿದಂತೆ ಈ ಚಿತ್ರ ಒಂದು ಹಂತಕ್ಕೆ ನಿರೀಕ್ಷೆ ಹುಟ್ಟುಹಾಕಿದೆ.

ಸು ಫ್ರಮ್ ಸೋ ಚಿತ್ರ ಕಳೆದ ವರ್ಷ ಜುಲೈ-25 ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಜುಲೈ-24 ರಂದು ತೆರೆ ಕಾಣುತ್ತಿದೆ. ಅತಿ ದೊಡ್ಡ ಗೆಲುವಿನ ನಿರೀಕ್ಷೆಯಲ್ಲೂ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed