Rahmat Shah: ಅಫ್ಘಾನ್ ಪರ 125 ಏಕದಿನ ಪಂದ್ಯಗಳನ್ನು ಆಡಿದ ಸ್ಟಾರ್ ಆಟಗಾರ ನಿಧನ? ಅಭಿಮಾನಿಗಳನ್ನು ಚಿಂತೆಗೀಡು ಮಾಡಿದ ವೈರಲ್​​​​​​​​​​​ ಪೋಸ್ಟ್! | ಕ್ರೀಡಾ ಸುದ್ದಿ | ACTPnews

ರಹಮತ್ ಶಾ


Last Updated:

ಸೋಶಿಯಲ್ ಮೀಡಿಯಾದಲ್ಲಿ ಅಫ್ಘಾನ್ ಸ್ಟಾರ್ ಕ್ರಿಕೆಟಿಗ ನಿಧನರಾಗಿದ್ದಾರೆ ಎಂಬ ಪೋಸ್ಟ್​​ಗಳು ಹರಿದಾಡುತ್ತಿವೆ. ಈ ಒಂದು ಪೋಸ್ಟ್ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಆದರೆ, ಇದು ನಿಜವಲ್ಲ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ.

ರಹಮತ್ ಶಾ
ರಹಮತ್ ಶಾ

ಅಫ್ಘಾನಿಸ್ತಾನ (Afghanistan) ದ ಸ್ಟಾರ್ ಕ್ರಿಕೆಟಿಗ (Cricketer) ರಹಮತ್ ಶಾ (Rahmat Shah) ನಿಧನರಾಗಿದ್ದಾರೆ ಎಂದು ಹೇಳುವ ಪೋಸ್ಟ್ (Post) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಕ್ರಿಕೆಟ್ (Cricket) ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಅಫ್ಘಾನಿಸ್ತಾನದ ಆಲ್‌ರೌಂಡರ್ ಕರೀಮ್ ಜನತ್ (Karim Janat) ಇನ್‌ಸ್ಟಾಗ್ರಾಮ್‌ (Instagram) ನಲ್ಲಿ ರಹಮತ್ ಶಾ ಅವರ ಫೋಟೋ ಜೊತೆಗೆ ಸಂತಾಪ ಸಂದೇಶವನ್ನು ಹಂಚಿಕೊಂಡಾಗ ಗೊಂದಲ ಉಂಟಾಗಿದ್ದು, ಅನುಭವಿ ಬ್ಯಾಟರ್ ನಿಧನರಾಗಿದ್ದಾರೆ ಎಂದು ಅಭಿಮಾನಿಗಳು ನಂಬುವಂತೆ ಮಾಡಿದೆ. ಈ ಪೋಸ್ಟ್‌ನಲ್ಲಿ ರಹಮತ್ ಶಾ ಅವರ ಫೋಟೋ ಮತ್ತು ಪಾಷ್ಟೋ (Pashto) ಭಾಷೆಯಲ್ಲಿ ಭಾವನಾತ್ಮಕ ಸಂದೇಶವಿತ್ತು. ಇದು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.

ಅಫ್ಘಾನ್ ಕ್ರಿಕೆಟಿಗ ರಹಮತ್ ಶಾ ಸಾವಿನ ವದಂತಿಗಳು ಸಂಪೂರ್ಣವಾಗಿ ಸುಳ್ಳು. ನಿಧನರಾದವರು ರಹಮತ್ ಶಾ ಅಲ್ಲ, ಅವರ ತಾಯಿ ಎಂದು ತಿಳಿದುಬಂದಿದೆ. ಪಾಷ್ಟೋ ಭಾಷೆಯಲ್ಲಿ ಬರೆಯಲಾದ ಕರೀಮ್ ಜನತ್ ಅವರ ಸಂತಾಪ ಸಂದೇಶವು ರಹಮತ್ ಶಾ ಅವರಿಗೆ ಅಲ್ಲ, ಅವರ ತಾಯಿಗೆ.

ಪೋಸ್ಟ್ ವೈರಲ್ ಆಗಿದ್ದೇಗೆ?

ಕರೀಮ್ ಅವರ ಪೋಸ್ಟ್‌ನ ಸ್ವಯಂಚಾಲಿತ ಇನ್‌ಸ್ಟಾಗ್ರಾಮ್ ಅನುವಾದವು, “ಅಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ದಿಗ್ಗಜ ರಹಮತ್ ಶಾ ಅವರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಯಿತು. ಈ ದೊಡ್ಡ ದುರಂತವು ನನಗೆ ಮತ್ತು ಎಲ್ಲಾ ಕ್ರಿಕೆಟ್ ಪ್ರಿಯರಿಗೆ ಆಘಾತವನ್ನುಂಟು ಮಾಡಿದೆ. ಒಬ್ಬ ಕ್ರಿಕೆಟಿಗನಾಗಿ, ರಹಮತ್ ಶಾ ಮತ್ತು ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

ಅಸಲಿ ಸ್ಟೋರಿ ಏನು?

ಕರೀಮ್ ಅವರ ಪೋಸ್ಟ್ ಅನ್ನು ಗೂಗಲ್‌ನಲ್ಲಿ ಅನುವಾದಿಸಿದಾಗ, ಸತ್ಯ ಬೇರೇನೆಂದು ತಿಳಿದುಬಂದಿದೆ. ಮೂಲ ಪೋಸ್ಟ್‌ನಲ್ಲಿ, “ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಟಗಾರ ರಹಮತ್ ಶಾ ಅವರ ಗೌರವಾನ್ವಿತ ತಾಯಿಯ ನಿಧನದ ಸುದ್ದಿ ನನಗೆ ಬಂದಿದೆ. ಈ ದೊಡ್ಡ ದುರಂತವು ನನ್ನನ್ನು ಮತ್ತು ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ದುಃಖಿಸಿದೆ. ನನ್ನ ಪರವಾಗಿ ಮತ್ತು ಒಬ್ಬ ಕ್ರಿಕೆಟಿಗನಾಗಿ, ರಹಮತ್ ಶಾ ಮತ್ತು ಅವರ ಕುಟುಂಬಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅಲ್ಲಾಹನು ಅವರ ಆತ್ಮಕ್ಕೆ ಸ್ವರ್ಗವನ್ನು ನೀಡಲಿ. ಅವರ ಕುಟುಂಬಕ್ಕೆ ಈ ಆಳವಾದ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಬರೆದಿರುವುದು ತಿಳಿದುಬಂದಿದೆ.

ರಹಮತ್ ಶಾ ಕ್ರಿಕೆಟ್ ವೃತ್ತಿಜೀವನ

ಅನುಭವಿ ಬ್ಯಾಟರ್ ರಹಮತ್ ಶಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪರ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಪಂದ್ಯದ ವೇಳೆ ಅವರು ಗಾಯಗೊಂಡು ನಿವೃತ್ತರಾದರು. ಅವರು ಅಘ್ಫಾನಿಸ್ತಾನ ತಂಡದ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಮನ್ನಣೆ ತಂದುಕೊಟ್ಟ ರಹಮತ್ ಶಾ, 11 ಟೆಸ್ಟ್‌ಗಳು, 125 ಏಕದಿನಗಳು ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ. ಈ ಅದ್ಭುತ ವೃತ್ತಿಜೀವನದಲ್ಲಿ, ಅವರು 5,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Rahmat Shah: ಅಫ್ಘಾನ್ ಪರ 125 ಏಕದಿನ ಪಂದ್ಯಗಳನ್ನು ಆಡಿದ ಸ್ಟಾರ್ ಆಟಗಾರ ನಿಧನ? ಅಭಿಮಾನಿಗಳನ್ನು ಚಿಂತೆಗೀಡು ಮಾಡಿದ ವೈರಲ್​​​​​​​​​​​ ಪೋಸ್ಟ್!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed