ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಯಾಣ್, ವಿಜಯ್ ಅವರ ಪಕ್ಷವು ಕಟೌಟ್ಗಳು ಮತ್ತು ಹೊಲೊಗ್ರಾಮ್ಗಳನ್ನು ಬಳಸಿ ಗೆದ್ದಿತು. ಆದರೆ ನಾನು 15 ವರ್ಷಗಳ ಕಾಲ ಬೀದಿಗಳಲ್ಲಿ ಅಲೆದಾಡಿದ್ದೇನೆ ಎಂದು ಹೇಳಿದರು.
ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾದ ನಂತರ ಪವನ್ ಕಲ್ಯಾಣ್ ಮತ್ತು ವಿಜಯ್ ನಡುವಿನ ಹೋಲಿಕೆಗಳು ಆನ್ಲೈನ್ನಲ್ಲಿ ಭಾರೀ ಜೋರಾಗಿದೆ. ಪವನ್ ತಮ್ಮ ದೀರ್ಘ ರಾಜಕೀಯ ಪ್ರಯಾಣದ ಬಗ್ಗೆಯೂ ಯೋಚಿಸಿದರು. ಪಕ್ಷವನ್ನು ನಡೆಸಲು ಲಕ್ಷಾಂತರ ಜನರ ನಿರೀಕ್ಷೆಗಳ ಬಗ್ಗೆ ಆಳವಾದ ತಿಳುವಳಿಕೆ ಅಗತ್ಯವಿದೆ ಎಂದು ಹೇಳಿದರು.
ಪವನ್ ಕಲ್ಯಾಣ್ ಅವರ ಹೇಳಿಕೆಗಳು ಈ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿ “ನಾನು ಇತ್ತೀಚಿನ ದಿನಗಳಲ್ಲಿ ತಮಿಳು ರಾಜಕೀಯವನ್ನು ನೋಡುತ್ತಿದ್ದೇನೆ, ಅವರು ಅದನ್ನು ತುಂಬಾ ನಿರಾತಂಕವಾಗಿ ಸುಲಭವಾಗಿ ಸಾಧಿಸಿದರು. ನನಗೆ ಅಸೂಯೆ ಅನಿಸಿತು.
ಅವರು ಕಟೌಟ್ಗಳು ಮತ್ತು ಹೊಲೊಗ್ರಾಮ್ಗಳನ್ನು ಬಳಸಿ ಸಂತೋಷದಿಂದ ಸುಲಭವಾಗಿ ಗೆದ್ದರು. ನಾನು 15 ವರ್ಷಗಳ ಕಾಲ ಬೀದಿಗಳಲ್ಲಿ ಓಡಾಡಿದೆ ಎಂದು ನಕ್ಕಿದ್ದಾರೆ. ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಮಾತಿನ ಕೊನೆಯಲ್ಲಿ ಸೇರಿಸಿದರು.
ಆದರೆ ನಾವು ಮಾನವೀಯವಾಗಿ ಯೋಚಿಸಬೇಕು. ಏನನ್ನಾದರೂ ಮಾಡೋಕೆ, ಹೇಳೋಕೆ ನಿಮಗೆ ತುಂಬಾ ಜ್ಞಾನ ಬೇಕು. ನಾನು 15 ವರ್ಷಗಳ ಕಾಲ ಏಕೆ ಇಷ್ಟೊಂದು ಕಷ್ಟಪಟ್ಟೆ? ಏಕೆಂದರೆ ಪಕ್ಷವನ್ನು ನಡೆಸಲು ನೀವು ಲಕ್ಷಾಂತರ ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಆಂಧ್ರಪ್ರದೇಶ ರಾಜಕೀಯದಲ್ಲಿ ಬದಲಾವಣೆ ತರುವ ಭರವಸೆಯೊಂದಿಗೆ ಪವನ್ ಕಲ್ಯಾಣ್ 2014 ರಲ್ಲಿ ಜನ ಸೇನಾ ಪಕ್ಷವನ್ನು ಪ್ರಾರಂಭಿಸಿದರು. ಆದಾಗ್ಯೂ, ವರ್ಷಗಳ ಕಾಲ ಪಕ್ಷವು ತನ್ನ ಪ್ರಭಾವ ಬೀರಲು ಹೆಣಗಾಡಿತು. ಚುನಾವಣೆಯಲ್ಲಿ ಪದೇ ಪದೇ ಹಿನ್ನಡೆ ಅನುಭವಿಸಿತು. 2019 ರಲ್ಲಿ ಪವನ್ ಸ್ವತಃ ಸ್ಪರ್ಧಿಸಿದ ಎರಡೂ ವಿಧಾನಸಭಾ ಸ್ಥಾನಗಳನ್ನು ಕಳೆದುಕೊಂಡರು. ಆದರೆ ಜನ ಸೇನಾ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಎನ್ ಚಂದ್ರಬಾಬು ನಾಯ್ಡು ಮತ್ತು ತೆಲುಗು ದೇಶಂ ಪಕ್ಷದ ನೇತೃತ್ವದ ಮೈತ್ರಿಕೂಟದೊಂದಿಗೆ ಕೈಜೋಡಿಸಿದ ನಂತರ ಅವರ ರಾಜಕೀಯ ಭವಿಷ್ಯ ಬದಲಾಯಿತು. 2024 ರ ಆಂಧ್ರಪ್ರದೇಶ ಚುನಾವಣೆಯಲ್ಲಿ ಈ ಒಕ್ಕೂಟವು ಭರ್ಜರಿ ಜಯ ಸಾಧಿಸಿತು, ಪವನ್ ಕಲ್ಯಾಣ್ ರಾಜ್ಯದ ಉಪಮುಖ್ಯಮಂತ್ರಿಯಾಗಲು ದಾರಿ ಮಾಡಿಕೊಟ್ಟಿತು.
ಪವನ್ ಕಲ್ಯಾಣ್ ಅವರ ಅಣ್ಣ ತೆಲುಗು ಸೂಪರ್ಸ್ಟಾರ್ ಚಿರಂಜೀವಿ ಕೂಡ ಇತ್ತೀಚೆಗೆ ವಿಜಯ್ಗೆ ಮುಖ್ಯಮಂತ್ರಿಯಾದಾಗ ತಮ್ಮ ಶುಭಾಶಯಗಳನ್ನು ತಿಳಿಸಿದರು. ಚಿರಂಜೀವಿ ಒಂದು ದಿನ ಮುಂಚಿತವಾಗಿ ಆತ್ಮೀಯ ಮತ್ತು ಸೌಹಾರ್ದಯುತ ಫೋನ್ ಕರೆ ಮಾಡಿದ್ದರು ಎಂದು ಹೇಳಲಾಗಿದೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಿಜಯ್ ಅವರನ್ನು ಅಭಿನಂದಿಸಿದ ಚಿರಂಜೀವಿ, ಜನ-ಕೇಂದ್ರಿತ ಆಡಳಿತದ ಮೂಲಕ ಅವರು ಜನರ ಹೃದಯದಲ್ಲಿ ಉಳಿಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಂಡ ತಿಳಿಸಿದೆ.
ಲೆಜೆಂಡ್ ನಟ-ರಾಜಕಾರಣಿ ಎಂಜಿಆರ್ ಒಮ್ಮೆ ಪಡೆದಂತೆ ವಿಜಯ್ ಜನಸಾಮಾನ್ಯರ ಪ್ರೀತಿಯನ್ನು ಪಡೆಯಬೇಕೆಂದು ಅವರು ಹಾರೈಸಿದ್ದಾರೆ ಎಂದು ಹೇಳಲಾಗಿದೆ. ಜನ ನಾಯಗನ್ಗೆ ಸಂಬಂಧಿಸಿದ ಪೈರಸಿ ವಿಷಯದ ಸಮಯದಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಚಿರಂಜೀವಿಗೆ ವಿಜಯ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ಹೇಳಲಾಗಿದೆ.
ಚಿರಂಜೀವಿ ಅವರ ಇತ್ತೀಚಿನ ಬಿಡುಗಡೆಯಾದ ಮನ ಶಂಕರ ವರ ಪ್ರಸಾದ್ ಗರು ಚಿತ್ರವನ್ನು ವಿಜಯ್ ವೀಕ್ಷಿಸಿದ್ದರು. ಸಿನಿಮಾ ನೋಡಿ ಸಂತೋಷಪಟ್ಟರು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ವರ್ಷಗಳ ಮೊದಲು, 2024 ರಲ್ಲಿ ವಿಜಯ್ ಟಿವಿಕೆ ಅನ್ನು ಪ್ರಾರಂಭಿಸಿದರು. ನಂತರ ಪಕ್ಷವು 60 ರ ದಶಕದಿಂದ ತಮಿಳುನಾಡು ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಎರಡು ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಳನ್ನು ಸೋಲಿಸಿತು.












